ಹೊಸನಗರ ತಾಲೂಕಿನ ಹಲವೆಡೆ ಭಾರಿ ವರ್ಷಧಾರೆ ; ಯಡೂರಿನಲ್ಲಿ 103 ಮಿ.ಮೀ. ಮಳೆ ದಾಖಲು

0 3,237

ಹೊಸನಗರ : ಕಳೆದ ಕೆಲವು ದಿನಗಳಿಂದ ಬೇಸಿಗೆ ವಾತಾವರಣ ನಿರ್ಮಾಣವಾಗಿದ್ದ ಮಲೆನಾಡಿನಲ್ಲಿ ನಿನ್ನೆಯಿಂದ ಮಳೆ ಸುರಿಯುತ್ತಿದ್ದು, ಮಳೆ ಇಲ್ಲದ ಕಂಗೆಟ್ಟಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಇಂದು ಬೆಳಗ್ಗೆ 08 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ತಾಲೂಕಿನ ಯಡೂರಿನಲ್ಲಿ ಅತ್ಯಧಿಕ 103 ಮಿ.ಮೀ ಮಳೆಯಾಗಿದೆ‌.

ಉಳಿದಂತೆ ಮಾಣಿ 94, ಸಾವೇಹಕ್ಲು 78, ಮಾಸ್ತಿಕಟ್ಟೆ 75, ಚಕ್ರಾನಗರದಲ್ಲಿ 67, ಹುಲಿಕಲ್ 66, ಕಾರ್ಗಲ್ (ಸಾಗರ) 32, ಹೊಸನಗರದಲ್ಲಿ 12.6 ಮಿಲಿಮೀಟರ್ ಮಳೆಯಾಗಿದೆ.

1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಇಂದು ಬೆಳಿಗ್ಗೆ 8 ಗಂಟೆಗೆ 1786.75 ಅಡಿ ತಲುಪಿದ್ದು ಕಳೆದ ವರ್ಷ ಇದೇ ಅವಧಿಗೆ 1816.60 ಅಡಿ ನೀರು ದಾಖಲಾಗಿತ್ತು. ಜಲಾಶಯಕ್ಕೆ 7365 ಕ್ಯೂಸೆಕ್ ನೀರು ಹರಿದು ಬರುತ್ತಿವೆ.

Leave A Reply

Your email address will not be published.

error: Content is protected !!