ರಿಪ್ಪನ್‌ಪೇಟೆಯಲ್ಲಿ ಮೊಳಗಿದ ಕನ್ನಡದ ಕಹಳೆ | ಕಲಾಕೌಸ್ತುಭ ಕನ್ನಡ ಸಂಘದಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ

0 638

ರಿಪ್ಪನ್‌ಪೇಟೆ: ಇಲ್ಲಿನ ಕಲಾಕೌಸ್ತೂಭ ಕನ್ನಡ ಸಂಘದ 30ನೇ ವರ್ಷದ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಕನ್ನಡ ಭುವನೇಶ್ವರಿ ದೇವಿಯ ಭಾವಚಿತ್ರದೊಂದಿಗೆ ಮಕ್ಕಳ ಭುವನೇಶ್ವರಿ ವೇಷಭೂಷಣ ಶಾಲಾ ವಿದ್ಯಾರ್ಥಿಗಳ ಮೆರವಣಿಗೆ ಜನಾಕರ್ಷಣೆಗೊಂಡಿತು.

ಕನ್ನಡ ಭುವನೇಶ್ವರಿ ಮೆರವಣಿಗೆಗೆ ಪಿಎಸ್ಐ ಪ್ರವೀಣ್‌ಕುಮಾರ್ ಕನ್ನಡ ಬಾವುಟ ಎತ್ತಿ ಹಿಡಿಯುವ ಮೂಲಕ ಚಾಲನೆ ನೀಡುತ್ತಿದ್ದಂತೆ ಮೆರವಣಿಗೆ ಚಂಡೆಯವರು ಚಂಡೆ ಬಾರಿಸುತ್ತಾ ಸಿದ್ದಿವಿನಾಯಕ ದೇವಸ್ಥಾನದ ಬಳಿಯಿಂದ ಹೊರಡುತ್ತಿದ್ದಂತೆ ಶಾಲಾ ಮಕ್ಕಳ ಪಥಸಂಚಲನ ಕನ್ನಡ ಜಯಘೋಷಣೆಯೊಂದಿಗೆ ಕನ್ನಡ ಡಿಂಡಿಂಮ ಕಲರವ ಮೊಳಗಿತು.

ಕನ್ನಡ ದ್ವಜಾರೋಹಣವನ್ನು ಮಾಜಿ ಆಧ್ಯಕ್ಷ ಅಣ್ಣಪ್ಪ ನೆರೆವೇರಿಸಿದರು.
ವಿನಾಯಕ ವೃತ್ತದ ಮೂಲಕ ತೀರ್ಥಹಳ್ಳಿ, ಹೊಸನಗರ, ಸಾಗರ ರಸ್ತೆಯ ಮೂಲಕ ಗಣಪತಿ ದೇವಸ್ಥಾನದ ಹಿಂಭಾಗದಲ್ಲಿ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಆಯೋಜಿಸಲಾದ ಸಭಾ ಕಾರ್ಯಕ್ರಮವನ್ನು ಪಿಎಸ್ಐ ಪ್ರವೀಣ್‌ಕುಮಾರ್ ಉದ್ಘಾಟಿಸಿ ಮಾತನಾಡಿ, ಕನ್ನಡ ಮಾತೃಭಾಷೆಯ ಕಲಿಕೆಯೊಂದಿಗೆ ಮಕ್ಕಳಾಡುವ ಮಾತಿನಿಂದ ಸಮಾಜದಲ್ಲಿ ಭಾಷೆಯ ಜ್ಞಾನ ವೃದ್ಧಿಯಾಗುವುದರೊಂದಿಗೆ ಕನ್ನಡ ನಾಡು ನುಡಿಯ ಉಳಿಸುವಿಕೆಯಲ್ಲಿ ಮಕ್ಕಳ ಪಾತ್ರ ಹಿರಿದಾಗಿದೆ ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷೆ ಲೀಲಾ ಉಮಾಶಂಕರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿ ಆಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ದೀಪಾ ಸುಧೀರ್, ಅಶ್ವಿನಿ ರವಿಶಂಕರ್, ವಿನೋಧ, ಸುಂದರೇಶ್, ದಾನಮ್ಮ, ಪದ್ಮ ಉಮಾ ಸುರೇಶ್, ಎಂ.ಬಿ.ಮಂಜುನಾಥ ಎಂ.ಸುರೇಶ್‌ಸಿಂಗ್, ಆರ್.ಟಿ.ಗೋಪಾಲ, ಮಹಾಲಕ್ಷ್ಮಿ, ಅಣ್ಣಪ್ಪ, ಗೀತಾ, ರೇಖಾ ರವಿ, ಅಶ್ವಿನಿ, ಶೈಲಾ ಆರ್.ಪ್ರಭು, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ತಾಲ್ಲೂಕೀ ಪಂಚಾಯ್ತಿ ಮಾಜಿ ಅಧ್ಯಕ್ಷೆ ನಾಗರತ್ನ ದೇವರಾಜ್, ಕೃಷ್ಣೋಜಿರಾವ್, ಬಿ.ರಾಮಚಂದ್ರ, ರಂಜನ, ವನಮಾಲ, ಲಕ್ಷ್ಮಿ ಶ್ರೀನಿವಾಸ್‌ ಆಚಾರ್, ಮುರುಳಿ, ಸುಧೀರ್, ರಾಮುಬಳೆಗಾರ್, ರಾಜುಭಂಡಾರಿ, ಮಂಜುನಾಥ ಗವಟೂರು ಇನ್ನಿತರರು ಇದ್ದರು.

ಪ್ರಣತಿ ಪ್ರಾರ್ಥಿಸಿದರು. ಉಮಾಸುರೇಶ್ ಸ್ವಾಗತಿಸಿದರು. ಎಂ.ಸುರೇಶ್‌ಸಿಂಗ್ ನಿರೂಪಿಸಿದರು. ಶೈಲಾ ಆರ್.ಪ್ರಭು ವಂದಿಸಿದರು.

Leave A Reply

Your email address will not be published.

error: Content is protected !!