ಲಕ್ಷಾಂತರ ರೂ. ಮೌಲ್ಯದ ರಬ್ಬರ್ ಶೀಟ್ ಕಳವು ; ಠಾಣೆಗೆ ದೂರು

0 171

ರಿಪ್ಪನ್‌ಪೇಟೆ: ಇಲ್ಲಿನ ಬೆಳಂದೂರು ಮತ್ತು ಗವಟೂರು ತಳಲೆ ಗ್ರಾಮದ ವ್ಯಾಪ್ತಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ರಬ್ಬರ್ ಶೀಟ್ ಕಳ್ಳತನವಾದ ಬಗ್ಗೆ ಠಾಣೆಗೆ ದೂರು ನೀಡಿದ್ದಾರೆ.


ಬೆಳಂದೂರು ಗ್ರಾಮದ ಬಿ.ಟಿ.ಪ್ರಕಾಶ, ಪುಟ್ಟಸ್ವಾಮಿಗೌಡ ತಳಲೆ ಗ್ರಾಮದ ಜಾರ್ಜ್ ಹಾಗೂ ಗವಟೂರು ಅಲೆಕ್ಸ್ ಎಂಬುವವರ ಮನೆಯ ಮುಂಭಾಗದಲ್ಲಿ ಒಣ ಹಾಕಲಾದ ರಬ್ಬರ್ ಶೀಟ್‌ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ರಿಪ್ಪನ್‌ಪೇಟೆ ಠಾಣೆಗೆ ದೂರು ನೀಡಿದ್ದು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Leave A Reply

Your email address will not be published.

error: Content is protected !!