ವಿದ್ಯಾರ್ಥಿಗಳಲ್ಲಿ ಶಿಸ್ತು ಸಮಯಪಾಲನೆ, ವಿದ್ಯಾಭ್ಯಾಸದ ಮೂಲಕ ತಮ್ಮ ಪ್ರತಿಭೆ ಹೊರಹಾಕಬೇಕು ; ಸ್ವಾಮಿರಾವ್

0 474

ಹೊಸನಗರ: ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಶಿಸ್ತು ಸಮಯ ಪರಿಪಾಲನೆ ಹಾಗೂ ವಿದ್ಯಾಭ್ಯಾಸದ ಮೂಲಕ ತಮ್ಮ ಪ್ರತಿಭೆಯನ್ನು ಹೊರ ಹಾಕಬೇಕೆಂದು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸ್ವಾಮಿರಾವ್‌ ಹೇಳಿದರು

ಪಟ್ಟಣದ ಗಾಯತ್ರಿ ಮಂದಿರದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವೆಲ್ಲರೂ ಓದುವಾಗ ಮನೆ-ಮನೆಗಳಲ್ಲಿ ಕಷ್ಟಕರವಾದ ಕಾಲವಿತ್ತು. ಒಂದು ಹೊತ್ತು ಊಟಕ್ಕೂ ತೊಂದರೆಯಾಗಿತ್ತು ಆದರೆ ಈಗ ಕಾಲೇಜ್‌ಗಳಿಗೆ ಬರುವ ಮನೆ ಕಡೆಯಿಂದ ಯಾವುದೆ ತೊಂದರೆಯಿದ್ದಂತೆ ಕಾಣುವುದಿಲ್ಲ ತಂದೆ-ತಾಯಿಯರು ಹಗಲು-ರಾತ್ರಿ ಎನ್ನದೇ ಕಷ್ಟಪಟ್ಟು ದುಡಿದು ಕಾಲೇಜ್‌ಗಳಿಗೆ ಕಳುಹಿಸುತ್ತಾರೆ. ಅವರ ಕಷ್ಟಗಳನ್ನು ಮನಗೊಂಡು ನಾನು ಈ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬಾಳಿ ತೋರಿಸಬೇಕೆಂದು ಪ್ರತಿಯೊಬ್ಬ ವಿದ್ಯಾರ್ಥಿ ವಿದ್ಯಾರ್ಥಿನೀಯರು ದೃಢ ಸಂಕಲ್ಪಮಾಡಿಕೊಂಡು ಓದಬೇಕು ಎಂದರು.


ಮೊಬೈಲ್ ಹುಚ್ಚು ಬಿಡಿ, ಓದುವ ಕಡೆ ಗಮನ ಹರಿಸಿ:
ನಾವೆಲ್ಲರೂ ಓದುವಾಗ ಮೊಬೈಲ್ ಇರಲಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಊಟ ಮಾಡಲು ಅಕ್ಕಿ ಇಲ್ಲದಿದ್ದರೂ ಪ್ರತಿಯೊಬ್ಬರ ಮನೆಗಳಲ್ಲಿ ಎರಡ್ಮೂರು ಮೊಬೈಲ್‌ಗಳಿವೆ. ಪ್ರತಿ ನಿಮಿಷಕ್ಕೊಮ್ಮೆ ಅದನ್ನು ನೋಡುತ್ತಿರಬೇಕು, ಮೆಸೇಜ್ ಕಳುಹಿಸುತ್ತಿರಬೇಕು, ಮೊಬೈಲ್ ಬೇಕು ಆದರೆ ಮೊಬೈಲ್‌ನಿಂದ ಉಪಯೋಗ ಪಡೆದುಕೊಳ್ಳಿ ಅದನ್ನು ಬಿಟ್ಟು ಅದರ ಹುಚ್ಚು ಹಿಡಿಸಿಕೊಂಡರೆ ಮುಂದಿನ ದಿನದಲ್ಲಿ ನೀವು ಹುಚ್ಚರಾಗುವ ಜೊತೆಗೆ ನಿಮ್ಮ ಮುಂದಿನ ಜೀವನವನ್ನು ನಾಶ ಮಾಡುತ್ತದೆ ನಿಮ್ಮ ತಂದೆ-ತಾಯಿಯರು ಕಷ್ಟ ಪಟ್ಟಿದ್ದಕ್ಕೂ ಪ್ರಯೋಜನವಿಲ್ಲ ನಿಮ್ಮ ಜೊತೆಗೆ ನಿಮ್ಮ ತಂದೆ-ತಾಯಿಯರನ್ನು ಅಕ್ಕ-ತಂಗಿಯರನ್ನು ಅಣ್ಣ-ತಮ್ಮಂದಿರನ್ನು ಈ ಮೊಬೈಲ್ ಬಲಿ ತೆಗೆದುಕೊಳ್ಳುವುದರಿಂದ ಮೊಬೈಲ್ ಹುಚ್ಚು ಬಿಟ್ಟು ಓದುವ ಕಡೆಗೆ ಗಮನ ಹರಿಸಿ ಎಂದರು.

