ಹೊಸನಗರ ಬಿಜೆಪಿ ಮಂಡಲ ನೂತನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಜಯನಗರ ಪ್ರಹ್ಲಾದ್ !

0 797

ಹೊಸನಗರ : ಬಿಜೆಪಿ ಪಕ್ಷ ಯುವಕರಿಗೆ ರಾಜಕೀಯವಾಗಿ ಹೆಚ್ಚೆಚ್ಚು ಮಹತ್ವ ನೀಡುತ್ತ ಪಕ್ಷ ಸಂಘಟನೆ ಮುಂದಾಗುತ್ತಿದೆ ಎಂಬ ವಿಷಯದಲ್ಲಿ ನೂತ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ 2ನೇ ಬಾರಿಗೆ ಆಯ್ಕೆಯಾದ ಶಿವಮೊಗ್ಗ ಜಿಲ್ಲಾಧ್ಯಕ್ಷ ಟಿ.ಎಂ. ಮೇಘರಾಜ್ ಅವರೇ ನಮಗೆಲ್ಲಾ ಸಾಕ್ಷಿ ಅಂತಿದ್ದಾರೆ.

ಅತಿ ಶೀಘ್ರದಲ್ಲಿ ತಾಲೂಕುಗಳ ಪಕ್ಷದ ಮಂಡಲ ಅಧ್ಯಕ್ಷ ಸ್ಥಾನಗಳಿಗೂ ಸೂಕ್ತ ಸಾರಥಿಗಳ ನೇಮಕ ಕಾರ್ಯ ನಡೆಯಲಿದೆ. ಈ ಕಾರಣಕ್ಕೆ ಹೊಸನಗರ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಸ್ಥಾನಕ್ಕೆ ಹಲವು ಆಕಾಂಕ್ಷಿಗಳ ಹೆಸರು ಕೇಳಿಬರುತ್ತಿವೆ. ಅವರಲ್ಲಿ ಜಯನಗರ ಪ್ರಹ್ಲಾದ್ ಕೂಡ ಓರ್ವ.

ತಾಲೂಕಿನ ಬಹುತೇಕ ಯುವ ಸಮೂಹಗಳಿಗೆ ಜಯನಗರ ಪ್ರಹ್ಲಾದ್ ಎಂಬ ಯುವಕನ ಪರಿಚಯ ಚಿರಪರಿಚಿತ. ಈತ ಉತ್ತಮ ಸಂಘಟನಕಾರ. ಸುಮಾರು ಮೂರು ದಶಕಗಳಿಂದ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಕೂಡ. ವಿರೋಧಿಗಳಿಗೆ ಅವರದೇ ಶೈಲಿಯಲ್ಲಿ ತಕ್ಕ ಉತ್ತರ ನೀಡಬಲ್ಲ ಹೊಂದಾಣಿಕೆ ರಹಿತ ರಾಜಕಾರಣ ಇವರದ್ದು.
ಚಿಕ್ಕ ವಯಸ್ಸಿನಿಂದಲೇ ಅಕ್ರಮ ಗೋ ಸಾಗಾಣಿಕೆ, ಮತಾಂತರ ಕುರಿತಂತೆ ಹಲವರು ಬಾರಿ ಸಿಡಿದ್ದೆದ್ದು ಕೋರ್ಟ್ ಕಟ್ಟಳೆಗಳ ಅನುಭವ ಹೊಂದಿರುವ ಪ್ರಹ್ಲಾದ್ ತಾಲೂಕಿನ ಯುವಕರ ಕಣ್ಮಣಿ.

