ಕಳೂರು ರಾಮೇಶ್ವರ ಸೊಸೈಟಿಯ ವಾರ್ಷಿಕ ಸರ್ವ ಸದಸ್ಯರ ಸಭೆ | ₹ 26 ಲಕ್ಷ ನಿವ್ವಳ ಲಾಭ, ಷೇರುದಾರರಿಗೆ 6% ಡಿವಿಡೆಂಟ್ ಘೋಷಣೆ ; ವಿನಯ್‌ಕುಮಾರ್ ದುಮ್ಮ

0 212


ಹೊಸನಗರ: ಪಟ್ಟಣದ ಪ್ರತಿಷ್ಠಿತ ಸೊಸೈಟಿಗಳಲ್ಲಿ ಒಂದಾಗಿರುವ ಕಳೂರು ಶ್ರೀ ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 2022-23ನೇ ಸಾಲಿನಲ್ಲಿ 26,14,234.35 ರೂ. ಲಾಭ ಗಳಿಸಿದ್ದು ಷೇರುದಾರರಿಗೆ 6% ಡಿವಿಡೆಂಟ್ ನೀಡುವುದಾಗಿ ಸೊಸೈಟಿಯ ಅಧ್ಯಕ್ಷ ದುಮ್ಮ ವಿನಯ್‌ಕುಮಾರ್‌ರವರು ಸಭೆಯಲ್ಲಿ ತಿಳಿಸಿದರು.


ಪಟ್ಟಣದ ಗಾಯತ್ರಿ ಮಂದಿರದ ಆವರಣದಲ್ಲಿ ಕಳೂರು ಶ್ರೀ ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಆಯೋಜಿಸಲಾಗಿದ್ದು ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವು ಒಟ್ಟು 2723 ಷೇರುದಾರರನ್ನು ಹೊಂದಿದ್ದು ಷೇರು ಮೊಬಲಗು 1,35,09,792 ಹೊಂದಿದ್ದೇವೆ ನಮ್ಮ ಸಂಘವು ಒಟ್ಟು 6,50,38,275 ಠೇವಣಿ ಹೊಂದಿದೆ ಈಗಾಗಲೇ ಬೆಳೆ ಸಾಲವನ್ನು 788 ಜನ ರೈತರಿಗೆ 4,51,35,000 ರೂಪಾಯಿ ನೀಡಲಾಗಿದ್ದು ಸ್ವಂತ ಬಂಡವಾಳ ಬೆಳೆ ಸಾಲ 94 ರೈತರಿಗೆ 1,03,79,000 ನೀಡಲಾಗಿದೆ. ಜಾಮೀನು ಸಾಲ 106 ಸದಸ್ಯರಿಗೆ 97,53,905 ರೂಪಾಯಿ ನೀಡಲಾಗಿದೆ. ಇತರೆ ಸಾಲ 35 ಸದಸ್ಯರಿಗೆ 63,55,713 ರೂಪಾಯಿ ನೀಡಿದ್ದು ಒಟ್ಟು 1023 ಷೇರುದಾರ ಸದಸ್ಯರಿಗೆ 7,16,23,618 ರೂಪಾಯಿಗಳು ಹೊಸಬರು ಬೆಳೆ ಸಾಲ 51 ಜನ ಸದಸ್ಯರಿಗೆ 7100000 ಇತರೆ 2022-23ರ ಸಾಲಿನ ಮಾರಾಟ 8,42,49,109ಗಳಾಗಿದೆ.


ನಮ್ಮ ರೈತರ ಅನುಕೂಲಕ್ಕಾಗಿ ಜಿಲ್ಲಾ ಬ್ಯಾಂಕಿನಿಂದ 9.50% ಬಡ್ಡಿ ಎಸ್.ಎ.ಓ ಸಾಲಕ್ಕೆ ಕಟ್ಟಿ ನಮ್ಮ ಸಂಘದ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸಲಾಗುತ್ತಿದೆ ನಮ್ಮ ಸಹಕಾರ ಸಂಸ್ಥೆಗೆ 2022-23ನೇ ಸಾಲಿನಲ್ಲಿ ನಮ್ಮ ಆಡಿಟ್ ವರದಿಯಲ್ಲಿ ಎ. ಶ್ರೇಣಿ ಪಡೆದಿದ್ದು ಹೆಮ್ಮೆಯ ವಿಷಯವಾಗಿದ್ದು ರೈತ ಸದಸ್ಯರುಗಳಿಗೆ ಮೇ, ಜೂನ್ ಮತ್ತು ಜುಲೈ ತಿಂಗಳಲ್ಲಿ ನಮ್ಮ ಅಡಿಕೆ ಮತ್ತು ಭತ್ತ ಶುಂಠಿ ಬೆಳೆಗಳಿಗೆ ವಿಮೆ ಮಾಡಿಸಿದರೆ ಒಳ್ಳೆಯದು ಎಂದರು.


ನಮ್ಮ ಸಹಕಾರಿ ಸಂಘವು 2022-23ನೇ ಸಾಲಿನಲ್ಲಿ 100ಕ್ಕೆ 100% ವಸೂಲಾತಿಯಾಗಿದ್ದು ಸಂತೋಷದಾಯಕ ವಿಷಯವಾಗಿದ್ದು ನಮ್ಮ ಸಂಸ್ಥೆಯ ವತಿಯಿಂದ ಕೀಟನಾಶಕ, ರಸ ಗೊಬ್ಬರಗಳನ್ನು ಅತ್ಯಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದೇವೆ ರೈತರು ನಮ್ಮ ಸಂಘದ ಮೂಲಕವೇ ಕ್ರಿಮಿನಾಶಕ ಹಾಗೂ ಗೊಬ್ಬರವನ್ನು ಖರೀದಿಸುವ ಮೂಲಕ ನಮ್ಮ ಸಂಸ್ಥೆ ಬೆಳೆಯಲು ಸಹಕರಿಸಬೇಕೆಂದರು.


