ಭಾರೀ ಮಳೆಗೆ ಕುಸಿದು ಬಿದ್ದ ಮನೆ ಮೇಲ್ಛಾವಣಿ, ಅಪಾರ ನಷ್ಟ

0 437

ರಿಪ್ಪನ್‌ಪೇಟೆ: ಇಂದು ಬೆಳ್ಳಂಬೆಳಗ್ಗೆ ಸುರಿದ ಭಾರಿ ಮಳೆಯಿಂದಾಗಿ ಇಲ್ಲಿನ ಶಬರೀಶ ನಗರದ ಪುಟ್ಟಮ್ಮ ಕೋಂ ಲೇಟ್ ಗೋಪಾಲಪ್ಪ ಎಂಬುವರ ಮನೆಯ ಮೇಲ್ಚಾವಣಿ ಕುಸಿದು ಬಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

94 ಸಿ ಅಡಿ ಮನೆ ಮಂಜೂರಾತಿಯಾಗಿದ್ದು ಸರ್ಕಾರಕ್ಕೆ ಹಣ ಸಂದಾಯ ಮಾಡಲಾದರೂ ಕೂಡಾ ಈವರೆಗೂ ಹಕ್ಕುಪತ್ರವನ್ನು ನೀಡದೆ ಇದ್ದು ಜನತಾ ಮನೆಯಲ್ಲಿ ವಾಸ ಮಾಡುತ್ತಿರುವ ಪುಟ್ಟಮ್ಮ ಕೋಂ ಲೇಟ್ ಗೋಪಾಲ ಕೂಲಿ-ನಾಲಿ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದು ಇಂದು ಬೆಳಗ್ಗೆ ಸುರಿದ ಭಾರಿ ಮಳೆಯಿಂದಾಗಿ ಮನೆಯ ಮೇಲ್ಚಾವಣಿ ಕುಸಿದ ಪರಿಣಾಮ ದಿಕ್ಕು ತೋಚದ ಸ್ಥಿತಿಯಲ್ಲಿ ಅತ್ತೆ-ಸೊಸೆ ಮತ್ತು ಮೊಮ್ಮಗ ಪರಿತಪಿಸುವಂತಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿ ತುರ್ತು ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

Leave A Reply

Your email address will not be published.

error: Content is protected !!