ಶಿವಮೊಗ್ಗ: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ರಮೀಜ ಬಿನ್ ಜಮಾಲ್ ಸಾಬ್ ಎಂಬುವವರ ಮಗಳು 32 ವರ್ಷದ ರಜಿಯಾ ಕೋಂ ಅತಾವುಲ್ಲಾ ಎಂಬುವವರು ತನ್ನ ಮಕ್ಕಳಾದ 12 ವರ್ಷದ ಫಾತಿಮಾ ಬಿನ್ ಅತಾವುಲ್ಲಾ ಹಾಗೂ 10 ವರ್ಷದ ಮಹಮದ್ ಹಾರೂನ್ ಬಿನ್ ಅತಾವುಲ್ಲಾ ಎಂಬುವವರನ್ನು ಕರೆದುಕೊಂಡು ಮೇ 14 ರಂದು ಮನೆಯಿಂದ ಹೋದವರು ಈವರೆಗೂ ವಾಪಸ್ಸು ಬಂದಿರುವುದಿಲ್ಲ.
ರಜಿಯಾ ಎಂಬುವವರ ಚಹರೆ ಕೋಲುಮುಖ, ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ, 4.8 ಅಡಿ ಎತ್ತರ, ಹಸಿರು ಬಣ್ಣದ ಚೂಡಿದಾರ್ ಧರಿಸಿರುತ್ತಾರೆ. ಕನ್ನಡ ಮತ್ತು ಉರ್ದು ಭಾಷೆ ಮಾತನಾಡುತ್ತಾರೆ.
ಮಗಳು ಪಾತಿಮಾ ಚಹರೆ 4.5ಅಡಿ ಎತ್ತರ, ದುಂಡುಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, 6ನೇ ತರಗತಿ ಓದುತ್ತಿದ್ದು, ಉರ್ದು ಭಾಷೆ ಮಾತನಾಡುತ್ತಾಳೆ. ಪಿಂಕ್ ಕಲರ್ ಚೂಡಿದಾರ ಧರಿಸಿರುತ್ತಾಳೆ.
ಮಗ ಮಹಮದ್ ಹಾರೂನ್ 4 ಅಡಿ ಎತ್ತರ, ದುಂಡುಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, 4 ನೇ ತರಗತಿ ಓದುತ್ತಿದ್ದು,ಉರ್ದು ಮತ್ತು ಕನ್ನಡ ಭಾಷೆ ಮಾತನಾಡುತ್ತಾನೆ. ಬಿಳಿ ಶರ್ಟ್ ಮತ್ತು ಚಡ್ಡಿ ಧರಿಸಿರುತ್ತಾನೆ.
ಈ ತಾಯಿ ಮಕ್ಕಳ ಸುಳಿವು ದೊರತಲ್ಲಿ ಕೂಡಲೇ ಗ್ರಾಮಾಂತರ ಪೊಲೀಸ್ ಠಾಣೆಗೆ ದೂ.ಸಂ.: 08182-261418/ 261410 /261422/ 9480803350 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.