ಆಟ ಮತ್ತು ಪಾಠ ಜೀವನ ಸಾರ್ಥಕತೆಗೆ ರಹದಾರಿ ; ಶ್ರೀಗಳು

0 34

ರಿಪ್ಪನ್‌ಪೇಟೆ: ಆಟ ಮತ್ತು ಪಾಠ ಜೀವನದ ಸಾರ್ಥಕತೆಗೆ ರಹದಾರಿ. ಜ್ಞಾನ ಮತ್ತು ಕ್ರಿಯೆಗಳ ಸಂಗಮವೇ ಕ್ರೀಡೆ. ಅಂಗವಿಕಲನಾಗಿದ್ದರೂ ಕೂಡಾ ಸಾಧನೆ ಮಾಡಲು ಅಡ್ಡಿಯಾಗದು. ಸೋಲು ಗೆಲುವು ಮುಖ್ಯವಾಗದೇ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯವಾಗಿದೆ ಎಂದು ಆನಂದಪುರ ಮುರುಘಾಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜ್ ಕ್ರೀಡಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಶಾಲಾ ಶಿಕ್ಷಣ ಇಲಾಖೆ ಎಸ್.ಜೆ.ಜಿ.ವಿದ್ಯಾಪೀಠ, ಬೆಕ್ಕಿನಕಲ್ಮಠ ಸಮೂಹ ಸಂಪನ್ಮೂಲ ಕೇಂದ್ರ ಶ್ರೀಬಸವೇಶ್ವರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕ್ಲಸ್ಟರ್‌ ಮಟ್ಟದ 14 ವರ್ಷ ವಯೋಮಿತಿಯೊಳಗಿನ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ 2023-24 ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕ್ರೀಡಾ ಧ್ವಜಾರೋಹಣವನ್ನು ಗ್ರಾ.ಪಂ.ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ ನೆರವೇರಿಸಿದರು. ಕ್ಷೇತ್ರ ಶೀಕ್ಷಣಾಧಿಕಾರಿ ಹೆಚ್.ಆರ್.ಕೃಷ್ಣಮೂರ್ತಿ ಕ್ರೀಡಾಕೂಟದ ಸಮಾರಂಭವನ್ನು ಉದ್ಘಾಟಿಸಿದರು.
ಕ್ರೀಡಾ ಜ್ಯೋತಿಯನ್ನು ಬಾಳೂರು ಗ್ರಾಮ ಪಂಚಾಯ್ತಿ ಆಧ್ಯಕ್ಷ ಬಿ.ಶ್ರೀನಿವಾಸ ಆಚಾರ್ ಸ್ವೀಕರಿಸಿದರು.

ಈ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಬಸವೇಶ್ವರ ಪ್ರೌಢಶಾಲೆಯ ಎಸ್.ಡಿ.ಎಂ.ಸಿ.ಆಧ್ಯಕ್ಷ ಉಮೇಶ್ ಕುಂಬ್ಳೆ ವಹಿಸಿದ್ದರು.
ಗ್ರಾ.ಪಂ.ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಎಲ್.ವೈ.ದಾನೇಶಪ್ಪ, ಮಂಜುಳಾ ಕೇತಾರ್ಜಿರಾವ್, ಆಶ್ವಿನಿ, ದೀಪಾ ಸುಧೀರ್, ಎನ್.ಚಂದ್ರೇಶ್, ಜಗದೀಶ ಕಾಗಿನಲ್ಲಿ, ಬಾಲಚಂದ್ರರಾವ್, ಎಸ್.ಪಿ.ನಾಗರಾಜ್, ರಂಗನಾಥ ಇನ್ನಿತರರು ಪಾಲ್ಗೊಂಡಿದ್ದರು.

ಸಿಆರ್.ಪಿ.ಮಂಜುನಾಥ ಸ್ವಾಗತಿಸಿದರು. ಚಂದ್ರಪ್ಪ ನಿರೂಪಿಸಿದರು. ಗುರುಕಿರಣ್ ವಂದಿಸಿದರು.

Leave A Reply

Your email address will not be published.

error: Content is protected !!