ಈ ಕಾರ್ಯಕ್ರಮವನ್ನು ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಉದ್ಘಾಟಿಸಿ ಮಾತನಾಡಿ, ಮುಂದಿನ ಭವಿಷ್ಯದಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಮಾತನಾಡಿದರು.


ಈ ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನ ಸಿಡಿಸಿ ಕಮಿಟಿಯ ಉಪಾಧ್ಯಕ್ಷರಾದ ಎಂ.ಪಿ ಸುರೇಶ್‌ ನಮ್ಮ ಕಾಲೇಜಿನ ಮಕ್ಕಳು ರಾಜ್ಯ ರಾಷ್ಟ್ರಮಟ್ಟದವರೆಗೆ ಹೋಗಿ ಬಹುಮಾನ ತಂದಿದ್ದಾರೆ. ಇವರನ್ನು ಪ್ರಶಂಶಿಸಬೇಕು. ಪ್ರತಿವರ್ಷ ನಮ್ಮ ಕಾಲೇಜಿಗೆ ಉತ್ತಮ ಫಲಿತಾಂಶ ಬರುತ್ತಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಫಲಿತಾಂಶ ಬರುವಂತೆ ವಿದ್ಯಾರ್ಥಿಗಳು ಉಪನ್ಯಾಸಕರು ನಾವು ನೀವು ಹೋರಾಟ ನಡೆಸಬೇಕಾಗಿದೆ ಅದಕ್ಕಾಗಿ ಎಲ್ಲ ರೀತಿಯ ಪ್ರಯತ್ನ ನಡೆಯುತ್ತಿದೆ ಎಂದರು.

ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಒಂದು ಸುಂದರ ಕಾರ್ಯಕ್ರಮವಾಗಿ ಹೊರಹೊಮ್ಮಿತು.
ಈ ಕಾರ್ಯಕ್ರಮದಲ್ಲಿ ಉಪ ನಿರ್ದೇಶಕರಾದ ಬಿ.ಕೃಷ್ಣಪ್ಪ, ರಿಪ್ಪನ್‌ಪೇಟೆ ಕಾಲೇಜಿನ ಪ್ರಾಂಶುಪಾಲ ಮಂಜುನಾಥ್, ದೈಹಿಕ ಶಿಕ್ಷಣ ಇಲಾಖೆಯ ಬಾಲಚಂದ್ರರಾವ್, ಸ್ಫೋಟ್ಸ್ ಕ್ಲಬ್ ಅಧ್ಯಕ್ಷ ಗುಬ್ಬಿಗಾ ಅನಂತರಾವ್, ದಾಮೋದರ ಶೆಣೈ, ಕೆ.ಟಿ ಶ್ರೀಧರ್, ಅಶೋಕಕುಮಾರ್, ಗಣಪತಿ, ಶಿವಕುಮಾರ್, ರವಿ, ಗಣೇಶ್, ಮಾಂತೇಶ್, ಸೀಮಾ, ಮೇಘನಾ, ಅರ್ಪಿತ ಸುಮಾ, ರೂಪ, ನಂದಿತಾ ಸಂತೋಷ್, ಟೀಕೇಶ್ ಡೇಲ್‌ವಿನ್, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ಸದಸ್ಯೆ ಕೃಷ್ಣವೇಣಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!