Ayanuru Manjunath | BJP | K.S Eshwarappa | Shivamogga | Resignation | ಚುನಾವಣೆ ಹೊತ್ತಲ್ಲೇ ಬಿಜೆಪಿಗೆ ಬಿಗ್ ಶಾಕ್ ; MLC ಸ್ಥಾನಕ್ಕೆ ಆಯನೂರು ಮಂಜುನಾಥ್ ರಾಜೀನಾಮೆ ಘೋಷಣೆ

0 125

ಶಿವಮೊಗ್ಗ : ವಿಧಾನಸಭೆ ಚುನಾವಣೆಗೆ ಶಿವಮೊಗ್ಗ ನಗರ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತದಿಂದ ಶೀಘ್ರ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದೇನೆ ಎಂದು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.

ಕೆ.ಎಸ್ ಈಶ್ವರಪ್ಪ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿ ಅವರು, ಈಶ್ವರಪ್ಪಗೆ ಅಧಿಕಾರದ ಹಪಾಹಪಿ ಇದೆ. ಲಜ್ಜೆಗೆಟ್ಟು ಈಶ್ವರಪ್ಪ ತಮ್ಮ ಮಗನಿಗೆ ಟಿಕೆಟ್ ಕೇಳಿದ್ದಾರೆ ಎಂದಿರುವ ಆಯನೂರು ಮಂಜುನಾಥ್, ನಿಮ್ಮ ಮಗನ ಗೆಲ್ಲಿಸಿ ನಿಮ್ಮ ಸಾಮರ್ಥ್ಯ ಸಾಬೀತು ಮಾಡಿ. ನಿಮ್ಮ ಮಗ ಅಥವಾ ನಿಮ್ಮ ವಿರುದ್ಧ ಸ್ಪರ್ಧೆಗೆ ನಾನು ಸಿದ್ಧ ಎಂದು ಸವಾಲು ಹಾಕಿದ್ದಾರೆ.

ಬಿಜೆಪಿ ಪಕ್ಷದಲ್ಲಿ ಜೊತೆಗೆ ಕೆಲಸ ಮಾಡಿದವರಿಗೆ ಈಶ್ವರಪ್ಪ ಟಿಕೆಟ್ ಕೇಳಲಿಲ್ಲ. ಬದಲಾಗಿ ಲಜ್ಜೆಗೆಟ್ಟು ತಮ್ಮ ಮಗನಿಗೆ ಟಿಕೆಟ್ ಕೇಳಿದ್ದಾರೆ. ಬಿ.ಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಉಸ್ತುವಾರಿ ಸಚಿವರಾಗಿದ್ದ ಈಶ್ವರಪ್ಪ ಅವರನ್ನು ಸ್ವಾಗತಿಸಲಿಲ್ಲ. ಯಡಿಯೂರಪ್ಪ ಜೈಲಿಗೆ ಹೋಗಿದ್ದಾಗ ಲೇವಡಿ ಮಾಡಿದ್ದೀರಿ. ನಾನಾಗಿದ್ದರೆ ನೇಣು ಹಾಕಿಕೊಳ್ಳುತ್ತಿದೆ ಎಂದವರು ನೀವು. ಆದರೆ ನಿಮ್ಮ ಮೇಲೆ ಆರೋಪ ಬಂದಾಗ ನೇಣು ಹಾಕಿಕೊಳ್ಳಲಿಲ್ಲ ಎಂದು ಆಯನೂರು ವ್ಯಂಗ್ಯವಾಡಿದರು.

ಇನ್ನು, ಮಂತ್ರಿಯಾಗಿ ಸಂವಿಧಾನವನ್ನೇ ಈಶ್ವರಪ್ಪ ಅರ್ಥ ಮಾಡಿಕೊಂಡಿಲ್ಲ. ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದೀರಿ. ಯಡಿಯೂರಪ್ಪ ವಿರುದ್ಧ ಹಗುರವಾಗಿ ಮಾತನಾಡಿದ್ದೀರಿ. 32 ವರ್ಷದಲ್ಲಿ ಶಿವಮೊಗ್ಗಕ್ಕೆ ನಿಮ್ಮ ಕೊಡುಗೆ ಏನು? ಎಂದು ಕೆ.ಎಸ್.ಈಶ್ವರಪ್ಪ ಅವರನ್ನು ಆಯನೂರು ಮಂಜುನಾಥ್ ಪ್ರಶ್ನಿಸಿದ್ದಾರೆ.

Leave A Reply

Your email address will not be published.

error: Content is protected !!