ಹೊಸನಗರ : ನೀರು ತುಂಬಿದ ಬಕೆಟ್‌ಗೆ ಬಿದ್ದು ಒಂದು ವರ್ಷದ ಗಂಡು ಮಗು ಮೃತಪಟ್ಟಿರುವ ಘಟನೆ ತಾಲೂಕಿನ ಸೊನಲೆ ಗ್ರಾಪಂ ವ್ಯಾಪ್ತಿಯ ಸೊನಲೆ ಗ್ರಾಮದ ಹೊಸಕೊಪ್ಪ ಎಂಬಲ್ಲಿ ನಡೆದಿದೆ.
ಕೂಲಿ ಕೆಲಸಗಾರರಾದ ಹರೀಶ್ ಹಾಗೂ ವೀಣಾ ದಂಪತಿಗಳ ಒಂದು ವರ್ಷ ಒಂದು ತಿಂಗಳ ಸಂಕೇತ್ ಎಂಬ ಮಗು ಮೃತಪಟ್ಟಿರುವುದಾಗಿ ಎಂದು ತಿಳಿದುಬಂದಿದೆ.
ಪೋಷಕರು ಬಕೆಟ್‌ನಲ್ಲಿ ನೀರು ಹಾಕಿ ಆಗಾಗ ಮಗುವಿಗೆ ಆಟವಾಡಿಸುವ ಅಭ್ಯಾಸ ಹೊಂದಿದ್ದರು ಎಂದು ತಿಳಿದುಬಂದಿದೆ. ಆದರೆ ಇಂದು ದುರಂತವೆಂದರೆ ದನಗಳಿಗೆ ಕುಡಿಯಲು ಇಟ್ಟಿದ್ದ ಅರ್ಧ ಬಕೆಟ್ ನೀರಿನಲ್ಲಿ ಮಗು ತಲೆಕೆಳಗಾಗಿ ಬಿದ್ದು ಉಸಿರುಗಟ್ಟಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ತೋಟದ ಕೆಲಸಕ್ಕೆ ಪೋಷಕರು ಹೋದಾಗ ಈ ಘಟನೆ ನಡೆದಿದ್ದು ಅವರು ಬಂದು ನೋಡುವಷ್ಟರಲ್ಲಿ ಮಗು ಮೃತಪಟ್ಟಿತ್ತು.
ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದ್ದು, ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.