ಹೊಸನಗರ ; ಹಸಿರುಮಕ್ಕಿ ಲಾಂಚ್ ಮತ್ತೆ ಆರಂಭ

0 88

ಹೊಸನಗರ : ಶರಾವತಿ ಹಿನ್ನೀರು ಕುಸಿತದ ಕಾರಣ ಜೂನ್ 4ರಂದು ಲಾಂಚ್ ಸಂಪರ್ಕ ಸ್ಥಗಿತಗೊಳಿಸಲಾಗಿದ್ದ ಹಸಿರುಮಕ್ಕಿ ಲಾಂಚ್ ಮತ್ತೆ ಆರಂಭವಾಗಿದೆ. ಸದ್ಯ ಲಘು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ಉತ್ತಮ ಮಳೆಯಾದ ಕಾರಣ ಹಸಿರುಮಕ್ಕಿ ಹಿನ್ನೀರು ಪ್ರದೇಶದಲ್ಲಿ ನೀರು ಏರಿದ್ದು ಲಾಂಚ್ ಸಂಪರ್ಕ ಸಾಧಿಸಲು ಪೂರಕವಾಗಿದೆ.

ಲಾಂಚ್ ಸ್ಥಗಿತಗೊಂಡ ಕಾರಣ ಹಸಿರುಮಕ್ಕಿ ಮಾರ್ಗದ ಮೂಲಕ ತೆರಳುತ್ತಿದ್ದ ವಾಹನಗಳು ಹೊಸನಗರ, ನಗರ ಸಂಪೇಕಟ್ಟೆ ಮಾರ್ಗದ ಮೂಲಕ ಸಾಗಬೇಕಿತ್ತು.

ಹಿನ್ನೀರು ಏರಿಕೆಯಾದ ಕಾರಣ ಅಧಿಕಾರಿಗಳ ಸೂಚನೆ ಮೇರೆಗೆ ಲಾಂಚ್ ಸಂಪರ್ಕಕ್ಕೆ ಚಾಲನೆ ನೀಡಲಾಗುತ್ತಿದೆ. ಆರಂಭದಲ್ಲಿ ಲಘುವಾಹನಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ನೀರಿನ ಪ್ರಮಾಣ ಆಧರಿಸಿ ಬಸ್ ಸೇರಿದಂತೆ ದೊಡ್ಡ ವಾಹನಗಳಿಗೆ ಅವಕಾಶ ನೀಡಲಾಗಿದೆ ಎಂದು ಲಾಂಚ್ ಚಾಲಕ ರವಿ ಹಸಿರುಮಕ್ಕಿ ಹೇಳಿದ್ದಾರೆ.

Leave A Reply

Your email address will not be published.

error: Content is protected !!