ಬೀದಿ ನಾಯಿಗಳ ದಾಳಿಗೆ 25 ಕುರಿಗಳು ಸಾವು..!!

0 46

ರಿಪ್ಪನ್‌ಪೇಟೆ : ಬೀದಿ ನಾಯಿಗಳು ದಾಳಿ ನಡೆಸಿದ ಪರಿಣಾಮ 25 ಕುರಿಗಳು ಸಾವನ್ನಪ್ಪಿರುವ ಘಟನೆ ಕೆಂಚನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಣಿಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ವೇಲಾಯುಧನ್ ಎಂಬುವವರಿಗೆ ಸೇರಿದ 25ಕುರಿಗಳು ಸಾವಿಗೀಡಾಗಿವೆ. ವೇಲಾಯುಧನ್ ಕುರಿ ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಕೊಟ್ಟಿಗೆಯಲ್ಲಿದ್ದ ಇತರ ಕುರಿಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ ಪರಿಣಾಮ ಈ ಘಟನೆ ನಡೆದಿದೆ.

ವಾಸಿಸಲು ಮನೆ ಇಲ್ಲದ ಬಡ ಕೃಷಿಕನ ಜೀವನಕ್ಕೆ ಆಸರೆಯಾಗಿದ್ದ ಕುರಿಗಳು ನಾಯಿ ದಾಳಿಯಿಂದ ಬಲಿಯಾಗಿರುವುದರಿಂದ ಬೇಸತ್ತು ನಾಯಿಗಳ ಹಾವಳಿಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸುವ ಜತೆಗೆ, ಕುರಿಗಳ ಸಾವಿನಿಂದ ತಮಗಾಗಿರುವ ನಷ್ಟಕ್ಕೆ ಪರಿಹಾರ ನೀಡುವಂತೆ ಪಶು ವೈದ್ಯಕೀಯ ಮತ್ತು ಸೇವಾ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Leave A Reply

Your email address will not be published.

error: Content is protected !!