ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

0 45

ರಿಪ್ಪನ್‌ಪೇಟೆ: ಗ್ರಾಮೀಣ ಪ್ರದೇಶದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ವ್ಯಾಸಂಗ ಮಾಡುವುದರಿಂದಾಗಿ ಸರ್ಕಾರಿ ಶಾಲೆಗಳ ಉಳಿವಿಕೆಗೆ ಸಹಕಾರಿಯಾಗಿದೆ. ಸರ್ಕಾರದ ಉಚಿತ ಶಿಕ್ಷಣದಿಂದಾಗಿ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ಹೆಚ್ಚು ದಾಖಲಾಗಬೇಕು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚು ಡೊನೇಷನ್ ನೀಡಿ ಮಕ್ಕಳಲ್ಲಿ ಹೆಚ್ಚಿನ ಹೊರೆ ಹೊರಿಸುವುದರ ಬದಲು ಮಕ್ಕಳ ಬೌದ್ದಿಕ ಬೆಳವಣಿಗಗೆ ಅನುಗುಣವಾಗಿ ಪಾಠ ಪ್ರವಚನ ನೀಡುವ ಸರ್ಕಾರಿ ಶಾಲೆಗಳೇ ಹೆಚ್ಚು ಉಪಯುಕ್ತವಾಗಿವೆ ಎಂದು ದಾನಿಯಾದ ಶಿವಮೊಗ್ಗದ ನ್ಯಾಯವಾದಿ ಕೆ.ವೈ.ರಾಮಚಂದ್ರಪ್ಪ ಕುಬಟಹಳ್ಳಿ ಹೇಳಿದರು.

ಸಮೀಪದ ಹುಂಚ ಹೊಂಡಲಗದ್ದೆ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಮಕ್ಕಳಿಗೆ ಉಚಿತ ಸಮವಸ್ತ್ರ ಮತ್ತು ಟೈ, ಬೆಲ್ಟನ್ನು ವಿತರಿಸಿ ಮಾತನಾಡಿ, ಇಂದಿನ ಆಂಗ್ಲಭಾಷಾ ವ್ಯಾಮೂಹದಿಂದಾಗಿ ಮಕ್ಕಳು ಸರ್ಕಾರಿ ಶಾಲೆಯೆಂದರೆ ಮೂಗುಮುರಿಯುವ ಸ್ಥಿತಿಯಿದ್ದು ಸರ್ಕಾರ ಉಚಿತ ಶಿಕ್ಷಣ ವ್ಯವಸ್ಥೆಯ ಮೂಲಕ ಮಕ್ಕಳ ಬೆಳವಣಿಗೆಗೆ ಅನುಗುಣವಾಗಿ ಭೋದನೆ ಮಾಡುವುದರಿಂದಾಗಿ ಹೆಚ್ಚು ಪ್ರಗತಿ ಹೊಂದಲು ಸಹಕಾರಿಯಾಗಿದೆ ಎಂದರು.

ಈ ಸಮಾರಂಭದಲ್ಲಿ ಬಿಇಓ ಹೆಚ್.ಆರ್.ಕೃಷ್ಣಮೂರ್ತಿ, ಮುಖ್ಯಶಿಕ್ಷಕಿ ಗೀತಾ ಸಹಶಿಕ್ಷಕರಾದ ಕೆ.ಬಿ.ವಿಶ್ವನಾಥ, ಬಾಲಕೃಷ್ಣ, ಸಿಆರ್‌ಪಿ.ಎಂ.ದೀಪ, ಎಸ್.ಡಿ.ಎಂ.ಸಿ. ಸದಸ್ಯರು ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!