ತೀರ್ಥಹಳ್ಳಿಯಲ್ಲಿ ಜ.11ರಿಂದ ಮೂರು ದಿನಗಳ ಕಾಲ ಅದ್ದೂರಿ ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ

0 188

ತೀರ್ಥಹಳ್ಳಿ : ಮಲೆನಾಡಿನ ಹೆಬ್ಬಾಗಿಲು ತೀರ್ಥಹಳ್ಳಿಯ ಪುರಾಣ ಪ್ರಸಿದ್ದ ಶ್ರೀ ರಾಮೇಶ್ವರ ದೇವರ ಜಾತ್ರೆಗೆ ದಿನಗಣನೆ ಆರಂಭವಾಗಿದ್ದು ಜನವರಿ 11, 12 ಮತ್ತು 13ರಂದು ಸುಮಾರು 18 ಲಕ್ಷ ರೂ. ವೆಚ್ಚದಲ್ಲಿ ಅದ್ದೂರಿ ಜಾತ್ರೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತೆಪ್ಪೋತ್ಸವ ಸಮಿತಿ ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ ತಿಳಿಸಿದರು.

ಬುಧವಾರ ರಾಮೇಶ್ವರ ದೇವಸ್ಥಾನದಲ್ಲಿ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು, ಜ 11 ಕ್ಕೆ ತೀರ್ಥಸ್ನಾನ, 12 ಕ್ಕೆ ಬ್ರಹ್ಮರಥೋತ್ಸವ 13 ಕ್ಕೆ ಅದ್ದೂರಿ ತೆಪ್ಪೋತ್ಸವ ನಡೆಸಲು ನಿರ್ಧರಿಸಲಾಗಿದೆ.
ಮೂರು ದಿನಗಳ ವಿಜೃಂಭಣೆಯ ಜಾತ್ರಾ ಮಹೋತ್ಸವದಲ್ಲಿ ಬರುವ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದರು.

ಜ.15 ಕ್ಕೆ ಮಕರ ಸಂಕ್ರಾಂತಿ ರಥೋತ್ಸವ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಆರ್.ಎಂ ಮಂಜುನಾಥ್ ಗೌಡರು, ತಹಸೀಲ್ದಾರ್ ಜಕ್ಕಣ್ಣ ಗೌಡರ್ ಭಾಗಿಯಾಗಲಿದ್ದಾರೆ.
ತೆಪ್ಪೋತ್ಸವದ ದಿನ ಶಿವಾಕಾಶಿಯ ಪರಿಣಿತರಿಂದ ಸಿಡಿಮದ್ದಿನ ಸಂಭ್ರಮ ಇರಲಿದೆ ಹಾಗೂ ದೇವತಾ ಕಾರ್ಯಗಳು ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದರು

ಕಾರ್ಯಕ್ರಮಗಳೇನು ?
ಜ.09 ಮಂಗಳವಾರ ಶ್ರೀ ಗಣಪತಿ ಪೂಜೆ, ಪುಣ್ಯಾಹ, ಶತರುದ್ರಾಭಿಷೇಕ, ದೇವನಾಂದಿ, ಧ್ವಜಾರೋಹಣ, ಸಾಯಂಕಾಲ ರಂಗಪೂಜೆ, ಅಂಕುರಾರೋಪಣ, ಭೇರಿತಾಡನ, ಕೌತುಕ ಬಂಧನ, ಬಲಿ ಉತ್ಸವಗಳು ನಡೆಯಲಿದೆ.

ಜ. 10 ಬುಧವಾರ ಅಗ್ನಿಜನನ, ಅಧಿವಾಸ ಹೋಮ, ಮಹಾಪೂಜೆ, ಬಲಿ, ಸಂಜೆ 4-00 ಕ್ಕೆ ಪುರೋತ್ಸವ, ನಂತರ ರಂಗಪೂಜೆ, ಬಲಿ, ಸೇರಿ ಇತರ ಪೂಜೆ ನಡೆಯಲಿದೆ.

ಜ.11 ಗುರುವಾರ ಉಷಃ ಕಾಲದಲ್ಲಿ ಶ್ರೀ ಪರಶುರಾಮ ತೀರ್ಥಪೂಜೆ ತೀರ್ಥಾಭಿಷೇಕ ಮತ್ತು ತೀರ್ಥಸ್ಥಾನ ಪ್ರಾತಃಕಾಲದಲ್ಲಿ ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ, ಬಲಿ, ಉತ್ಸವ ಹಾಗೂ ಸಂಜೆ ರಂಗ ಪೂಜೆ, ರಾತ್ರಿ ಬಲಿ ಉತ್ಸವ ನಡೆಯಲಿದೆ.

ಜ. 12 ಶುಕ್ರವಾರ ಬೆಳಗ್ಗೆ ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ, ಉತ್ಸವಬಲಿ, ಶುಭ ಅಭಿಜಿನ್ ಮಹೂರ್ತದಲ್ಲಿ ಶ್ರೀ ಮನ್ಮಹಾರಥಾರೋಹಣ ರಾತ್ರಿ ಭೂತ ಬಲಿ, ಶಯನೋತ್ಸವ ನಡೆಯಲಿದೆ

ಜ.13 ಶನಿವಾರ ಪ್ರಭೋದೋತ್ಸವ, ಚೂರ್ಣೋತ್ಸವ, ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ ಬಲಿ, ಸಾಯಂಕಾಲ ಉತ್ಸವ, ರಾತ್ರಿ 7-00 ಕ್ಕೆ
ಅದ್ದೂರಿ ತೆಪ್ಪೋತ್ಸವ, ಸಂಧಾನ, ಪೂರ್ಣಾಹುತಿ, ಧ್ವಜ ಅವರೋಹಣ, ಪ್ರಸಾದ ವಿತರಣೆ ನಡೆಯಲಿದೆ.

ಜ.15 ಭಾನುವಾರದಂದು ಶುಭ ಅಭಿಜಿನ್ ಮಹೂರ್ತದಲ್ಲಿ ಮಕರ ಸಂಕ್ರಾಂತಿ ರಥೋತ್ಸವ ನಡೆಯಲಿದೆ ಎಂದು ತಿಳಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಕುಕ್ಕೆ ಪ್ರಶಾಂತ್, ಕಿಶೋರ್, ಜಯಪ್ರಕಾಶ್ ಶೆಟ್ಟಿ, ಅಶೋಕ್ ಶೆಟ್ಟಿ, ನಯನ, ವಾಣಿ, ರತ್ನಾಕರ್ ಶೆಟ್ಟಿ, ಪದ್ಮನಾಬ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!