ರಾಷ್ಟ್ರಕವಿ ಕುವೆಂಪು ಅವರ ಬದುಕು, ಬರಹ ಯುವ ಸಮೂಹಕ್ಕೆ ಸ್ಫೂರ್ತಿ ; ಡಾ. ಕೆ.ಸಿ. ಶಶಿಧರ್

0 449

ಹೊಸನಗರ ; ರಾಷ್ಟ್ರಕವಿ ಕುವೆಂಪು ಅವರ ಬದುಕು, ಬರಹ ನಮ್ಮ ಯುವಜನತೆಗೆ ಸ್ಪೂರ್ತಿ ಆಗಲಿ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ಮಹಾವಿದ್ಯಾಲಯದ ಕುಲಸಚಿವ, ವಿಶೇಷ ಅಧಿಕಾರಿ ಡಾ. ಕೆ.ಸಿ.ಶಶಿಧರ್ ಆಶಿಸಿದರು.

ಕುವೆಂಪು ಅವರ ಜನ್ಮದಿನದ ಹಿನ್ನೆಲೆಯಲ್ಲಿ ವಿ.ವಿ ಆವರಣದಲ್ಲಿ ಸೊಗಡು ಸಾಹಿತ್ಯ ವೇದಿಕೆ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆ ಅಂಗವಾಗಿ ಪ್ರಥಮ ವರ್ಷದ ಕೃಷಿ ಪದವಿ ವಿದ್ಯಾರ್ಥಿ ಚಂದನ್ ರಚಿಸಿದ್ದ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಟ ಸರ್ಮಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿ, ಕುವೆಂಪು ಅವರ ಬದುಕು, ಬರಹ ಒಂದೇ ಆಗಿದ್ದು, ನುಡಿದಂತೆ ನಡೆದು ಬದುಕು ಸಾಗಿಸಿದ ಮಹಾತ್ಮರು. ಅವರ ಬದುಜಿನ ಆದರ್ಶಗಳು, ಮಾನವೀಯ ಮೌಲ್ಯಗಳು ಯುವಸಮೂಹಕ್ಕೆ ಅನುಕರಣೀಯವಾಗಿದ್ದು ಸಾಧಕರಿಗೆ ಮಾದರಿಯಾಗಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಸೊಗಡು ಸಾಹಿತ್ಯ ವೇದಿಕೆಯ ಸಂಯೋಜಕಿ ಡಾ. ಶಶಿಕಲಾ ಮಾತನಾಡಿ, ಕುವೆಂಪು ಅವರ ಕನ್ನಡ ಭಾಷಾ ಪ್ರೇಮ, ಪ್ರಕೃತಿ ಪ್ರೇಮ ಹಾಗೂ ಮಾನವೀಯ ಗುಣಗಳನ್ನು ನಾವುಗಳು ಅಳವಡಿಸಿಕೊಂಡಲ್ಲಿ ಮಾತ್ರವೇ ವಿಶ್ವಮಾನವ ದಿನಾಚರಣೆ ಅರ್ಥಪೂರ್ಣವಾಗುತ್ತದೆ. ಕುವೆಂಪು ಓರ್ವ ವ್ಯಕ್ತಿ ಆಗಿರದೆ, ಇಡೀ ಕರುನಾಡಿನ ಸಾಹಿತ್ಯ ಕ್ಷೇತ್ರದ ಶಕ್ತಿಯಾಗಿದ್ದವರು. ಅಂತಹ ವಿಶ್ವಚೇತನ ನಮ್ಮ ಜಿಲ್ಲೆಯವರು ಎಂಬುದೇ ನಮ್ಮೆಲ್ಲರ ಸೌಭಾಗ್ಯದ ಸಂಗತಿ ಎಂದರು.

ಕುವೆಂಪು ಕುರಿತಾಗಿ ಏರ್ಪಡಿಸಿದ್ದ ರಸಪ್ರಶ್ನೆ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಣೆ, ಅವರ ರಚನೆಯ ಕೆಲವು ಗೀತೆಗಳನ್ನು ಇದೇ ಸಂದರ್ಭದಲ್ಲಿ ಹಾಡುವ ಮೂಲಕ ರಸಋಷಿಗೆ ನುಡಿನಮನ ಸಲ್ಲಿಸಲಾಯಿತು. ಹಸೆ ಚಿತ್ತಾರ ಪರಿಷತ್ತಿನ ರವಿರಾಜ ಅವರಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ರಚಿಸಿದ್ದ, ಸಾಂಪ್ರದಾಯಕ ಕೆಲವು ಹಸೆ ಚಿತ್ತಾರಗಳ ಪ್ರದರ್ಶನ ವಿಶೇಷವಾಗಿ ಕಾರ್ಯಕ್ರಮದಲ್ಲಿ ಗಮನ ಸೆಳೆಯಿತು.

Leave A Reply

Your email address will not be published.

error: Content is protected !!