12 ರಿಂದ 18 ವರ್ಷದ ಹೆಣ್ಣು ಮಕ್ಕಳನ್ನು ಪೋಷಕರು ಜಾಗೃತಿ ವಹಿಸಬೇಕು ; ನ್ಯಾಯಾಧೀಶೆ ಪುಷ್ಪಲತಾ ಕೆ


ಹೊಸನಗರ: ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಪೋಕ್ಸೋ ಕಾಯ್ದೆಯಡಿ ಕೇಸುಗಳು ಹೆಚ್ಚಾಗುತ್ತಿದ್ದು ಇದನ್ನು ನಿಯಂತ್ರಣ ಮಾಡಬೇಕಾದರೆ 12ರಿಂದ 18ವರ್ಷದ ಹೆಣ್ಣು ಮಕ್ಕಳ ಪೋಷಕರು ತಮ್ಮ ಮಕ್ಕಳ ಚಲನ-ವಲನಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವುದರ ಜೊತೆಗೆ ಜಾಗೃತಿವಹಿಸಬೇಕೆಂದು ಹಿರಿಯ ವ್ಯವಹಾರ ನ್ಯಾಯಾಲಯದ ನ್ಯಾಯಧೀಶೆ ಪುಷ್ಪಲತಾ ಕೆ. ಹೇಳಿದರು.


ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಹೊಸನಗರ ಇವರ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಅಂತರಾಷ್ಟೀಯ ಮಹಿಳಾ ದಿನಾಚರಣೆಯ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಹೆಣ್ಣು ಮಕ್ಕಳ ಕೈಗೆ ಹೆಚ್ಚಾಗಿ ಮೊಬೈಲ್ ಕೊಡಬೇಡಿ ಶಾಲೆ ಕಾಲೇಜಿಗೆ ಹೋಗಿ ಬಂದ ನಂತರ ಪೋಷಕರು ಹೆಣ್ಣು ಮಕ್ಕಳ ಚಲನ-ವಲನಗಳನ್ನು ಗಮನಿಸಬೇಕು 12ರಿಂದ ಸುಮಾರು ಇಪ್ಪತ್ತು ವರ್ಷದವರೆವಿಗೆ ಹೆಣ್ಣು ಮಕ್ಕಳ ಪೋಷಣೆ ಪೂರ್ಣ ಪ್ರಮಾಣದಲ್ಲಿ ಪೋಷಕರು ಜವಾಬ್ದಾರಿ ಹೊಣೆಯನ್ನು ತೆಗೆದುಕೊಂಡು ಉತ್ತಮ ಭವಿಷ್ಯ ರೂಪಿಸುವ ಹೊಣೆ ಪೋಷಕ ವರ್ಗದವರದ್ದಾಗಿರುತ್ತದೆ ಮಹಿಳೆಯರಿಗಾಗಿ ಹಾಗೂ ಹೆಣ್ಣು ಮಕ್ಕಳಿಗಾಗಿ ಸಾಕಷ್ಟು ಕಾನೂನುಗಳನ್ನು ಜಾರಿಗೊಳಿಸಲಾಗಿದೆ ಹೆಣ್ಣು ಮಕ್ಕಳಿಗೆ ತೊಂದರೆಯಾದರೆ ಕಾನೂನು ಪ್ರಾಧಿಕಾರ ನೇಮಿಸಿದ ವಕೀಲರನ್ನು ಸಂಪರ್ಕಿಸಿದರೆ ಫೀಜ್ ಇರುವುದಿಲ್ಲ ಕಾನೂನು ಪ್ರಾಧಿಕಾರದ ಮೂಲಕ ಕಾನೂನು ಸಲಹೆಗಳನ್ನು ಪಡೆಯಬಹುದು ಇದರ ಜೊತೆಗೆ ಮಹಿಳಾ ಸಾಂತ್ವಾನಗಳನ್ನು ಮಹಿಳೆಯರ ನೆರವಿಗೆ ಬರುತ್ತದೆ ಈ ಕಾನೂನು ಸಲಹೆಗಳನ್ನು ಅಂಗನವಾಡಿ ಮಹಿಳೆಯರು ಪಡೆದುಕೊಂಡು ಮನೆ-ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಪ್ರತಿಯೊಬ್ಬ ಮಹಿಳೆಗೂ ತಿಳಿಸಬೇಕು ಕಾನೂನಿನ ಅರಿವು ಮೂಡಿಸಬೇಕು ಎಂದರು.


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಶಶಿರೇಖಾರವರು ವಹಿಸಿ ಮಾತನಾಡಿ, ನಮ್ಮ ಭಾರತ ದೇಶಕ್ಕೆ ಮಹಿಳೆಯರ ಪಾತ್ರ ಬಹು ಮುಖ್ಯವಾಗಿದ್ದು ಈ ದೇಶಕ್ಕೆ ಅಗೌರವ ತರುವ ರೀತಿಯಲ್ಲಿ ನಡೆದುಕೊಳ್ಳಬಾರದು ಮನೆಯಲ್ಲಿ ಕೆಲಸದಲ್ಲಿ ಶಿಸ್ತು ಸಂಯಮದಿಂದ ವರ್ತಿಸಿದರೆ ಮಾತ್ರ ಸುಖ-ಶಾಂತಿ ನೆಮ್ಮದಿಯಿಂದ ಬದುಕಬಹುದೆಂದರು.


ಕಾನೂನು ಸಲಹೆಯ ಬಗ್ಗೆ ವಕೀಲರ ಸಂಘದ ಅಧ್ಯಕ್ಷರಾದ ವಾಲೆಮನೆ ಶಿವಕುಮಾರ್ ಕಾರ್ಯದರ್ಶಿ ಚಂದ್ರಪ್ಪನವರು ಮಹಿಳೆಯರಿಗೆ ಕಾನೂನು ಸಲಹೆಯನ್ನು ನೀಡಿದರು.
ಮುಖ್ಯ ಅತಿಥಿಯಾಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಶಿಶು ಅಭಿವೃದ್ಧಿ ಇಲಾಖೆಯ ರಾಜು, ನ್ಯಾಯಲಯದ ಶ್ರೀಮತಿ ರೇಖಾ ಹರೀಶ್, ಗುರುರಾಜ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಹೊಸನಗರ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಕಾನೂನು ಸಲಹೆಯನ್ನು ಪಡೆದರು.


ಪ್ರಾರ್ಥನೆ: ಶ್ರೀಮತಿ ನಾಗರತ್ನ, ಸ್ವಾಗತ ಶ್ರೀಮತಿ ವೀರಮ್ಮ,ವಂದನೆಯನ್ನು ಶ್ರೀಮತಿ ವನಮಾಲರವರು ಮಾಡಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,745FollowersFollow
0SubscribersSubscribe
- Advertisement -spot_img

Latest Articles

error: Content is protected !!