ಭಾಷಾ ಹಬ್ಬ ಮಕ್ಕಳಲ್ಲಿ ಭಾಷೆಯ ಪ್ರಭುತ್ವ ಹೆಚ್ಚಿಸುವುದಕ್ಕೆ ಸಹಕಾರಿ ; ರಾಘವೇಂದ್ರ

0 496

ಸೊರಬ : ಭಾಷಾ ಹಬ್ಬ ಕಾರ್ಯಕ್ರಮವು ಮಕ್ಕಳಲ್ಲಿ ಭಾಷೆಯ ಒಂದು ಪ್ರಭುತ್ವವನ್ನು ಹೆಚ್ಚಿಸುವುದಕ್ಕೆ ಸಹಕಾರಿಯಾಗಿದೆ ಎಂದು ಕ್ಲಸ್ಟರ್ನ ಸಿ.ಆರ್.ಪಿ. ಎಂ.ಎಲ್ ರಾಘವೇಂದ್ರ ಹೇಳಿದರು.

ಚಂದ್ರಗುತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರದ ಆದೇಶದಂತೆ ಹಮ್ಮಿಕೊಂಡಿದ್ದು ಭಾಷಾ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಕ್ಕಳ ಭಾಷೆಗೆ ಸಂಬಂಧಪಟ್ಟಂತಹ ಕಥೆ, ಸಂಭಾಷಣೆ,ಕವನ, ನಾಟಕ ಅಂತಹ ಕಾರ್ಯಕ್ರಮಗಳನ್ನು ಶಾಲೆಯಲ್ಲಿ ಶಿಕ್ಷಕರು ಪರಿಚಯಿಸಿ ಮಕ್ಕಳಿಗೆ ಮಾರ್ಗದರ್ಶನ ಮಾಡಿಸಬೇಕು. ಇಂತಹ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸುವುದರಿಂದ ಮಕ್ಕಳಲ್ಲಿ ಭಾಷೆಯ ಬಗ್ಗೆ ಅಭಿಮಾನ ಮತ್ತು ಹಿಡಿತ ಬರುತ್ತದೆ‌. ಹಾಗಾಗಿ ಶಾಲಾ ಶಿಕ್ಷಣ ಇಲಾಖೆಯು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದರು.

ಮುಂದಿನ ದಿನಗಳಲ್ಲಿ ಚಂದ್ರಗುತ್ತಿ ಕ್ಲಸ್ಟರ್ ಹಂತದಲ್ಲಿ ಬರುವ ಎಲ್ಲಾ ಶಾಲೆಗಳ ಮಕ್ಕಳಿಗೆ ಪೂರಕವಾಗುವಂತೆ ಭಾಷಾ ಹಬ್ಬ ಕಾರ್ಯಕ್ರಮವನ್ನು ಆಚರಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಭಟ್ ವಹಿಸಿದ್ದರು. ಭಾಷಾ ಹಬ್ಬದ ಪ್ರಯುಕ್ತವಾಗಿ ವಿದ್ಯಾರ್ಥಿಗಳು ವಿವಿಧ ರೀತಿಯ ಕಾರ್ಯಕ್ರಮಗಳು ಪ್ರದರ್ಶಿಸಿದರು.


ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮವಾದ ಚಟುವಟಿಕೆಗಳನ್ನು ಕಾರ್ಯರೂಪಕ್ಕೆ ತರುವುದರ ಮೂಲಕ ಮಕ್ಕಳ ಭೌದ್ಧಿಕ ಮತ್ತು ಶೈಕ್ಷಣಿಕ ಪ್ರಗತಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುವುದರ ಜೊತೆಗೆ ಯಶಸ್ವಿಯ ದಿಕ್ಸೂಚಿಯನ್ನು ತೋರಿಸಿದ್ದಾರೆ ಎಂದು ಶಾಲಾ ಅಭಿವೃದ್ಧಿ ಸಮಿತಿಯವರು ಪ್ರಶಂಸೆ ವ್ಯಕ್ತಪಡಿಸಿದ್ದರು.

ಶಾಲೆಯ ಮುಖ್ಯ ಶಿಕ್ಷಕಿ ಶಾಂತಲಾ, ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಭವಾನಿ ಚಂದ್ರಕಾಂತ್, ಸದಸ್ಯರಾದ ಗಣೇಶ್ ಮರಡಿ, ಪ್ರಶಾಂತ್ ನಾಯ್ಕ್, ಪ್ರಕಾಶ್ ಭಟ್, ಗಣಪತಿ ಎಂ.ಜಿ, ಉಷಾ, ಯಾಸ್ಮಿನ್, ಸಲ್ಮಾ, ಶಿಕ್ಷಕರಾದ ಮಮತಾ, ನೂರ್ ಫಾತಿಮಾ, ಕಾವ್ಯ, ಭವ್ಯ, ಸೇರಿದಂತೆ ಪೋಷಕರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!