ಹೊಸನಗರ ಮಾರಿಗುಡ್ಡ ಸ.ನಂ 112ರ ಕಲ್ಲು ಗಣಿಗಾರಿಕೆ ತಾತ್ಕಾಲಿಕ ಸ್ಥಗಿತ ; ವಿಂಧ್ಯಾ

0 54


ಹೊಸನಗರ: ಮಾರಿಗುಡ್ಡ ಸಮೀಪದಲ್ಲಿರುವ ಸರ್ವೆ ನಂಬರ್ 12ರ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಪು ಬರುವವರೆಗೆ ಕೆಲಸವನ್ನು ತಾತ್ಕಾಲಿಕ ಸ್ಥಗಿತ ಮಾಡಲು ಭೂ ವಿಜ್ಞಾನ ಇಲಾಖೆಯ ವಲಯ ಭೂ ವಿಜ್ಞಾನಿ ವಿಂಧ್ಯಾರವರು ಸೂಚಿಸಿದ್ದಾರೆ.


ಹೊಸನಗರ ಸಮೀಪ ಮಾರಿಗುಡ್ಡದ ಸಾರ್ವಜನಿಕರ ಮನೆಗಳಿಗೆ ತೋಟ ಗದ್ದೆಗಳಿಗೆ ದನಕರುಗಳಿಗೆ ತೊಂದರೆಯಾಗುತ್ತಿದೆ ಪಟ್ಟಣ ಪಂಚಾಯತಿ ವ್ಯಾಪ್ತಿ ಸಮೀಪವಿರುವುದರಿಂದ ಪಟ್ಟಣ ಪಂಚಾಯತಿಯ ಅಧೀನದ ಕುಡಿಯುವ ನೀರಿನ ಟ್ಯಾಂಕ್, ನ್ಯಾಯಾಲಯ, ಪೊಲೀಸ್ ವಸತಿ ಗೃಹ, ಬಡವರ ಮನೆಗಳಿಗೆ ಹಾಗೂ ಸಮೀಪ ಶಾಲೆಗಳಿರುವುದರಿಂದ ತೊಂದರೆಯಾಗುತ್ತಿದೆ ಬಾವಿಗಳು ಬತ್ತಿ ಹೋಗುತ್ತಿದೆ ಹೊಳೆಯ ನೀರು ಬತ್ತಿ ಹೋಗುತ್ತಿದೆ ಸಮೀಪ ಹಿಂದು ರುದ್ರ ಭೂಮಿಯಿದೆ ಸಾರ್ವಜನಿಕರು ಓಡಾಟ ನಡೆಸುವ ಸೇತುವೆ ಕುಸಿದಿದ್ದು ಹೊಸ ಸೇತುವೆ ನಿರ್ಮಾಣ ಮಾಡಲಾಗಿದೆ ಆದರೂ ಇವರು ಮಾಡುವ ಬ್ಲಾಸ್ಟಿಂಗ್‌ಗೆ ಆ ಸೇತುವೆಯು ಕುಸಿಯುತ್ತಿದೆ ಎಂದು ಹೊಸನಗರ ತಹಶೀಲ್ದಾರ್‌ರವರಿಗೆ, ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಹಾಗೂ ಶಿವಮೊಗ್ಗ ಭೂ ವಿಜ್ಞಾನ ಇಲಾಖೆಯ ಅದಿಕಾರಿಗಳಿಗೆ ಕೃಷಿಕ ರತ್ನಾಕರ್ ಹಾಗೂ ಮಾರಿಗುಡ್ಡದ ಗ್ರಾಮಸ್ಥರು ಲಿಖಿತ ದೂರು ನೀಡಿದ್ದು ದೂರಿಗೆ ಸ್ವಂದಿಸಿದ ಭೂ ವಿಜ್ಞಾನ ಇಲಾಖೆಯ ವಲಯ ಭೂ ವಿಜ್ಞಾನಿ ವಿಂಧ್ಯಾರವರ ಅದಿಕಾರಿಗಳ ತಂಡ ಹೊಸನಗರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ತನಿಖೆ ಮುಗಿಯುವವರೆಗೆ ಯಾವುದೇ ಕಲ್ಲುಗಣಿಗಾರಿಕೆ ನಡೆಸದಂತೆ ಕಲ್ಲು ಗಣಿಗಾರಿಕೆ ಮಾಲೀಕರಿಗೆ ಮೌಖಿಕವಾಗಿ ಹೇಳಿದ್ದು ನಂತರ ಲಿಖಿತ ನೋಟಿಸ್ ನೀಡುತ್ತೇವೆ ಎಂದು ತಿಳಿಸಿದ್ದಾರೆ.


