ದುಮ್ಮ ರೇವಣ್ಣಪ್ಪ ಗೌಡರಿಗೆ ವಿಶ್ವ ಶ್ರೀ ಶರಣ ಪ್ರಶಸ್ತಿ

0 50


ಹೊಸನಗರ: ತಾಲ್ಲೂಕಿನ ದುಮ್ಮ ರೇವಣ್ಣಪ್ಪಗೌಡರವರಿಗೆ ವಿಶ್ವ ದರ್ಶನ ನ್ಯಾಷನಲ್ ಐಕಾನ್ ಅವಾರ್ಡ್ ಸಂಸ್ಥೆಯವರು ವಿಶ್ವ ಶ್ರೀ ಶರಣ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.


ವಿಶ್ವದರ್ಶನ ಕನ್ನಡ ದಿನಪತ್ರಿಕೆಯ ಸಂಪಾದಕ ಡಾ|| ಎಸ್.ಎಸ್.ಪಾಟೇಲ್‌ರವರ ನೇತೃತ್ವದಲ್ಲಿ ಧಾರವಾಡದ ರಂಗಾಯಣದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ದುಮ್ಮ ರೇವಣ್ಣಪ್ಪ ಗೌಡರ ಪರಿಚಯ:

ದುಮ್ಮ ಗ್ರಾಮದ ಭೀಮನಕೆರೆ ಗೌಡರ ಮನೆತನದ ದಂಪತಿಗಳ ಪುಣ್ಯ ಗರ್ಭದಲ್ಲಿ ಜನಿಸಿದ ಇವರು ಗ್ರಾಮ ಪಂಚಾಯಿತಿ ಮಂಡಲ ಪ್ರಧಾನರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಹೊಸನಗರ ಜೆ.ಎಂಎಫ್‌ಸಿ ನ್ಯಾಯಾಲಯದಲ್ಲಿ 10 ವರ್ಷ ಅದಾಲತ್ ಸದಸ್ಯರಾಗಿ ರೆಡ್ ಕ್ರಾಸ್ ಸಮಿತಿಯ ಡೈರೆಕ್ಟರ್ ಆಗಿ, ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಗೌರವಾಧ್ಯಕ್ಷರಾಗಿ, ಮಾನವ ಹಕ್ಕುಗಳ ಮತ್ತು ಭ್ರಷ್ಟಚಾರ ವಿರೋಧಿ ಸಂಸ್ಥೆಯ ಅಧ್ಯಕ್ಷರಾಗಿ, ಪೊಲೀಸ್ ವೆಲ್ಫೇರ್ ಕರ್ನಾಟಕ ರಾಜ್ಯ ಆರ್ಗನೈಜೇಷನ್ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಉತ್ತಮ ರೈತರೆನಿಸಿಕೊಂಡು ಹಲವಾರು ದೇವಸ್ಥಾನಗಳ ಧರ್ಮದರ್ಶಿಗಳಾಗಿ ಸೇವೆ ಸಲ್ಲಿಸುತ್ತಿದ್ದು ಮೇಲಾಗಿ ಸಾಮಾಜಿಕ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಶ್ರೇಷ್ಠ ಹೆಸರು ಮಾಡಿದ್ದಾರೆ ಇವರ ಜೀವನ ಸರಳ ಕಾಯಕ ಜೀವಿಗಳು, ನಾಡಿನ ಶರಣರ ಜೊತೆಗೆ ಉತ್ತಮ ಭಾಂದವ್ಯ ಹೊಂದಿರುವ ಇವರ ಸಾಧನೆ ಗುರುತಿಸಿ ವಿಶ್ವ ಶ್ರೀ ಶರಣ ಪ್ರಶಸ್ತಿಗೆ ಅರ್ಹರಾಗಿದ್ದಾರೆ.


ಅಭಿನಂದನೆ:

ಇವರಿಗೆ ವಿಶ್ವ ದರ್ಶನ ಐಕಾನ್ ಆವಾರ್ಡ್ ಸಂಸ್ಥೆಯವರು ಡಿ.ವಿ.ರೇವಣ್ಣಪ್ಪ ಗೌಡರಿಗೆ ನೀಡಿರುವ ವಿಶ್ವ ಶ್ರೀ ಶರಣ ರತ್ನ ಪ್ರಶಸ್ತಿ ನೀಡಿದು ಇವರನ್ನು ಹೊಸನಗರ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಗಂಗಾಧರಯ್ಯ ಹಾಗೂ ಶರಣ ಸಾಹಿತ್ಯ ಪರಿಷತ್ ಸದಸ್ಯರು ಅಭಿನಂದಿಸಿದ್ದಾರೆ.

Leave A Reply

Your email address will not be published.

error: Content is protected !!