ಶಿವಮೊಗ್ಗ ; ಧಗಧಗನೆ ಹೊತ್ತಿ ಉರಿದ ಕಾರ್ ಶೋರೂಂ

0 1,084

ಶಿವಮೊಗ್ಗ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ನಗರದ ಶಂಕರಮಠ ರಸ್ತೆಯಲ್ಲಿರುವ ರಾಹುಲ್ ಹ್ಯೂಂಡಾಯ್ ಕಾರ್‌ಶೋ ರೂಂಗೆ ಬೆಂಕಿ ತಗುಲಿದ್ದು, ಲಕ್ಷಾಂತರ ರೂ. ಮೌಲ್ಯದ ಕಾರು ಮತ್ತು ಇತರೆ ವಸ್ತುಗಳು ಸುಟ್ಟು ಕರಕಲಾಗಿವೆ.

ರಾತ್ರಿ 10 ಗಂಟೆಗೆ ಅಗ್ನಿ ಅವಘಡ ಸಂಭವಿಸಿದ್ದು, ಶೋ ರೂಂನಲ್ಲಿದ್ದ ಹೊಸ ಕಾರುಗಳು ಹಾಗೂ ಸರ್ವಿಸ್ ಗೆ ಬಂದಿದ್ದ ಲಕ್ಷಾಂತರ ರೂ. ಮೌಲ್ಯದ ಕಾರುಗಳು ಭಾಗಶಃ ಅಥವಾ ಪೂರ್ಣ ಬೆಂಕಿಗಾಹುತಿ ಆಗಿರುವುದಾಗಿ ತಿಳಿದುಬಂದಿದೆ.

ಶೋ ರೂಂ ಮೇಲ್ಬಾವಣಿಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಶೋ ರೂಂ ಸಿಬ್ಬಂದಿ, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಬೆಂಕಿ ಜೋರಾಗಿದ್ದು, ಪಕ್ಕದ ಆದಿಶಕ್ತಿ ಟಾಟಾ ಶೋ ರೂಂಗೂ ಬೆಂಕಿ ತಗುಲಿದೆ. ಕೂಡಲೇ ಅಗ್ನಿ ಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ.

ವಿಷಯ ತಿಳಿದು ದೊಡ್ಡ ಸಂಖ್ಯೆಯ ಜನರು ಶೋ ರೂಂ ಬಳಿ ಜಮಾಯಿಸಿದ್ದಾರೆ. ಕೋಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

Leave A Reply

Your email address will not be published.

error: Content is protected !!