1995ರಲ್ಲಿ ತೀರ್ಥಹಳ್ಳಿ ತಾಲೂಕು ಬಿಜೆಪಿ ಯುವ ಮೋರ್ಚ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ಹೊತ್ತು ರಾಜಕೀಯ ರಂಗ ಪ್ರವೇಶಿಸಿದ ಇವರು, ನಂತರ ಜಿಲ್ಲಾ ಬಿಜೆಪಿ ಯುವ ಮೋರ್ಚ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.
ಬದಲಾದ ಸನ್ನಿವೇಶದಲ್ಲಿ ಜೀವನೋಪಯಾಕ್ಕಾಗಿ ಕುಟುಂಬದ ಹಿರಿಯರ ನಿರ್ಣಯದಂತೆ ಹೊಸನಗರ ಪಟ್ಟಣಕ್ಕೆ ಸಮೀಪ ಇವರು ಜಯನಗರ ಗ್ರಾಮದಲ್ಲಿ ನೆಲೆಕಂಡರು. ಅಲ್ಲದೆ, ದಶಕಗಳ ಕಾಲ ಹೊಸನಗರ ತಾಲೂಕು ಬಿಜೆಪಿ ಯುವ ಮೋರ್ಚ ಅಧ್ಯಕ್ಷನಾಗಿ ನೇಮಕಗೊಂಡು ತಮ್ಮದೇ ಗಟ್ಟಿಯಾದ ಬೆಂಬಲಿಗರ ತಂಡ ಕಟ್ಟಿ ಪಕ್ಷ ಸಂಘಟನೆಗೆ ಮುಂದಾದ ಕೀರ್ತಿ ಇವರಿಗೆ ಸಲ್ಲುತ್ತದೆ.

ಪ್ರಸಕ್ತ ಜಯನಗರ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಪ್ರಹ್ಲಾದ್, ಮಾಜಿ ಸಚಿವ ಹರತಾಳು ಹಾಲಪ್ಪ ಹಾಗೂ ಮಾಜಿ ಗೃಹ ಸಚಿವ, ಹಾಲಿ ಶಾಸಕ ಆರಗ ಜ್ಞಾನೇಂದ್ರ ಅವರ ಅತ್ಯಾಪ್ತರ ಬಳಗದಲ್ಲಿ ಗುರುತಿಸಿ ಕೊಂಡವರು. ಸಂಸದ ಬಿ.ವೈ ರಾಘವೇಂದ್ರ ಅವರೊಂದಿಗೂ ಸಹ ಉತ್ತಮ ರಾಜಕೀಯ ಬಾಂಧವ್ಯ ಹೊಂದಿವರು ಇವರ ಕಾರ್ಯಕ್ಷೇತ್ರವು ತೀರ್ಥಹಳ್ಳಿ ಹಾಗೂ ಹೊಸನಗರ ವಿಧಾನಸಭಾ ಕ್ಷೇತ್ರಗಳ ಕೊಂಡಿ ಅಂತಿರುವ ಗ್ರಾಮ ಜಯನಗರ. ನೇರ ನಡೆ, ನಿಷ್ಠುರವಾದಿ, ಪಕ್ಷ ನಿಷ್ಟೆ ಹೊಂದಿರುವ ಜಯನಗರ ಪ್ರಹ್ಲಾದ್ ಈ ಬಾರಿ ಹೊಸನಗರ ಬಿಜೆಪಿ ಮಂಡಲ ನೂತನ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂಬುದು ಈ ಬಾರಿಯ ವಿಶೇಷ.

ಪಕ್ಷಕ್ಕಾಗಿ ದುಡಿದ ಈವರೆಗಿನ ನನ್ನ ಕಾರ್ಯ ಚಟುವಟಿಕೆಯನ್ನು ಗುರುತಿಸಿ ಪಕ್ಷದ ವರೀಕ್ಷಟರು ನನಗೆ ಮಂಡಲ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದಲ್ಲಿ ಸೂಕ್ತವಾಗಿ ನಿರ್ವಹಿಸುವೆ ಎನ್ನುವ ಪ್ರಹ್ಲಾದ್, ಪಕ್ಷ ಕೈಗೊಳ್ಳುವ ಯಾವುದೇ ತರಹದ ತೀರ್ಮಾನಕ್ಕೆ ನಾನು ಮುಂದೆಯೂ ಬದ್ದ ಎನ್ನುವ ಮಾತನ್ನು ಹೇಳಲು ಕಡೆಗೂ ಅವರು ಮರೆಯಲಿಲ್ಲ.

Leave A Reply

Your email address will not be published.

error: Content is protected !!