ಇನ್ನೊಂದು ವಾರದಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ಫೈನಲ್‌ ಆಗುತ್ತೆ ; ಡಿಕೆಶಿ

ಶಿವಮೊಗ್ಗ: ಇನ್ನೊಂದು ವಾರದಲ್ಲಿ ಕಾಂಗ್ರೆಸ್ ಟಿಕೆಟ್ ಫೈನಲ್ ಮಾಡಲಾಗುವಿದಹ. ಬಿಎಸ್‌ವೈ ಹೆಸರಿಗೆ ತಕರಾರಿಲ್ಲ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನದು ತಕರಾರಿಲ್ಲ. ಅನೇಕ ವರ್ಷದಿಂದ ಶಿವಮೊಗ್ಗದ ಅಭಿವೃದ್ಧಿಗೆ ಬಿಎಸ್‌ವೈ ಅವರು ಶ್ರಮಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಕಟಿಸಿದರು.


ಸುದ್ದಿಗಾರರೊಂದಿಗೆ ಅವರು ಮಾತನಾಡಿದರು, ತೀರ್ಥಹಳ್ಳಿ ಮತ್ತು ಭದ್ರಾವತಿ ಎರಡು ಕ್ಷೇತ್ರದಲ್ಲಿ ಪ್ರಜಾಧ್ವನಿ ಯಾತ್ರೆ ಮಾಡಿದ್ದೇವೆ. ಬೇರೆ ಕ್ಷೇತ್ರದಲ್ಲಿ ಶೀಘ್ರದ ಯಾತ್ರೆ ನಡೆಯಲಿದೆ. ಎರಡು ಕ್ಷೇತ್ರದಲ್ಲಿ ಜನ ಉತ್ತಮ ಬೆಂಬಲ ನೀಡಿ ಎಂದರು.
ರಾಜ್ಯದ ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತು ಹಾಕಬೇಕು ಎಂದು ಜನ ಬೆಂಬಲ ನೀಡುತ್ತಿದ್ದಾರೆ. ಅವರ ಅಪೇಕ್ಷೆಯಂತೆ ನಾವು ಕೂಡ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಹಲವು ಜನಪರ ಯೋಜನೆ ಜಾರಿ ತಂದಿತ್ತು. ಆದರೆ ಬಿಜೆಪಿ ಸರ್ಕಾರ ಅದನ್ನು ನಿಲ್ಲಿಸಿದೆ ಎಂದು ಆರೋಪಿಸಿದರು.


ಮಲೆನಾಡಿನಲ್ಲಿ ಹಲವು ಸಮಸ್ಯೆಗಳಿದ್ದು, ನಮ್ಮ ಪ್ರಾಣಾಳಿಕೆಯಲ್ಲೂ ಹೇಳಿದ್ದೇವೆ. ಬಗರ್ ಹುಕುಂ, ಅರಣ್ಯಭೂಮಿ ಸಾಗುವಳಿ ರೈತರ ಹಿತಕಾಯಲು ನಾವು ಬದ್ದರಾಗಿದ್ದೇವೆ. ಈ ಯೋಜನೆ ಹಾಗೂ ಸರ್ಕಾರದ ಮೇಲೂ ಒತ್ತಡ ಹೇರಿದೆ ಎಂದು ಡಿಕೆಶಿ ಪ್ರಕಟಿಸಿದೆ.


ವಿಐಎಸ್‌ಎಲ್ ಕಾರ್ಖಾನೆಯ ಕುರಿತು ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ, ಮೈನಿಂಗ್ ನೀಡಿದರೆ ಕಾರ್ಖಾನೆ ಉಳಿಯುತ್ತದೆ ಎನ್ನುವುದಾದರೆ ಇಷ್ಟು ವರ್ಷ ಬಿಜೆಪಿ ಏನು ಮಾಡ್ತಾ ಇದ್ರು. ಡಬ್ಬಲ್ ಇಂಜಿನ್ ಸರ್ಕಾರ ಮಲಗಿತ್ತಾ ? ಎಂದು ಪ್ರಶ್ನಿಸಿದರು.
ಇಡಿ ಕಿರುಕುಳದ ಬಗ್ಗೆ ಮಾತ ನಾಡಿದ ಡಿಕೆಶಿ, ಯಂಗ್ ಇಂಡಿಯಾ ಮಗಳ ವಿದ್ಯಾಭ್ಯಾಸದ ಕುರಿತು ಪ್ರಶ್ನೆ ಕೇಳ್ತಾರೆ ಎಂದರೆ ಇದು ಯಾವ ತರಹದ ವಿಚಾರಣೆ ಎಂಬುದು ತಿಳಿಯುತ್ತದೆ. ಈ ಬಗ್ಗೆ ಪತ್ರ ಬರೆಯುವೆ ಎಂದರು.


