ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ; ಆರೋಪಿ ಬಂಧನ

0 62

ಶಿವಮೊಗ್ಗ: ರಾಜ್ಯ ವಿಧಾನಸಭಾ ಚುನಾವಣೆಯ ನಡುವೆಯೂ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಕೂಡ ಜೋರಾಗಿದೆ. ಈ ಸಂಬಂಧ ಶಿವಮೊಗ್ಗ ಪೊಲೀಸ್ ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ದಂಧೆಗೆ ಕಡಿವಾಣ ಹಾಕಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕ್ರಿಕೇಟ್ ಬೆಟ್ಟಿಂಗ್/ ಮಟ್ಕಾ/ ಇಸ್ಪೀಟ್ ಜೂಜಾಟ ನಡೆಯುತ್ತಿರುವ ಬಗ್ಗೆ
ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಎಸ್ಪಿ ಮಿಥುನ್ ಕುಮಾರ್, ಜಿ. ಕೆ. ಮತ್ತು ಎಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ ಮಾರ್ಗದರ್ಶನದಲ್ಲಿ ಪ್ರಭು
ಡಿ.ಟಿ. ಡಿ.ವೈ.ಎಸ್.ಪಿ, ಡಿ.ಸಿ.ಆರ್.ಬಿ ಮತ್ತು ಬಿ. ಬಾಲರಾಜು, ಡಿ.ವೈ.ಎಸ್.ಪಿ. ಶಿವಮೊಗ್ಗ-ಎ ಉಪವಿಭಾಗರವರ
ಮೇಲ್ವಿಚಾರಣೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ಪತ್ತೆಹಚ್ಚಿ ದಾಳಿ ಮಾಡಲು ಸಂತೋಷ್ ಪಾಟೀಲ್ ಪಿ.ಐ
ಸಿ.ಇ.ಎನ್ ಶಿವಮೊಗ್ಗ ಪೊಲೀಸ್ ಠಾಣೆ ರವರ ನೇತೃತ್ವದ ವಿಶೇಷ ತಂಡವನ್ನು ರಚಿಸಲಾಗಿತ್ತು.

ಏ. 15 ರಂದು ಈ ವಿಶೇಷ ತಂಡವು ಮಾಹಿತಿಯನ್ನು ಸಂಗ್ರಹಿಸಿ ಶಿವಮೊಗ್ಗ ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡುತಿದ್ದವರ ಮೇಲೆ ದಾಳಿ ಮಾಡಿ ಸತೀಶ್ ಹಾಗು ಇತರೆ 03 ಜನ ಆರೋಪಿಗಳಿಂದ ಒಟ್ಟು 7.20 ಲಕ್ಷ ನಗದು ಹಣ, 03 ಮೊಬೈಲ್ ಫೋನ್‌ಗಳು ಮತ್ತು 1 ಮೊಪೆಡ್ ಬೈಕ್ ಅನ್ನು ವಶ ಪಡಿಸಿಕೊಂಡು, ಆರೋಪಗಳ ವಿರುದ್ಧ ಕಲಂ 78(1) (ಎ)(6) ಕರ್ನಾಟಕ ಪೊಲೀಸ್ ಕಾಯ್ದೆ ರೀತ್ಯಾ ಪ್ರಕರಣ
ದಾಖಲಿಸಲಾಗಿತ್ತು.


ನಂತರ ಏ.16ಮರಂದು ಶಿವಮೊಗ್ಗ ನಗರದ ವಾಸಿ ಕಾರ್ತಿಕ್ ರವರು ತನ್ನ ಸ್ನೇಹಿತನಾದ ಸತೀಶನು ಆನ್‌ಲೈನ್ ವೆಬ್‌ಸೈಟ್/ ಆಪ್‌ನಲ್ಲಿ ಕ್ರಿಕೆಟ್ ಬೆಟ್ಟಂಗ್ ಜೂಜಾಟ ಆಡಿಸುತಿದ್ದು, ಕಾರ್ತಿಕ್ ನಿಗೂ ಸಹಾ ಕ್ರಿಕೆಟ್‌ನ ಬೆಟ್ಟಿಂಗ್ ಜೂಜಾಟ ಆಡು ಹೆಚ್ಚಿನ ಹಣವನ್ನು ಗಳಿಸಿಕೊಡುತ್ತೇನೆಂದು ಹೇಳಿದ್ದರಿಂದ, 3 ರಿಂದ 4 ವರ್ಷಗಳಿಂದ ಸತೀಶನಿಗೆ ಹಣವನ್ನು ಕೊಡುತ್ತಾ ಬಂದಿದ್ದು, ಆದರೆ ಆತನು ನಾನು ಕೊಟ್ಟ ಹಣವನ್ನು ವಾಪಸ್ ಕೊಡದೇ ಬೆಟ್ಟಿಂಗ್‌ನಲ್ಲಿ ನಿಮ್ಮ ಹಣ ಹೋಯಿತು ಅಂತ ಹೇಳಿ ಸುಮಾರು 3 ಲಕ್ಷ ಹಣವನ್ನು ಹಿಂದಿರುಗಿಸದೇ ನಂಬಿಸಿ ಮೋಸ ಮಾಡಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಕಲಂ 78(1) (ಎ)(6) ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು ಕಲಂ 420
ಐಪಿಸಿ ಕಾಯ್ದೆ ರೀತ್ಯಾ ಪ್ರಕರಣ ದಾಖಲಾಗಿತ್ತು.


