ರಿಪ್ಪನ್‌ಪೇಟೆ ವೀರಶೈವ ಸಮಾಜದಿಂದ ಬಿಜೆಪಿ ಅಭ್ಯರ್ಥಿ ಬೆಂಬಲಿಸುವ ನಿರ್ಧಾರ

0 71

ರಿಪ್ಪನ್‌ಪೇಟೆ: ಮೇ 10 ರಂದು ನಡೆಯುವ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪನವರನ್ನು ಬೆಂಬಲಿಸುವಂತೆ ರಿಪ್ಪನ್‌ಪೇಟೆ ವೀರಶೈವ ಸಮಾಜದವರು ನಿರ್ಧಾರ ಕೈಗೊಂಡಿರುವುದಾಗಿ ಪ್ರಕಟಿಸಿದರು.

ಇಲ್ಲಿನ ಶಿವಮಂದಿರದಲ್ಲಿ ವೀರಶೈವ ಸಮಾಜದ ಉಪಾಧ್ಯಕ್ಷ ಜಿ.ಎಂ.ದುಂಡರಾಜ್‌ಗೌಡರು ಸುದ್ದಿಗೋಷ್ಠಿ ನಡೆಸಿ, ರಾಜ್ಯದ ಬಿ.ಎಸ್. ಯಡಿಯೂರಪ್ಪ ಮತ್ತು ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ರಿಪ್ಪನ್‌ಪೇಟೆಯ ಶಿವಮಂದಿರಕ್ಕೆ 3.00 ಕೋಟಿ ರೂ. ವಿಶೇಷ ಅನುದಾನವನ್ನು ಕೊಡಿಸುವ ಮೂಲಕ ಸಮಾಜದ ಸರ್ವಾಂಗೀಣ ಅಭಿವೃದ್ದಿಗೆ ಆದ್ಯತೆ ನೀಡಿರುವ ಸಂಸದ ಬಿ.ವೈ.ರಾಘವೇಂದ್ರ ಮತ್ತು ಶಾಸಕ ಹರತಾಳು ಹಾಲಪ್ಪನವರು ಶ್ರಮಿಸಿದ್ದಾರೆ. ಆ ಕಾರಣದಿಂದಾಗಿ ಈ ಬಾರಿ ಚುನಾವಣೆಯಲ್ಲಿ ಸಮಾಜದವರು ಶಾಸಕ ಹರತಾಳು ಹಾಲಪ್ಪನವರನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.

ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯಿತ ಮುಖ್ಯಮಂತ್ರಿಗಳಲ್ಲಾ ಭ್ರಷ್ಟಾಚಾರಿಗಳು ಎಂದು ಹೇಳಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ ಈ ಭಾರಿಯ ಚುನಾವಣೆಯಲ್ಲಿ ತಕ್ಕ ಪಾಠಕಲಿಸುವುದಾಗಿ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಬಸವೇಶ್ವರ ವೀರಶೈವ ಸಮಾಜದ ಉಪಾಧ್ಯಕ್ಷ ಎಂ.ಆರ್.ಶಾಂತವೀರಪ್ಪಗೌಡ ಮಸರೂರು, ಕಾರ್ಯದರ್ಶಿ ಡಿ.ಎಸ್.ರಾಜಾಶಂಕರ್, ಬೆಳಂದೂರು ಬಿ.ವಿ.ನಾಗಭೂಷಣ, ಕಮದೂರು ಪರಮೇಶ್, ಕೆ.ಎಂ.ಈಶ್ವರಪ್ಪ, ಹೆಚ್.ಎಂ.ವರ್ತೇಶಗೌಡರು,ಬೆನವಳ್ಳಿ ನಿಂಗಪ್ಪಗೌಡ, ಮಹೇಂದ್ರಗೌಡ ಬೆನವಳ್ಳಿ, ಬಿ.ಹೆಚ್.ಸ್ವಾಮಿಗೌಡ ಬೆಳಂದೂರು ಹಾಗೂ ಜೆ.ಎಂ.ಶಾಂತಪ್ಪ ಜಂಬಳ್ಳಿ ಹಾಜರಿದ್ದರು.

Leave A Reply

Your email address will not be published.

error: Content is protected !!