ಶಿವಮೊಗ್ಗದ ಶಾಸಕರಾದ ಕೆ.ಎಸ್. ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಅವರಿಬ್ಬರೂ ಮೆಂಟಲಿ ಡಿಸ್ಟರ್ಬ್ ಆಗಿದೆ. ಸಚಿವ ಸ್ಥಾನ ಕಳೆದುಕೊಂಡು ಇವರಿಬ್ಬರೂ ಮೆಂಟಲಿ ಡಿಸ್ಟರ್ಬ್ ಆಗಿದೆ. ಸಂಘಟನೆಯಲ್ಲೂ ಅವರು ಇಲ್ಲ ಎಂದು ಕಿಚಾಯಿಸಿದರು.
ರಮೇಶ್ ಜರಕಿಹೊಳಿ ತನಿಖೆಗೆ ನೀಡಲಿ ನನ್ನ ಅಭ್ಯಂತರವಿಲ್ಲ. ಅವರು ಕೋರ್ಟ್‌ಗೆ ಏನು ಅಫಿಡವಿಟ್ ನೀಡಿ ಎಂದು ಹೇಳಿದರು. ನನ್ನ ಹೆಸರು ಮಾತನಾಡಿದರೆ ಮಾತ್ರ ಅವರಿಗೆ ಪ್ರಚಾರ ಸಿಗುತ್ತದೆ. ಕಾಂಗ್ರೆಸ್‌ನಲ್ಲಿ ರಾಜ್ಯದಲ್ಲಿ ನಾಯಕರಿಲ್ಲ ಎಂದು ರಾಹುಲ್‌ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯನ್ನು ಕರೆಸುತ್ತಿದ್ದಾರೆ ಎಂಬ ಬಿಜೆಪಿ ಟೀಕೆಗೆ ಕಾಂಗ್ರೆಸ್‌ನಲ್ಲಿ ಸಾಮೂಹಿಕ ನಾಯಕತ್ವ ಎಂದು ತಿರುಗೇಟು ನೀಡಿದರು.


ಯಡಿಯೂರಪ್ಪ ಕಣ್ಣೀರು ಹಾಕಲು ಏನು ಕಾರಣ. ಅವರನ್ನು ಏಕೆ ಅಧಿಕಾರದಿಂದ ಕೆಳಗಿಳಿಸಿದರು. ಅದಕ್ಕೆ ಮೊದಲು ಬಿಜೆಪಿಯವರು ಸಮರ್ಪಕ ಉತ್ತರ ನೀಡಲಿ ಎಂದ ಅವರು, ಅವರ ಮೇಲೆ ಭ್ರಷ್ಟಾಚಾರದ ಆರೋಪ ಇದೆ ಎನ್ನುವುದನ್ನು ಜನರಿಗೆ ತಿಳಿಸಲಿ ಎಂದರು.
ನಮ್ಮ ಮನೆ ಕಾರ್ಯಕರ್ತರು ಮನೆಗೆ ಹೋಗಿ ಮಹಿಳೆಯರಿಗೆ 2 ಸಾವಿರ ರೂ. ಮತ್ತು ಉಚಿತ ವಿದ್ಯುತ್ ಬಗ್ಗೆ ಮತದಾರರಿಗೆ ಗ್ಯಾರಂಟಿ ನೀಡಲಿಜ್ರೆ ಹೇಳಿದರು.


ಶಿವಮೊಗ್ಗ ನಗರದಲ್ಲಿ ಅವರ ಪಕ್ಷದ ಆಯನೂರು ಮಂಜುನಾಥ್ ಅವರೇ ಫ್ಲೆಕ್ಸ್ ಮೂಲಕ ಸತ್ಯವನ್ನು ಹೇಳಿದರು. ಶಿವಮೊಗ್ಗ ಯಾವಾಗಲೂ ಶಾಂತಿ ಪದೇ ಪದೇ ಕದಡುತ್ತಿದೆ. ಸಣ್ಣಪುಟ್ಟ ವ್ಯಾಪಾರಸ್ಥರು ವ್ಯಾಪಾರ ವ್ಯವಹಾರ ಮಾಡುವ ಸ್ಥಿತಿಯಲ್ಲಿಲ್ಲ. ಬಡ್ಡಿ ಕಟ್ಟಲು ಆಗುತ್ತಿಲ್ಲ. ಎಲ್ಲರೂ ಬಿಜೆಪಿ ಆಡಳಿತದ ಮೇಲೆ ನಿರಾಶರಾಗಿಜ್ರೆ. ಬಿಜೆಪಿಯ ನಾಯಕರು ತಲಾ 500 ಕೋಟಿ ಹಾಕಿ ಎರಡು ದೊಡ್ಡ ಕಾರ್ಖಾನೆಯನ್ನು ಸ್ಥಾಪಿಸಿ ಉದ್ಯೋಗವನ್ನಾದರೂ ನೀಡಬಹುದಿತ್ತು. ಅದು ಬಿಟ್ಟು ಇರುವ ಕಾರ್ಖಾನೆಯನ್ನು ಮುಚ್ಚಲು ಹೊರಟೆ. ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ ಎಂದರು.


ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್, ಬೇಳೂರು ಗೋಪಾಲಕೃಷ್ಣ, ಪ್ರಮುಖರಾದ ಮಂಜುನಾಥಗೌಡ, ಪಿ.ಓ. ಶಿವಕುಮಾರ್, ಎಸ್. ರವಿಕುಮಾರ್ ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,745FollowersFollow
0SubscribersSubscribe
- Advertisement -spot_img

Latest Articles

error: Content is protected !!