ಆರೋಪಿ ಸತೀಶ ವೈ ಈತನು ಆನ್‌ಲೈನ್ ಬೆಟ್ಟಿಂಗ್ ಆಪ್ ವೆಬ್‌ಸೈಟ್‌ಗಳಲ್ಲಿ ಹೂಡಿಕೆ ಮಾಡಿದ್ದ 18,26,336 ರೂ. ಹಣವನ್ನು ಜಪ್ತಿ ಮಾಡಿ, 02 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದು ಈಪ್ರಕರಣವೂ ಸೇರಿದಂತೆ ಎರಡೂ ಪ್ರಕರಣಗಳಿಗೆ ಸಂಬಂಧಿಸಿದ ಒಟ್ಟು 25,46,336 ರೂ. ಗಳನ್ನು ಜಪ್ತಿ ಮಾಡಿ, 05 ಮೊಬೈಲ್ ಫೋನ್‌ಗಳು ಮತ್ತು 1 ಮೊಪೆಡ್ ಬೈಕ್ ಅನ್ನು ವಶಪಡಿಸಿಕೊಂಡು ಆರೋಪಿ ಶಿವಮೊಗ್ಗದ ಹೊಸಮನೆ ಸತೀಶ್ (28) ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ರವರು ಪ್ರಶಂಸಿಸಿ ಅಭಿನಂದಿಸಿದ್ದಾರೆ.


ಸಾರ್ವಜನಿಕರ ಗಮನಕ್ಕೆ:

  1. ಆನ್‌ಲೈನ್ ಕ್ರಿಕೇಟ್ ಬೆಟ್ಟಿಂಗ್/ಮಟ್ಕಾ/ಜೂಜಾಟ ಮುಂತಾದವುಗಳು ಕಾನೂನು ಬಾಹಿರ ಚಟುವಟಿಕೆಗಳಾಗಿದ್ದು ಅವುಗಳಲ್ಲಿ ತೊಡಗಿದವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.
  2. ಆನ್‌ಲೈನ್ ಕ್ರಿಕೇಟ್ ಬೆಟ್ಟಿಂಗ್/ಮಟ್ಕಾ/ಜೂಜಾಟ ಮುಂತಾದವುಗಳಿಂದ ಆರ್ಥಿಕ ನಷ್ಟ, ಮಾನ ಹಾನಿ, ಪ್ರಾಣ ಹಾನಿ ಉಂಟಾಗುತ್ತದೆ ಆದ್ದರಿಂದ ಇಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಬಾರದು.
  3. ಯಾರಾದರೂ ನಿಮ್ಮ ಸುತಮುತ್ತಲು ಕಾನೂನು ಬಾಹಿರ ಚಟುವಟಿಕೆಗಳಾದ ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್/ಮಟ್ಕಾ/ಜೂಜಾಟ ಮುಂತಾದವುಗಳಲ್ಲಿ ತೊಡಗಿರುವ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ತಕ್ಷಣ 112 ತುರ್ತು
    ಸಹಾಯವಾಣಿ / ಹತ್ತಿರದ ಪೊಲೀಸ್ ಠಾಣೆ / ಪೊಲೀಸ್ ಕಂಟ್ರೋಲ್ ರೂಂ ನಂ 9480803300/ 08182-
    261413 ಗೆ ಮಾಹಿತಿ ನೀಡುವಂತೆ ಶಿವಮೊಗ್ಗ ಪೊಲೀಸ್ ಇಲಾಖೆ ತಿಳಿಸಿದೆ.
Leave A Reply

Your email address will not be published.

error: Content is protected !!