ನಂದ ಗೋಕುಲ ಸೇವಾ ಟ್ರಸ್ಟ್‌ಗೆ 24 ಗಂಟೆಯೊಳಗೆ ಒಂದು ಲಕ್ಷ ರೂ.ಗಳಿಗೂ ಅಧಿಕ ದೇಣಿಗೆ ಸಂಗ್ರಹ

0 334

ಹೊಸನಗರ ; ಇಲ್ಲಿನ ಯುವಕರ ತಂಡವೊಂದು ನಂದಗೋಕುಲ ಸೇವಾ ಟ್ರಸ್ಟ್ ಮೂಲಕ ಗಾಯಗೊಂಡ ಗೋವುಗಳ ರಕ್ಷಣೆ ಮತ್ತು ಸೇವೆಗೆ ಮುಂದಾಗಿದೆ.

ನಂದ ಗೋಕುಲ ಸೇವಾ ಟ್ರಸ್ಟ್ ಗೋವುಗಳಿಗೆ ನೂತನ ಶೆಡ್ ನಿರ್ಮಾಣ ಮಾಡಿದೆ.‌ ಮನೆ ಕೆಲಸವನ್ನ ಬಿಟ್ಟು ಹಸುಗಳ ಸೇವೆಗೆ ಮುಂದಾಗಿದೆ. ಇದಕ್ಕೆ ಸರ್ಕಾರದಿಂದ ಸಹಾಯಧನ ಸಿಗುವ ನಿರೀಕ್ಷೆಯಂತೂ ಇಲ್ಲ. ಕೇವಲ ಸೇವೆಗೆ ಬೇಕಾದ ಅಗತ್ಯವಾಗಿರುವ ಧನ ಸಹಾಯಕ್ಕೆ ಮತ್ತೆ ಆಕಾಶ ನೋಡುವ ಸ್ಥಿತಿಯಾಗಿದೆ. ಮೇವು, ಚಿಕಿತ್ಸೆಗೆ ಬೇಕಾದ ಔಷಧಗಳು, ವೈದ್ಯರನ್ನ ಕರೆತಲು ಬೇಕಾದ ಸೌಕರ್ಯಕ್ಕೆ ಬೇರೆಯವರ ಬಳಿ ಮತ್ತೆ ಕೈಚಾಚುವ ಸ್ಥಿತಿ ನಿರ್ಮಾಣವಾಗಿದೆ.

ಆದರೆ ಪೂರ್ಣೇಶ್ ಮಲೇಬೈಲ್ ಇವರ ಬಳಿ ಯುವಕರು ಪ್ರಸ್ತಾಪವನ್ನು ಮಾಡಿದ್ದಾರೆ. ಶಿವಮೊಗ್ಗದ ಗಾಂಧಿಬಜಾರ್ ನ ವ್ಯಾಪಾರಿ ಮಿತ್ರರಲ್ಲಿ ಸಹಾಯ ಮಾಡುವಂತೆ ಮನವಿ ಸಲ್ಲಿಸಿದ್ದರ ಪರಿಣಾಮ ಕೇವಲ 24 ಗಂಟೆ ಒಳಗೆ 1,01,401 ರೂ. ಹಣ ದೇಣಿಗೆ ರೂಪದಲ್ಲಿ ಹರಿದು ಬಂದಿದೆ.

ಹವ್ಯಾಸಿ ಯುವಕರ ಶ್ರಮಕ್ಕೆ ಒಂದು ಭರವಸೆ ಮೂಡಿದೆ. ಅದು ಪೂರ್ಣೇಶ್ ಮಲೇಬೈಲಿನ ರೂಪದಲ್ಲಿ ದೊರೆತಿದೆ. ಆ ಹಣವನ್ನು ನಂದಗೋಕುಲ ಸೇವಾ ಟ್ರಸ್ಟ್‌ಗೆ ನೀಡಲಾಗಿದೆ.

Leave A Reply

Your email address will not be published.

error: Content is protected !!