ಚುನಾವಣೆ ಮುಗಿಯಿತು ರಾಘಣ್ಣ ಆದ್ರೆ ಅರಸಾಳು ನಿಲ್ದಾಣದಲ್ಲಿ ರೈಲು ಮಾತ್ರ ನಿಲ್ತಿಲ್ಲ ಯಾಕಣ್ಣ ?

0 93

ರಿಪ್ಪನ್‌ಪೇಟೆ: ಬ್ರಿಟಿಷರ ಆಳ್ವಿಕೆಯಲ್ಲಿ ಆರಂಭವಾಗಿದ್ದ ಮೈಸೂರು ಬೆಂಗಳೂರು-ಶಿವಮೊಗ್ಗ-ತಾಳಗುಪ್ಪ ಮಾರ್ಗದ ಜಂಬಗಾರು ರೈಲು ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ ಡ್ಯಾಂ ನಿರ್ಮಾಣಕ್ಕಾಗಿ ಸರಕು ಸಾಗಾಣಿಕೆ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಎಂಬ ಧ್ಯೇಯದೊಂದಿಗೆ ಆರಂಭಗೊಂಡ ಈ ರೈಲು ಯೋಜನೆಗೆ 100 ವರ್ಷಗಳಾಗುತ್ತಿದ್ದು ಅರಸಾಳುವಿನಲ್ಲಿ ರೈಲು ನಿಲ್ದಾಣದಿಂದಾಗಿ ಉಡುಪಿ, ಕೊಲ್ಲೂರು, ಕುಂದಾಪುರ, ಭಟ್ಕಳ, ಬೈಂದೂರು ಹೀಗೆ ಮಲೆನಾಡಿನ ನೂರಾರು ಹಳ್ಳಿಗಳ ರೈತಾಪಿ ವರ್ಗಕ್ಕೆ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಲು ಅನುಕೂಲವಾಗುವ ಮಹಾತ್ವಾಕಾಂಕ್ಷಿ ಮುಂದಾಲೋಚನೆಯ ಯೋಜನೆಯನ್ನು ಅಂದಿನ ಸರ್ಕಾರ ಹಾಗೂ ಜನಪ್ರತಿನಿಧಿಗಳ ಜನಹಿತ ಯೋಜನೆಯಂತೆ ಕಾರ್ಯಗತಗೊಂಡಂತಹ ಈ ರೈಲು ಪ್ರಯಾಣಿಕರ ತಂಗುದಾಣ ಇಂದು ಇದ್ದರೂ ಕೂಡಾ ಪ್ರಯಾಣಿಸದಂತಾಗಿದೆ ಎಂದು ಬೆಳ್ಳೂರು ಪ್ರೇಮಕುಮಾರ್, ಹಾರೋಹಿತ್ತಲು ಯೋಗೇಂದ್ರಪ್ಪ, ಬಿದರಹಳ್ಳಿ ವೆಂಕಟಪ್ಪ, ಹುಂಚದ ವೃಷಭರಾಜ್, ಆನೆಗದ್ದೆ ಮಲ್ಲಪ್ಪ, ಹುಂಚದಕಟ್ಟೆ ಶಿವಮೂರ್ತಿ, ಅಮೃತ ತೀರ್ಥಪ್ಪ, ಹೆದ್ದಾರಿಪುರ ನಾಗರಾಜ, ಕಲ್ಲುಕೊಪ್ಪ ನಾಗರಾಜ, ಕೊಳವಳ್ಳಿ ವೀರಭದ್ರಪ್ಪ ಹೇಗಿದೆ ನೋಡಿ ನಮ್ಮ ಜನನಾಯಕರ ಜನಸೇವೆ ಎಂದು ತಮ್ಮ ಅಸಮದಾನವನ್ನು ಮಾಧ್ಯಮದವರ ಬಳಿ ತೊಡಿಕೊಂಡಿದ್ದಾರೆ‌.