ವಲಯ ಭೂ ವಿಜ್ಞಾನಿ ವಿಂದ್ಯಾರವರು ನಮ್ಮ ವರದಿಗಾರರೊಂದಿಗೆ ಮಾತನಾಡಿ, ಈ ಕಲ್ಲುಗಣಿಗಾರಿಕೆ ನಡೆಸಲು 2018ರಲ್ಲಿ 25 ವರ್ಷಕ್ಕೆ ನಡೆಸಲು ಅನುಮತಿ ನೀಡಲಾಗಿದೆ ನಾವು ಏಕಾಏಕಿ ನಿಲ್ಲಿಸಲು ಸಾಧ್ಯವಿಲ್ಲ ನೀವು ಹೇಳುವ ಪ್ರಕಾರ ಕಲ್ಲುಗಣಿಗಾರಿಕೆ ನಡೆಸುವ ಸಂದರ್ಭದಲ್ಲಿ ಬ್ಲಾಸ್ಟ್ ಮಾಡುವ ಬಗ್ಗೆ ಮುಂಜಾಗ್ರತೆ ತೆಗೆದುಕೊಳ್ಳುತ್ತಿಲ್ಲ ಎಂದು ದೂರು ನೀಡಿದ್ದಿರಿ ಬ್ಲಾಸ್ಟ್ ಮಾಡುವಾಗ ಮನೆಗಳಿಗೆ ತೋಟ ಗದ್ದೆಗಳಿಗೆ ಹಾನಿಯಾಗುತ್ತಿದೆ ಎಂದು ದೂರು ನೀಡಿರುವುದರಿಂದ ನಿಮಗೆ ಆಗುತ್ತಿರುವ ತೊಂದರೆಯ ಬಗ್ಗೆ ದೂರು ನೀಡಿದ್ದಿರಿ ಕಲ್ಲು ಗಣಿಗಾರಿಕೆ ಸ್ಥಗಿತ ಮಾಡಲು ದೂರಿನಲ್ಲಿ ತಿಳಿಸಿದ್ದೀರಿ ಶಿವಮೊಗ್ಗ ಜಿಲ್ಲಾಧಿಕಾರಿ ಸಮಿತಿಯ ಮುಂದೆ ದೂರನ್ನು ತರುತ್ತೇವೆ.

ಕಲ್ಲುಗಣಿಗಾರಿಕೆಯಿಂದ ಅಗುತ್ತಿರುವ ತೊಂದರೆಗಳ ಬಗ್ಗೆ ವಿವರಿಸುತ್ತೇವೆ ಮುಂದೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಮಿತಿ ಕಾರ್ಯನಿರ್ವಹಿಸುತ್ತದೆ ಕಲ್ಲುಗಣಿಗಾರಿಕೆಯ ಲೈಸನ್ಸ್ ರದ್ಧು ಮಾಡುವ ಅದಿಕಾರ ನಮಗಿಲ್ಲ ಅಂದರು.


ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಣಿ ಮಾನಸ, ಕಿರಿಯ ಸಹಾಯಕ ಅಭಿಯಂತಕರಾದ ಸೌದರ್ಯ, ಸಬ್‌ಇನ್ಸ್ಪೇಕ್ಟರ್ ನೀಲಾರಾಜ್ ನರಲಾರ ಗ್ರಾಮ ಲೆಕ್ಕಾಧಿಕಾರಿ ಕೌಶಿಕ್, ಪೊಲೀಸ್ ಸುರೇಶ್, ಅಶೋಕ್ ಹಾಗೂ ಸುಮಾರು ನೂರಕ್ಕಿಂತ ಹೆಚ್ಚು ಗ್ರಾಮಸ್ಥರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!