ಅತ್ಯಾಧುನಿಕ ಚಿಕಿತ್ಸೆ ಮೂಲಕ ಹೃದಯ ಕಾಯಿಲೆ ಗುಣ ಮಾಡಬಹುದು ; ಡಾ. ಶ್ರೀವತ್ಸ ನಾಡಿಗ

0 268

ಶಿವಮೊಗ್ಗ: ಹೃದಯದ ರಕ್ತನಾಳಗಳ ಬ್ಲಾಕೇಜ್ ಗಳು ವಯಸ್ಸು ಹೆಚ್ಚಿದಂತೆಲ್ಲಾ ಜಾಸ್ತಿಯಾಗುತ್ತಿದ್ದು, ಇಂತಹ ರೋಗಿಗಳಿಗೆ ಬೈಪಾಸ್ ಆಪರೇಷನ್ ಮಾಡುವುದು ಹಲವು ಬಾರಿ ಅಸಾಧ್ಯವಾಗಿರುವುದರಿಂದ ಇಂತಹ ರೋಗಿಗಳಿಗೆ ಅತ್ಯಾಧುನಿಕ ಚಿಕಿತ್ಸೆ ಮೂಲಕ ಗುಣಮುಖರನ್ನಾಗಿ ಮಾಡಬಹುದು ಎಂದು ಸಹ್ಯಾದ್ರಿ ನಾರಾಯಣ ಹೃದಯಾಲಯದ ಹೃದ್ರೋಗ ತಜ್ಞ ವೈದ್ಯರಾದ ಡಾ. ಶ್ರೀ ವತ್ಸ ನಾಡಿಗ ಹೇಳಿದ್ದಾರೆ.


ಅವರು ಗುರುವಾರ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಹೃದಯಾಘಾತ ಹಾಗೂ ಹೃದಯಕ್ಕೆ ಸಂಬAಧಿಸಿದ ಕಾಯಿಲೆಗಳೆಂದರೆ ಎಲ್ಲರೂ ಭಯಭೀತರಾಗುತ್ತಿದ್ದಾರೆ. ಆಹಾರ ಪದ್ಧತಿ ಬದಲಾವಣೆ, ಜಡಜೀವನ ಶೈಲಿ, ದುಶ್ಚಟಗಳಿಗೆ ಬಲಿಯಾಗಿತ್ತಿರುವ ನಮ್ಮ ಯುವ ಪೀಳಿಗೆ, ಕೆಲಸದಲ್ಲಿನ ಒತ್ತಡ, ಹೆಚ್ಚುತ್ತಿರುವ ವಯೋಮಾನ, ಹಲವಾರು ಕಾರಣಗಳಿಂದ ಹೃದಯದ ರಕ್ತನಾಳಗಳಲ್ಲಿ ರಕ್ತ ಸಂಚಾರಕ್ಕೆ ಅಡಚಣೆ ಉಂಟು ಮಾಡುವ ಕೊಲೆಸ್ಟಾçಲ್ ತುಂಬಿದ ಬ್ಲಾಕೇಜ್ ಗಳಾಗಿರುತ್ತವೆ. ಇದರಿಂದ ಎದೆನೋವು, ಹೃದಯಾಘಾತ, ಹೃದಯ ವೈಫಲ್ಯಕ್ಕೆ ಎಡೆ ಮಾಡಿಕೊಡುತ್ತದೆ ಎಂದರು.


ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಿರುವುದರಿಂದ ಹೃದಯದ ಕಾಯಿಲೆಗಳು ಚಿಕ್ಕ ವಯಸ್ಸಿನಲ್ಲೇ ತೀವ್ರವಾಗಿ ಕಾಣಿಸಿಕೊಳ್ಳುತ್ತಿವೆ. ಈ ರೀತಿಯ ರಕ್ತನಾಳಗಳ ಬ್ಲಾಕೇಜ್ ಗಳು ಕಂಡು ಬಂದಾಗ ರೋಗಿಗೆ ಔಷಧಿಗಳು ಪ್ರಯೋಜನವಾಗದಿದ್ದಾಗ ಆಂಜಿಯೋಪ್ಲಾಸ್ಟಿ ಅಥವಾ ಬೈಪಾಸ್ ಆಪರೇಷನ್ ಗಳನ್ನು ಮಾಡುತ್ತೇವೆ ಎಂದರು.
ವಯಸ್ಸು ಹೆಚ್ಚಿದಂತೆ ಕೊಲೆಸ್ಟಾçಲ್ ಅಂಶದ ಜೊತೆಗೆ ಕ್ಯಾಲ್ಸಿಯಂ ಅಂಶವೂ ತುಂಬಿದಾಗ ಬ್ಲಾಕೇಜ್ ಗಳು ಗಟ್ಟಿಯಾಗಿ ಅಸ್ಥಿಯಷ್ಟು ಕಠಿಣವಾಗುತ್ತದೆ. ಇಂತಹ ಬ್ಲಾಕೇಜ್ ಗಳಿಗೆ ಆಂಜಿಯೋಪ್ಲಾಸ್ಟಿ ಅಥವಾ ಸ್ಟೆಂಟ್ ಅಳವಡಿಸುವುದರಿಂದ ಕೆಲವೊಮ್ಮೆ ಸ್ಟೆಂಟ್ ಗಳು ಹಠಾತ್ ಆಗಿ ಬಂದ್ ಆದರೆ ಹೃದಯಾಘಾತವಾಗುವ ಸಂಭವ ಇರುತ್ತದೆ. ಅದಕ್ಕಾಗಿ ಈ ಕ್ಯಾಲ್ಸಿಯಂಭರಿತ ಬ್ಲಾಕೇಜ್ ಗಳಿಗೆ ವಜ್ರದಿಂದ ಮಾಡಿದ ರೊಟೇಷನಲ್ ಅಥೆರೆಕ್ಟಮಿ ಹಾಗೂ ಇತ್ತೀಚೆಗೆ ಇಂಟರ್ ವ್ಯಾಸ್ಕುö್ಯಲರ್ ಲಿಥೋಟ್ರಿಪ್ಸಿ(ಐವಿಎಲ್) ಎಂಬ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ತಿಳಿಸಿದರು.


ಈ ಕ್ಯಾಲ್ಸಿಯಂ ತುಂಬಿದ ಬ್ಲಾಕೇಜ್ ಗಳನ್ನು ಸುಸೂತ್ರವಾಗಿ ಈ ಚಿಕಿತ್ಸೆಯಿಂದ ಸರಿಪಡಿಸಬಹುದು. ಗಟ್ಟಿಯಾದ ಜಾಗದಲ್ಲಿ ಒಂದು ಚಿಕ್ಕ ಬಲೂನ್ ಇರಿಸಿ ಶಾಕ ವೇವ್ ಗಳು 10 ಸೆಕೆಂಡ್ ವರೆಗೆ 6-8 ಬಾರಿ ನೀಡಲಾಗುತ್ತದೆ. ಇದರಿಂದ ಈ ಕ್ಯಾಲ್ಸಿಯಂ ಸುರಳಿ ಭೇದಿಸಬಹುದು. ಇದಾದ ನಂತರ ಸ್ಟೆಂಟ್ ಅಳವಡಿಸಿದರೆ ರೋಗಿಗೆ ಎದೆ ನೋವು ಇರುವುದಿಲ್ಲ ಎಂದರು.
ಈ ಚಿಕಿತ್ಸೆಯಿಂದ ಎರಡು ದಿನದಲ್ಲೇ ರಕ್ತನಾಳದಲ್ಲಿ ಶೇ. 90 ರಷ್ಟು ಬ್ಲಾಕೇಜ್ ಇದ್ದರೂ ಸಂಪೂರ್ಣ ಗುಣಮುಖರಾಗಬಹುದು ಎಂದರು.


ಗೋಷ್ಠಿಯಲ್ಲಿ ವೈದ್ಯಕೀಯ ಅಧೀಕ್ಷಕ ಡಾ. ಚಕ್ರವರ್ತಿ ಸಂಡೂರ, ವ್ಯವಸ್ಥಾಪಕ ನಿರ್ದೇಶಕ ವರ್ಗಿಸ್ ಪಿ. ಜಾನ್, ಅರಿವಳಿಕೆ ತಜ್ಞ ವೈದ್ಯ ಡಾ. ರಾಮಸುಂದರ್, ಡಾ. ಸಂದೀಪ್ ಕೋಠಿ, ಶೈಲೇಶ್ ಎಸ್.ಎನ್. ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!