ಮೋದಿಜೀಯವರ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದ ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿಯವರು ಸಂಸದ ಬಿ.ವೈ.ರಾಘವೇಂದ್ರರ ಮನವಿಗೆ ಸ್ಪಂದಿಸಿ ಕೋಟ್ಯಂತರ ರೂ. ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಅರಸಾಳು ರೈಲ್ವಿ ನಿಲ್ದಾಣ ಮತ್ತು ಫ್ಲಾಟ್‌ಫಾರಂ ಸೇರಿದಂತೆ ಅರಸಾಳು ಮಾಲ್ಗೂಡಿ ರೈಲ್ವೆ ನಿಲ್ದಾಣವನ್ನು ಅಭಿವೃದ್ದಿ ಪಡಿಸುವುದರೊಂದಿಗೆ ವರ್ಚುವೆಲ್ ಮೂಲಕ ಲೋಕಾರ್ಪಣೆಯನ್ನು ಮಾಡಲಾಗಿದ್ದರೂ ಕೂಡಾ ಮಲೆನಾಡಿನ ಪ್ರಯಾಣಿಕರಿಗೆ ಮಾತ್ರ ರೈಲು ಪ್ರಯಾಣಕ್ಕೆ ಅವಕಾಶವಿಲ್ಲದಂತಾಗಿದೆ.

ಈ ಹಿಂದೆ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರರವರ ವಿಶೇಷ ಮುತುವರ್ಜಿಯಿಂದಾಗಿ ಶಿವಮೊಗ್ಗ ಜಿಲ್ಲೆಯ ರೈಲ್ವೆ ಅಭಿವೃದ್ದಿ ಹಾಗೂ ವಿಮಾನ ನಿಲ್ದಾಣ ಹೀಗೆ ಹತ್ತು ಹಲವು ಅಭಿವೃದ್ದಿ ಕಾರ್ಯಗಳು ಭರದಿಂದ ಸಾಗಿದ್ದರೂ ಕೂಡಾ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕು ಜನತೆ ರಾಜ್ಯಕ್ಕೆ ಬೆಳಕು ನೀಡುವ ಉದ್ದೇಶದಿಂದಾಗಿ ಮನೆ-ಮಠವನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದು ಅಲ್ಲದೆ ವಿಧಾನಸಭಾ ಕ್ಷೇತ್ರದವನ್ನು ಕಳೆದುಕೊಂಡು ದೊರೆಯಿಲ್ಲದ ಆಸ್ಥಾನದಂತೆ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿಗೆ ಕಾರಣವಾಗಿದೆ.

ಇನ್ನೂ ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣಾ ಬಹಿರಂಗ ಪ್ರಚಾರದ ವೇಳೆ ಸಂಸದ ಬಿ.ವೈ.ರಾಘವೇಂದ್ರರವರು ಪ್ರಚಾರದ ಸಂದರ್ಭದಲ್ಲಿ ಚುನಾವಣೆ ಮುಗಿಯುತ್ತಿದ್ದಂತೆ ಅರಸಾಳು ರೈಲ್ವೆ ನಿಲ್ದಾಣದಲ್ಲಿ ಮೈಸೂರು-ಬೆಂಗಳೂರು-ತುಮಕೂರು-ಶಿವಮೊಗ್ಗ -ಸಾಗರ-ತಾಳುಗುಪ್ಪ ಇಂಟರ್ ಸಿಟಿ ರೈಲು ನಿಲುಗಡೆ ಮಾಡುವುದಾಗಿ ಹೇಳಿಕೊಂಡಿದ್ದರು. ಚುನಾವಣೆ ಮುಗಿಯಿತು ರಾಘಣ್ಣ ಇನ್ನೂ ಅರಸಾಳಿನಲ್ಲಿ ಮಾತ್ರ ರೈಲು ನಿಲ್ತಿಲ್ಲಣ್ಣ ಎಂದು ಪ್ರಯಾಣಿಕರು ತಮ್ಮ ಅಳಲನ್ನು ಮಾಧ್ಯಮದವರಲ್ಲಿ ಹಂಚಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!