ರಕ್ತದಾನ ಶ್ರೇಷ್ಠದಾನ ; ಸಿಪಿಐ ಗುರಣ್ಣ ಎಸ್ ಹೆಬ್ಬಾಳ್

0 507

ಹೊಸನಗರ: ಜಗತ್ತಿನಲ್ಲಿ ತಂದೆ-ತಾಯಿಯನ್ನು ಬಿಟ್ಟರೆ ಯಾವುದೇ ವಸ್ತುವನ್ನಾದರೂ ಬೆಲೆ ಕೊಟ್ಟು ಕೊಂಡುಕೊಳ್ಳಬಹುದು. ಆದರೆ, ಕಷ್ಟಕರ ಕಾಲದಲ್ಲಿ ಒಬ್ಬ ವ್ಯಕ್ತಿಗೆ ರಕ್ತ ಬೇಕಾದರೇ ಸಿಗುವುದು ಕಷ್ಟ. ಅಂಥಹ ಸಂದರ್ಭದಲ್ಲಿ ರಕ್ತದಾನ ಮಾಡಿದರೇ ನೂರು ಕೋಟಿಯಷ್ಟು ಪುಣ್ಯ ಬರುತ್ತದೆ‌. ಆದ್ದರಿಂದ ಅನ್ನದಾನಕ್ಕಿಂತ ರಕ್ತದಾನ ಶ್ರೇಷ್ಠ ಎಂದು ಹೊಸನಗರ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್‌ ಎಂದರು.

ಹೊಸನಗರ ಪೊಲೀಸ್ ಠಾಣೆ ಆವರಣದಲ್ಲಿ ಪೊಲೀಸ್ ಇಲಾಖೆ, ಮೆಗ್ಗಾನ್ ರಕ್ತನಿಧಿ ಕೇಂದ್ರ ಶಿವಮೊಗ್ಗ ಹೆಚ್.ಡಿ.ಎಫ್.ಸಿ ಬ್ಯಾಂಕ್ ತೀರ್ಥಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ತೀರ್ಥಹಳ್ಳಿ ಡಿವೈಎಸ್‌ಪಿ ಗಜಾನನ ಸುತಾರ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್‌ ಮಾರ್ಗದರ್ಶನದಲ್ಲಿ ರಕ್ತದಾನ ಶಿಬಿರಾವನ್ನು ಏರ್ಪಡಿಸಲಾಗಿದ್ದು ರಕ್ತದಾನ ಮಾಡಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ರಕ್ತಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿದ್ದು ಯಾವುದೇ ಆಸ್ಪತ್ರೆಗಳಿಗೆ ಹೋದರೂ ರಕ್ತ ಸಿಗುತ್ತಿಲ್ಲ. ರಕ್ತಕ್ಕಾಗಿ ಅಲೆಯುವವರ ಸಂಖ್ಯೆ ಹೆಚ್ಚಾಗಿದೆ ಇದರ ಜೊತೆಗೆ ರಸ್ತೆ ಅಪಘಾತದಲ್ಲಿ ನವಯುವಕರು ಬಲಿಯಾಗುತ್ತಿರುವುದು ಪೆಟ್ಟು ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಿದೆ ತುರ್ತು ರಕ್ತ ಬೇಕದಾಗ ರಕ್ತ ಹುಡುಕುವುದು ಕಷ್ಟ‌. ಆದ್ದರಿಂದ ಆರೋಗ್ಯವಂತ ಪ್ರತಿಯೊಬ್ಬರು ರಕ್ತದಾನ ಶಿಬಿರದಲ್ಲಿ ಬಾಗವಹಿಸಿ ರಕ್ತದಾನ ಮಾಡಬೇಕೆಂದು ಕೇಳಿಕೊಂಡರು.

ಹೊಸನಗರ ಸಬ್ ಇನ್ಸ್‌ಪೆಕ್ಟರ್ ಶಿವಾನಂದ್‌ ಕೋಳಿ ರಕ್ತದಾನ ಮಾಡಿ ಮಾತನಾಡಿ, 18 ವರ್ಷ ಮೇಲ್ಪಟ್ಟವರು ಆರೋಗ್ಯವಂತರು ರಕ್ತದಾನ ಮಾಡಿ ಇನೊಂದು ಜೀವಕ್ಕೆ ಆಸರೆಯಾಗಬೇಕು ನಮ್ಮ ದೇಹದಿಂದ ಒಂದು ಬಾಟಲ್ ರಕ್ತ ತೆಗೆದರೆ ಯಾವುದೇ ತೊಂದರೆಯಾಗುವುದಿಲ್ಲ. 24 ಗಂಟೆಯೊಳಗೆ ಎಷ್ಟು ರಕ್ತ ನೀಡಿದ್ದೇವೂ ಅಷ್ಟು ರಕ್ತ ಉತ್ಪತ್ತಿಯಾಗುತ್ತದೆ. ಪ್ರತಿಯೊಬ್ಬರು ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯದ ಜೊತೆಗೆ ಇನ್ನೊಬ್ಬರಿಗೆ ಸಹಾಯ ಮಾಡಿದಂತಾಗುತ್ತದೆ ಎಂದರು.

ಒಟ್ಟು 47 ಸಾರ್ವಜನಿಕರು ಹಾಗೂ ಅಧಿಕಾರಿಗಳ ವರ್ಗ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದರು.
ಭದ್ರಾವತಿಯ ಟ್ರಾಫಿಕ್ ಪೇದೆ ಹಾಲೇಶ್‌ರವರು ಕಾರ್ಯಕ್ರಮವನ್ನು ಆಯೋಜಿಸಿ 41ನೇ ಬಾರಿಗೆ ರಕ್ತದಾನ ಮಾಡಿದರು.

ಈ ಕಾರ್ಯಕ್ರಮದಲ್ಲಿ ಹೊಸನಗರದ ಎಎಸ್‌ಐ ಶಿವಪುತ್ತ, ಸತೀಶ್‌ರಾಜ್ ಹಾಗೂ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿ ರಕ್ತದಾನ ಮಾಡಿದರು.

Leave A Reply

Your email address will not be published.

error: Content is protected !!