ಬಿಬಿಎ ವಿಭಾಗದಲ್ಲಿ ಕು|| ಸಿಂಧುಗೆ 4ನೇ ರ‍್ಯಾಂಕ್

0 328

ರಿಪ್ಪನ್‌ಪೇಟೆ: ಕುವೆಂಪು ವಿಶ್ವವಿದ್ಯಾಲಯದ 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಡೆಸಿದ ಅಂತಿಮ ವರ್ಷದ ಪದವಿ ಪರೀಕ್ಷೆಗಳಲ್ಲಿ ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿನಿ ಕು|| ಸಿಂಧು ಕೆ. 4ನೇ  ರ‍್ಯಾಂಕ್ ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದ್ದು ಪ್ರಾಚಾರ್ಯ ಚಂದ್ರಶೇಖರ ಮತ್ತು ಉಪನ್ಯಾಸಕ ವೃಂದ ಅಭಿನಂದಿಸಿದ್ದಾರೆ.

ಕುವೆಂಪು ವಿಶ್ವವಿದ್ಯಾಲಯದಿಂದ 2023ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ನಡೆದ ಪರೀಕ್ಷೆಯಲ್ಲಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿಬಿಎ ವಿಭಾಗದ ವಿದ್ಯಾರ್ಥಿನಿ ಕು|| ಸಿಂಧು ಕೆ. ಶೇ. 93.71 ಅಂಕ ಗಳಿಸಿ 4ನೇ ರ‍್ಯಾಂಕ್ ಪಡೆದಿದ್ದಾರೆಂದು ಪ್ರಾಚಾರ್ಯರು ವಿವರಿಸಿದರು.

ಹರತಾಳು ಗ್ರಾಮದ ಕಣ್ಣನ್ ಮತ್ತು ಅಂಬಿಕಾ ದಂಪತಿ ಪುತ್ರಿಯಾದ ಸಿಂಧು ಕೆ. ಅಭೂತ ಪೂರ್ವ ಸಾಧನೆಗೆ ಗ್ರಾಮೀಣ ಪ್ರದೇಶ ರಿಪ್ಪನ್‌ಪೇಟೆ ಕಾಲೇಜ್ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದ್ದಾರೆಂದು ಶಾಸಕ ಗೋಪಾಲಕೃಷ್ಣ ಬೇಳೂರು ಪ್ರಾಂಶುಪಾಲರು ಉಪನ್ಯಾಸಕರು ಮತ್ತು ಸಿಡಿಸಿ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

Leave A Reply

Your email address will not be published.

error: Content is protected !!