ಬೇರೆ ತಾಲ್ಲೂಕುಗಳಿಗೆ ಹೋಲಿಸಿದರೆ ನಮ್ಮ ತಾಲ್ಲೂಕಿನ ಸಹಕಾರಿ ಕ್ಷೇತ್ರ ಹಿಂದೆ ಬಿದ್ದಂತೆ ಕಾಣುತ್ತಿದ್ದು ಈ ಸಹಕಾರಿ ಕ್ಷೇತ್ರವನ್ನು ಎಲ್ಲ ತಾಲ್ಲೂಕಿನಂತೆ ಮುಂದೆ ತರಬೇಕಾದರೆ ನಮ್ಮ ತಾಲ್ಲೂಕಿನ ಸಹಕಾರಿಗಳ ಪಾತ್ರ ಪ್ರಮುಖವಾಗಿದ್ದು ಎಲ್ಲರೂ ಒಟ್ಟಾಗಿ ಕೈಜೋಡಿಸಿ ಹೊಸನಗರ ತಾಲ್ಲೂಕು ಕರ್ನಾಟಕದಲ್ಲಿಯೇ ಒಂದು ಸಹಕಾರಿ ಕ್ಷೇತ್ರವನ್ನಾಗಿ ಮಾಡುವ ಗುರಿ ಹೊಂದಿದ್ದು ಎಲ್ಲರೂ ಕೈ ಜೋಡಿಸಬೇಕೆಂದರು.

ಕಳೂರು ಸೊಸೈಟಿಯ ಸರ್ವ ಸದಸ್ಯರ ಸಭೆಯಲ್ಲಿ ಷೇರುದಾರರ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದವರ ಪರವಾಗಿ ಮಕ್ಕಳ ಪೋಷಕರಿಗೆ ಸನ್ಮಾನಿಸುತ್ತಿರುವುದು.


ನಮ್ಮ ಸೊಸೈಟಿಯ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಕೈ ಹಾಕಲಾಗಿದ್ದು ಶೀಘ್ರದಲ್ಲಿಯೇ ಗುದ್ದಲಿಪೂಜೆ ಮಾಡುತ್ತೇವೆ ಸಹಕಾರಿ ಧುರೀಣ ಮಂಜುನಾಥ ಗೌಡರ ಹಾಗೂ ಸಹಕಾರಿಗಳ ಧುರೀಣರ ಸಹಕಾರದೊಂದಿಗೆ ಒಂದು ವರ್ಷದಲ್ಲಿ ಸೊಸೈಟಿಯ ಕಟ್ಟಡ ಕಾಮಗಾರಿ ಮುಗಿಸುವ ಕಾರ್ಯ ಕೈಗೊಂಡಿದ್ದು ಸೊಸೈಟಿಯ ಎಲ್ಲ ಆಡಳಿತ ಮಂಡಳಿ, ಷೇರುದಾರ ಸದಸ್ಯರುಗಳು ಹಾಗೂ ಸಾರ್ವಜನಿಕರು ನಮ್ಮೊಂದಿಗೆ ಕೈ ಜೋಡಿಸಿ ಕಟ್ಟಡ ಕಾಮಗಾರಿ ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಈ ಸಂದರ್ಭದಲ್ಲಿ ಕೇಳಿಕೊಂಡರು.


ಷೇರುದಾರರ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಈ ಸಂದಭ್ದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಳೂರು ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಕೆ.ವಿ, ಸುರೇಶ ಹೆಚ್, ಕೆ.ಸಿ ರೂಪೇಶ, ವಸಂತಿ, ನಾಗರಾಜ ಕೆ.ಎಸ್. ಕೌಶಿಕ್, ಹೆಚ್. ಶ್ರೀನಿವಾಸ್, ಉಪಾದ್ಯಕ್ಷರಾದ ಎಂ.ಆರ್ ಚಂದ್ರಶೇಖರ, ನಿರ್ದೇಶಕರಾದ ಜಿ.ಆರ್ ಚಿನ್ನಪ್ಪ, ಜಿ.ಆರ್. ಮಲ್ಲಿಕಾರ್ಜುನ, ಸಿ.ಎನ್ ಗಂಗಾಧರ ನಾಯಕ್, ಶ್ರೀನಿವಾಸ ಕುಲಾಯಿ, ರವಿ.ಜಿ.ಎಸ್, ಹೂವಪ್ಪ, ಎಸ್.ಕೆ, ಲಲಿತಮ್ಮ, ಪ್ರಮೀಳ, ಜಯಕುಮಾರ್, ರುದ್ರಪ್ಪ, ಗುಬ್ಬಿಗಾ ಅನಂತರಾವ್, ಕಲ್ಯಾಣಪ್ಪ ಗೌಡ, ಪ್ರಭಾಕರ್, ಹೆಚ್. ಶ್ರೀನಿವಾಸ್ ಕಾಮಾತ್, ಜಯರಾಮ್, ಹೆಚ್. ಮಹಾಬಲರಾವ್, ಉಮೇಶ್ ಕಂಚುಗಾರ್, ಯುವರಾಜ್ ಗೌಡ, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!