ರಾಮ, ಹನುಮರ ಹೆಸರು ಹೇಳಿದರೆ ಬಡವರ ಹೊಟ್ಟೆ ತುಂಬಲ್ಲ ; ಸಚಿವ ಮಧು ಬಂಗಾರಪ್ಪ

0 271

ರಿಪ್ಪನ್‌ಪೇಟೆ: ಬಿಜೆಪಿಯವರು ರಾಮ, ಹನುಮರ ಹೆಸರು ಹೇಳಿಕೊಂಡು ತಮ್ಮ ಬಳಿ ಧರ್ಮ ಅನುತ್ತಾರೆ ಅದರಿಂದ ಬಡವರ ಹೊಟ್ಟೆ ತುಂಬಲ್ಲ ಎಂದು ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ರಿಪ್ಪನ್‌ಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಹಸಿದವರ ಹೊಟ್ಟೆ ತುಂಬುವ ಪಕ್ಷ ಕಾಂಗ್ರೆಸ್ ಪಕ್ಷವೆಂದ ಅವರು ರಾಜ್ಯದ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ ನೇತೃತ್ವದ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಯಿಂದಾಗಿ ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಫಲಾನುಭವಿಗಳ ಮತಗಳು ಹೆಚ್ಚು ಬರುತ್ತವೆಂಬುದಕ್ಕೆ ಪ್ರಚಾರ ಸಭೆಯಲ್ಲಿ ಸೇರುತ್ತಿರುವ ಅಪಾರ ಸಂಖ್ಯೆಯಲ್ಲಿ ಸೇರುತ್ತಿರುವ ಜನಬೆಂಬಲವೇ ಸಾಕ್ಷಿಯಾಗಿದೆ ಎಂದರು.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೀತಾ ಸ್ಪರ್ಧೆಯ ಬಗ್ಗೆ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆಂಬ ಮಾಜಿ ಉಪ ಮುಖ್ಯಮಂತ್ರಿಗಳ ಆರೋಪಕ್ಕೆ ಪ್ರತಿಕ್ರಿಯೆಸಿದ ಸಚಿವರು ಆವರ ಹೇಳಿಕೆಯನ್ನು ಕಡೆಗಣಿಸಿ ಆರೋಪದ ಬಗ್ಗೆ ನಿರ್ಲಕ್ಷ್ಯ ವ್ಯಕ್ತಪಡಿಸಿದರು.

ಹೆದ್ದಾರಿಪುರ ಸರ್ಕಾರಿ ಶಾಲೆಯ ಕೆಲ ಕಿಡಿಗೇಡಿ ವಿದ್ಯಾರ್ಥಿಗಳಿಂದ ಪೀಠೋಪಕರಣ ಧ್ವಂಸಗೊಳಿಸಿರುವುದರ ಬಗ್ಗೆ ಏನು ಕ್ರಮ ಕೈಗೊಳ್ಳುತ್ತಿರಾ ? ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ವಿದ್ಯಾರ್ಥಿಗಳ ಬಗ್ಗೆ ಜಾಗೃತರಾಗಿ ಸದಾ ಮೈಯಲ್ಲ ಕಣ್ಣಾಗಿ ನೋಡಿಕೊಳ್ಳುವುದು ಶಿಕ್ಷಕರುಗಳ ಮತ್ತು ಎಸ್.ಡಿ.ಎಂ.ಸಿ.ಯವರ ಜವಾಬ್ದಾರಿಯಾಗಿದೆ. ಇದಕ್ಕೆ ಸರ್ಕಾರ ಸಚಿವರ ಕಡೇ ಬೆರಳು ಮಾಡುವುದು ಸರಿಯಾದ ಕ್ರಮನಾ ಹೇಳಿ ? ಎಂದು ಸಚಿವರು ಪತ್ರಕರ್ತರನ್ನು ಮರುಪ್ರಶ್ನಿಸಿದರು.

ಬೆಂಗಾವಲು ಪಡೆ ಅಡ್ಡಿ, ಆಕ್ರೋಶ

ಶಿವಮೊಗ್ಗ ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಗೀತಾ ಶಿವರಾಜ್‌ಕುಮಾರ್ ರವರು ತೀರ್ಥಹಳ್ಳಿಯಿಂದ ಸಾಗರಕ್ಕೆ ತೆರಳುವ ಮಾರ್ಗದ ರಿಪ್ಪನ್‌ಪೇಟೆಯಲ್ಲಿ ಭಾನುವಾರ ರಾತ್ರಿ ಬೃಂದಾವನ ಹೋಟೆಲ್ ಬಳಿ ಮಂಡಕ್ಕಿ ಮೆಣಸಿನಕಾಯಿ ಬೋಂಡಾ ಸವಿಯಲು ಬಂದಂತಹ ಸಮಯದಲ್ಲಿ ಶಿವಮೊಗ್ಗ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ತಮ್ಮ ಚುನಾವಣಾ ಪ್ರಚಾರದಲ್ಲಿ ಮತದಾರರು ಭೇಟಿ ಮಾಡಲು ಹೋಗುವುದಕ್ಕೆ ಬೆಂಗಾವಲು ಪಡೆ ಅಡ್ಡಿಪಡಿಸಿದರ ಬಗ್ಗೆ ಮತದಾರರು ತೀವ್ರ ಆಕ್ರೋಶಗೊಂಡು ಚುನಾವಣೆಗೂ ಮುನ್ನವೇ ನಿಮ್ಮ ಬೆಂಗಾವಲು ಪಡೆ ತಮ್ಮನ್ನು ಭೇಟಿ
ಮಾಡಲು ಬಿಡುವುದಿಲ್ಲ ಇನ್ನೂ ಗೆದ್ದ ಮೇಲೆ ತಮ್ಮ ಭೇಟಿ ಹೇಗೆ ಸಾರ್ ? ಎಂದು ಹಲವಾರು ಮತದಾರರು ಮಾಧ್ಯಮದವರ ಮುಂದೆ ಹರಿಹಾಯ್ದರು. ತಕ್ಷಣ ಶಾಸಕ ಗೋಪಾಲಕೃಷ್ನ ಬೇಳೂರು ಬೆಂಗಾವಲು ಪಡೆಯವರಿಗೆ ಗೊತ್ತಿಲ್ಲ ಇನ್ನೂ ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುವುದಾಗಿ ಹೇಳಿ ಸಮದಾನಪಡಿಸಿದರು. ಆಗ ಅಲ್ಲಿಯೇ ಇದ್ದ ಹಲವು ಮತದಾರರು ತೀವ್ರ ಆಕ್ರೋಶ ವ್ಯಕ್ತಪಡಿಸುವ ಮೂಲಕ ಅಭ್ಯರ್ಥಿಯ ಬೆಂಗಾವಲಿನವರ ನಡೆತೆಯ ಬಗ್ಗೆ ತೀವ್ರ ಅಸಮದಾನಕ್ಕೆ ಕಾರಣವಾಯಿತು.

ಈ ಸಂದರ್ಭದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು, ಲೋಕಸಭಾ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್, ಚಿತ್ರನಟ ಶಿವರಾಜ್‌ಕುಮಾರ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಪಕ್ಷದ ಮುಖಂಡರಾದ ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರುಮೌಳಿಗೌಡ, ಗಣಪತಿ, ಡಿ.ಈ.ಮಧುಸೂದನ್, ಆಸಿಫ್, ರಮೇಶ್ ಫ್ಯಾನ್ಸಿ, ಉಲ್ಲಾಸ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ ಇನ್ನಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!