ವ್ಯಕ್ತಿ ಆಧಾರಿತ ಚುನಾವಣೆಯಲ್ಲ ರಾಷ್ಟ್ರೀಯತೆಯ ಚುನಾವಣೆ ; ಬಿ.ವೈ. ರಾಘವೇಂದ್ರ

0 244

ರಿಪ್ಪನ್‌ಪೇಟೆ : ಈ ಭಾರಿಯಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ ವ್ಯಕ್ತಿ ಆಧಾರಿತ ಚುನಾವಣೆಯಲ್ಲ ರಾಷ್ಟ್ರೀಯತೆಯ ಚುನಾವಣೆ ಎಂದು ಸಂಸದ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.

ರಿಪ್ಪನ್‌ಪೇಟೆಯಲ್ಲಿ ಲೋಕಸಭಾ ಚುನಾವಣೆಯ ಬಿಜೆಪಿ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿ, ಕೇಂದ್ರದಿಂದ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ತರಲಾಗಿರುವ ಅನುದಾನದ ಕಾಮಗಾರಿಗಳ ಕುರಿತು ಮತದಾರರಿಗೆ ಮುಟ್ಟಿಸಬೇಕು ಹಾಗೂ ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಯೋಜನೆಗಳನ್ನು ಅನುಷ್ಟಾನಗೊಳಿಸುವುದರೊಂದಿಗೆ ಭಾಗ್ಯಲಕ್ಷ್ಮಿ ಬಾಂಡ್ ಹೀಗೆ ಹತ್ತು ಹಲವು ಜನಹಿತ ಕಾರ್ಯಗಳನ್ನು ಮಾಡುವುದರೊಂದಿಗೆ ಅಭಿವೃದ್ಧಿ ಪಡಿಸಲಾಗಿದ್ದು ಕಾರ್ಯಕರ್ತರು ಮತದಾರರಿಗೆ ಮನ ಮುಟ್ಟಿಸುವ ಕೆಲಸ ಮಾಡಬೇಕು ಎಂದು ಹೇಳಿದ ಅವರು, ನಮ್ಮ ಸರ್ಕಾರದ ಯೋಜನೆಯಾದ ಜಲಜೀವನ ಮಿಷನ್ ಕಾಮಗಾರಿಯನ್ನು ಈ ಹಿಂದೆ ಪ್ರಧಾನಮಂತ್ರಿ ಮೋದಿಜಿಯವರು ಶಿವಮೊಗ್ಗ ಭೇಟಿ ಸಂದರ್ಭದಲ್ಲಿ ಚಾಲನೆ ನೀಡಲಾದರೂ ಕೂಡಾ ಇಂದಿನ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಸಾಗರ ಶಾಸಕ ಗೋಪಾಲಕೃಷ್ಣರವರು ನಮ್ಮ ಕಾಂಗ್ರೆಸ್ ಸರ್ಕಾರದ ಮಂಜೂರು ಮಾಡಿರುವುದೆಂದು ಹೇಳಿ ಇತ್ತೀಚೆಗೆ ಹೊಸನಗರದಲ್ಲಿ ಪುನಃ ಶಂಕುಸ್ಥಾಪನೆ ಮಾಡುವ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಂದಿನ ಶಾಸಕ ಹರತಾಳು ಹಾಲಪ್ಪ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರರವರ ಅವಧಿಯಲ್ಲಿ ಚಕ್ರಾನಗರದಿಂದ ಹೊಸನಗರ ತಾಲ್ಲೂಕಿನ ವ್ಯಾಪ್ತಿಯ ನೂರಾರು ಹಳ್ಳಿಗಳಿಗೆ 417 ಕೋಟಿ ರೂ. ವೆಚ್ಚದ ಜಲಜೀವನ್ ಮಿಷನ್ ಯೋಜನೆಯಡಿ ಶುದ್ದ ಕುಡಿಯುವ ನೀರಿನ ಯೋಜನೆ ಕಾಮಗಾರಿ ಯಾರ ಅವಧಿಯಲ್ಲಿ ಮಾಡಿದ್ದು ಎಂಬುದನ್ನು ಜನತೆಗೆ ತಿಳಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಕೇಂದ್ರ ಸರ್ಕಾರದ ಅಯುಷ್ಮಾನ್ ಯೋಜನೆಯಡಿ 2.51 ಲಕ್ಷ ಜನ ಫಲಾನುಭವಿಗಳಿಗೆ 260 ಕೋಟಿ ರೂ. ಸೌಲಭ್ಯ ಪಡೆದಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಜನರಿಗೆ ಸುಳ್ಳು ಆಶ್ವಾಸನೆ ನೀಡಿ ಅಧಿಕಾರ ಗದ್ದುಗೆ ಹಿಡಿದಿದ್ದು ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆ.ಜಿ. ಅಕ್ಕಿಯನ್ನು ನಮ್ಮ ಸರ್ಕಾರ ನೀಡುತ್ತಿದೆ ಎಂದು ಸುಳ್ಳು ಹೇಳಿಕೊಂಡು ಮತದಾರರಿಗೆ ವಂಚಿಸುತ್ತಿರುವ ಕಾಂಗ್ರೆಸ್ ಸಾಧನೆ ಏನು ? ಎಂದು ಪ್ರಶ್ನಿಸಿದರು‌

ಈ ಸಂದರ್ಭದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎನ್.ಸತೀಶ್, ತಾಲ್ಲೂಕು ಬಿಜೆಪಿ ಮುಖಂಡ ಎಂ.ಬಿ.ಮಂಜುನಾಥ,
ಪಕ್ಷದ ಜಿಲ್ಲಾ ಮುಖಂಡರಾದ ಆರ್.ಟಿ.ಗೋಪಾಲ, ಬೆಳ್ಳೂರು ತಿಮ್ಮಪ್ಪ, ನಾಗರತ್ನ ದೇವರಾಜ್, ಪದ್ಮಾ ಸುರೇಶ್, ಜಿ.ಪಂ.ಮಾಜಿ ಸದಸ್ಯ ಎ.ಟಿ.ನಾಗರತ್, ಜಗದೀಶ್, ಎಂ.ಸುರೇಶ್‌ಸಿಂಗ್, ವೀರೇಶ್ ಆಲವಳ್ಳಿ, ನಾಗೇಂದ್ರ ಕಲ್ಲೂರು, ಸುಂದರೇಶ್, ಸರಸ್ವತಿ, ನಿಂಗಪ್ಪ ಕಗ್ಗಲಿ, ಗಿರೀಶ್, ಕೆ.ಬಿ.ಹೂವಪ್ಪ, ಜಿ.ಡಿ.ಮಲ್ಲಿಕಾರ್ಜುನ, ನಾಗರಾಜಗೌಡ ಮಲ್ಲಾಪುರ, ಇನ್ನಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!