ಹೊಸನಗರ ಪಪಂ ಆವರಣದಲ್ಲಿ ‘ಸ್ವಚ್ಛ ದೀಪಾವಳಿ ಮತ್ತು ಶುಭ ದೀಪಾವಳಿ’ ಅಭಿಯಾನ

0 581

ಹೊಸನಗರ: ದೇಶಾದ್ಯಂತ ಅದ್ಧೂರಿಯಾಗಿ ಆಚರಿಸುತ್ತಿರುವ ದೀಪಾವಳಿ ಹಬ್ಬವನ್ನು ವಿವಿಧ ರೀತಿಯ ಪಟಾಕಿಗಳನ್ನು ಸ್ಫೋಟಿಸುವುದರಿಂದ ಉಂಟಾಗುವ ಶಬ್ಧ, ವಾಯು ಮಾಲಿನ್ಯ ಮತ್ತು ತ್ಯಾಜ್ಯ ಉತ್ಪಾದನೆಯಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ತಡೆಗಟ್ಟಲು “ಸ್ವಚ್ಛ ದೀಪಾವಳಿ ಶುಭ ದೀಪಾವಳಿ” ಅಭಿಯಾನದಡಿ ಏಕಬಳಕೆ ಪ್ಲಾಸ್ಟಿಕ್ ಬದಲಾಗಿ ಪರ್ಯಾಯವಾದ ವಸ್ತುಗಳನ್ನು ಅಥವಾ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಬೇಕೆಂದು ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಹಾಲಗದ್ದೆ ಉಮೇಶ್‌ರವರು ಪಟ್ಟಣದ ಜನತೆಗೆ ಕರೆ ನೀಡಿದರು.

ಇಲ್ಲಿನ ಪಟ್ಟಣ ಪಂಚಾಯತಿ ಸಿಬ್ಬಂದಿ ವರ್ಗ ಪಟ್ಟಣ ಪಂಚಾಯತಿ ಸದಸ್ಯರ ನೇತೃತ್ವದಲ್ಲಿ ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿ ಅದರ ಜೊತೆಗೆ “ಸ್ವಚ್ಛ ದೀಪಾವಳಿ ಶುಭ ದೀಪಾವಳಿ” ಎಂಬ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಹಾಗೂ ಹಾಲಿ ಸದಸ್ಯರಾದ ಹಾಲಗದ್ದೆ ಉಮೇಶ್, ಸದಸ್ಯೆ ಗುಲಾಬಿ ಮರಿಯಪ್ಪ, ಕೃಷ್ಣವೇಣಿ ಬಿ, ಗುರುರಾಜ್, ಗಾಯಿತ್ರಿ ನಾಗರಾಜ್, ಚಂದ್ರಕಲಾ ನಾಗರಾಜ್, ಕಛೇರಿ ಸಿಬ್ಬಂದಿಗಳಾದ ಕಿರಿಯ ಅಭಿಯಂತರರು (ಪ್ರಭಾರ) ವಿಠ್ಠಲ್ ಹೆಗ್ಗಡೆ, ಆರೋಗ್ಯ ನಿರೀಕ್ಷಕರಾದ ಪ್ರಶಾಂತ್ ಎಂ.ಬಿ, ಉಮಾಶಂಕರ್, ಸುಮಿತ್ರ, ಬಸವರಾಜ್, ಲಕ್ಷ್ಮಣ್ ಜಿ, ಅಸ್ಮಾಬಾನು, ಕುಮಾರಿ, ರಾಧಾ, ಅಮೃತ, ಲತಾ, ಯಶೋಧ, ಚಂದ್ರಪ್ಪ, ಸಾಧು ಹಾಗೂ ಸ್ವ-ಸಹಾಯ ಸಂಘದ ಸದಸ್ಯರುಗಳು ಹಾಜರಿದ್ದರು.

Leave A Reply

Your email address will not be published.

error: Content is protected !!