ಅಪಘಾತ ; ಫಾರೆಸ್ಟ್ ಗೇಟ್ ವಾಚರ್ ಸಾವು !

0 948

ತೀರ್ಥಹಳ್ಳಿ : ರಾಷ್ಟ್ರೀಯ ಹೆದ್ದಾರಿ 169 ಎ ತೀರ್ಥಹಳ್ಳಿ ಆಗುಂಬೆ ಮಾರ್ಗದ ಬಾಳೇಬೈಲು ಮಲ್ನಾಡ್ ಕ್ಲಬ್ ಸಮೀಪ ರಾಕ್‌ವ್ಯೂವ್ ಹೋಟೆಲ್ ಎದುರು ಬುಲೆಟ್ ಬೈಕ್ ಮತ್ತು ಸ್ವಿಫ್ಟ್ ಕಾರು ನಡುವೆ ಭಾನುವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಫಾರೆಸ್ಟ್ ಗೇಟ್ ವಾಚರ್ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತನನ್ನು ಬುಲೆಟ್ ಬೈಕ್ ಸವಾರ ಆಗುಂಬೆ ಫಾರೆಸ್ಟ್ ಗೇಟ್ ವಾಚರ್ ರಮೇಶ್ (55) ಎಂದು ಗುರುತಿಸಲಾಗಿದೆ. ಗಾಯಗೊಂಡ ರಮೇಶ್ ರನ್ನು ತೀರ್ಥಹಳ್ಳಿ ಜೆ ಸಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.

error: Content is protected !!