ವಿಜೃಂಭಣೆಯೊಂದಿಗೆ ನಾಗರಹಳ್ಳಿ ಕೂಳೆ ಪಂಚಮಿ ಜಾತ್ರಾ ಮಹೋತ್ಸವ ಸಂಪನ್ನ

0 457

ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀ ನಾಗೇಂದ್ರ ಸ್ವಾಮಿಯ ಕೂಳೆ ಪಂಚಮಿ ಜಾತ್ರಾ ಮಹೋತ್ಸವವು ವಿಜೃಂಭಣೆಯೊಂದಿಗೆ ಸಂಪನ್ನಗೊಂಡಿತು.

ವರ್ಷದಲ್ಲಿ ಮಳೆಗಾಲ ಮತ್ತು ಬೇಸಿಗೆಯಲ್ಲಿ ಆಚರಿಸಲಾಗುವ ನಾಗರಹಳ್ಳಿ ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತಲಿನ ಭಕ್ತಾಧಿಗಳು ಸೇರಿದಂತೆ ಹೊರ ಜಿಲ್ಲೆ, ತಾಲ್ಲೂಕುಗಳಿಂದ ಸಹಸ್ರ ಸಂಖ್ಯೆಯಲ್ಲಿ ಭಕ್ತ ಸಮೂಹ ಹರಿದು ಬಂದಿತು.

ಈ ಜಾತ್ರೆಯ ವಿಶೇಷವೆಂದರೆ ಮದುವೆ ಆಗದವರು ಮತ್ತು ಸಂತಾನ ಫಲ ಇಲ್ಲದವರು ಹೀಗೆ ವಿವಿಧ ಆಶೋತ್ತರಗಳನ್ನು ಈಡೇರಿಸುವಂತೆ ಪ್ರಾರ್ಥಿಸಿ ಬರುವ ಭಕ್ತರ ಸಂಖ್ಯೆಯೇ ಹೆಚ್ಚು ಕೆಲವರು ಮಳೆಗಾಲದಲ್ಲಿ ಮಾಡಿಕೊಂಡ ಹರಕೆ ಈಡೇರಿದ ಪರಿಣಾಮ ಹರಕೆ ಸಮರ್ಪಿಸಿ ಹಣ್ಣು-ಕಾಯಿ ನೈವೇದ್ಯವನ್ನು ಸಲ್ಲಿಸಿ ತಮ್ಮ ಭಕ್ತಿಯನ್ನು ಶ್ರದ್ದಾ-ಭಕ್ತಿಯಿಂದ ದೇವರಿಗೆ ಅರ್ಪಿಸಿ ದರ್ಶನಾಶೀರ್ವಾದವನ್ನು ಪಡೆದರು.

ದೇವಸ್ಥಾನದ ಪ್ರದಾನ ಅರ್ಚಕರು ಮುಂಜಾನೆಯಿಂದಲೇ ದೇವರಿಗೆ ವಿಶೇಷ ಅಲಂಕಾರ ಪೂಜೆ ಸಲ್ಲಿಸಿ ಮಹಾಮಂಗಳಾರತಿಯನ್ನು ನೆರವೇರಿಸಿ ಭಕ್ತರಿಗೆ ತೀರ್ಥ ಪ್ರಸಾದದೊಂದಿಗೆ ಸಾಮೂಹಿಕ ಆನ್ನಸಂತರ್ಪಣೆ ಮಾಡಿದರು.

ದೇವಸ್ಥಾನದ ಧರ್ಮದರ್ಶಿ ಗೇರುಗಲ್ಲು ಸತೀಶ್‌ಭಟ್, ಹೆಚ್.ಎಂ.ವರ್ತೇಶ್‌ಗೌಡ, ವೀರಭದ್ರಪ್ಪ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಗ್ರಾಮಸ್ಥರು ಹಾಜರಿದ್ದರು.

Leave A Reply

Your email address will not be published.

error: Content is protected !!