ಶರಣ ಸಾಹಿತ್ಯ ಸರಳ ಕನ್ನಡದಲ್ಲಿರುವ ಬೃಹತ್ ವೈಚಾರಿಕ ಗ್ರಂಥಗಳ ಮಾಲೆ ; ಸಾಹಿತಿ ಸೊನಲೆ ಶ್ರೀನಿವಾಸ

0 65


ಹೊಸನಗರ: ಶರಣ ಸಾಹಿತ್ಯವು ಸರಳ ಕನ್ನಡದಲ್ಲಿರುವ ಬೃಹತ್ ವೈಚಾರಿಕ ಗ್ರಂಥಗಳ ಮಾಲೆ ಎಂದು ಸಾಹಿತಿ ಸೊನಲೆ ಶ್ರೀನಿವಾಸ ಹೇಳಿದರು.


ಇಲ್ಲಿನ ಕುವೆಂಪು ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ರಾಜ್ಯ ಹಾಗೂ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ವಚನ ದಿನ ಹಾಗೂ ದತ್ತಿನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಚನ ಸಾಹಿತ್ಯಕ್ಕೆ ಡಾ.ರಾಜೇಂದ್ರ ಸ್ವಾಮೀಜಿಯವರ ಕೊಡುಗೆ ಕುರಿತಂತೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಕೆ.ಇಲಿಯಾಸ್ ವಿಚಾರ ಮಂಡನೆ ಮಾಡಿದರು.


ವಚನಕಾರರ ಸಾಹಿತ್ಯದಲ್ಲಿ ಕಾಯಕ ಮತ್ತು ದಾಸೋಹ ಕುರಿತಂತೆ ಬ್ರಹ್ಮಶ್ವರ ಚನ್ನಸಬಸಪ್ಪ ಗೌಡ ಮಾತನಾಡಿದರು.
ಸೊನಲೆ ದಾನಮ್ಮ ಬೊಮ್ಮನಾಯ್ಕ ಹಾಗೂ ಹೊಸಕೋಟೆ ಸರೋಜಮ್ಮ ಹಾಲಪ್ಪ ಗೌಡ ಇವರು ನೀಡಿದ ದತ್ತಿನಿಧಿಯಿಂದ ಉಪನ್ಯಾಸ ನಡೆಯಿತು.


ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ದುಮ್ಮಾ ರೇವಣಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು.
ಎನ್.ಆರ್.ಅಂಬೇಡ್ಕರ್ ನಿಗಮದ ಮಾಜಿ ನಿರ್ದೇಶಕ ಎನ್.ಆರ್. ದೇವಾನಂದ್ ಇವರು ವಚನ ಗಾಯನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು.


ಶಿಕ್ಷಕರ ಸಹಕಾರ ಪತ್ತಿನ ಸಂಘದ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ಪ.ಪಂ ಸದಸ್ಯೆ ಗಾಯತ್ರಿ ನಾಗರಾಜ್ ಇದ್ದರು. ಪರಿಷತ್ತಿನ ಕಾರ್ಯದರ್ಶಿ ಗಂಗಾಧರಯ್ಯ ಸ್ವಾಗತಿಸಿದರು. ರೂಪಾ ವಂದಿಸಿದರು.

Leave A Reply

Your email address will not be published.

error: Content is protected !!