Hosanagara | ಹೊರ ಜಿಲ್ಲೆಗಳ JCB ಮತ್ತು Hitachi ಯಂತ್ರಗಳು ನಮ್ಮ ತಾಲ್ಲೂಕಿನಲ್ಲಿ ಕೆಲಸ ನಿರ್ವಹಿಸುವುದು ಬೇಡ ; ಮನವಿ

0 3,094


ಹೊಸನಗರ: ತಾಲ್ಲೂಕಿನಲ್ಲಿರುವ ಜೆ.ಸಿ.ಬಿ. ಮತ್ತು ಹಿಟಾಚಿ ಯಂತ್ರಗಳು ಅಂದಾಜು 90ಕ್ಕಿಂತ ಹೆಚ್ಚು ಇದ್ದು ಕೆಲಸ ಮಾಡುತ್ತಿದೆ ನಾವು ಬ್ಯಾಂಕ್ ಸಾಲಗಳ ಮೂಲಕ ನಮ್ಮ ತಾಲ್ಲೂಕಿನ ರೈತರ ಹಿತಕ್ಕಾಗಿ ಜೆ.ಸಿ.ಬಿ ಮತ್ತು ಹಿಟಾಚಿಯನ್ನು ಇಟ್ಟುಕೊಂಡು ನಮ್ಮ ಜೀವನ ಹಾಗೂ ಕೆಲಸ ಮಾಡುವ ಆಪರೇಟರ್‌ಗಳ ಜೀವನ ನಡೆಸುತ್ತಿದೇವೆ. ಆದರೆ ಕೆಲವು ಗುತ್ತಿಗೆದಾರರು ಬೇರೆ ಜಿಲ್ಲೆಗಳಿಂದ ಜೆ.ಸಿ.ಬಿ ಮತ್ತು ಹಿಟಾಚಿ ತಂದು ದುಬಾರಿ ದರದಲ್ಲಿ ಕೆಲಸ ಮಾಡುತ್ತಿದ್ದು ಬೇರೆ ಜಿಲ್ಲೆಯ ಯಂತ್ರಗಳನ್ನು ತಂದು ನಮ್ಮ ತಾಲ್ಲೂಕಿನಲ್ಲಿ ಕೆಲಸ ಮಾಡಿದರೆ ನಾವು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಹಿಟಾಚಿ ಮತ್ತು ಜೆ.ಸಿ.ಬಿ ಯಂತ್ರದ ತಾಲ್ಲೂಕು ಮಾಲೀಕರ ಸಂಘದ ಅಧ್ಯಕ್ಷ ಸುರೇಶ್ ಶೆಟ್ಟಿಯವರು ಹೇಳಿದರು.


ಅವರು ಹೊಸನಗರ-ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣರವರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜುರವರಿಗೆ ಮನವಿ ಪತ್ರ ಸಲ್ಲಿಸಿ ಇದನ್ನು ಶಾಸಕರ ಗಮನಕ್ಕೆ ತರಬೇಕೆಂದು ಮನವಿ ಮಾಡಿ ಮಾತನಾಡಿದರು.

ಹೊರ ಜಿಲ್ಲೆಗಳಾದ ಹಾಸನ, ಬಿಜಾಪುರ, ಬಳ್ಳಾರಿ, ರಾಯಚೂರು, ಕೊಪ್ಪಳ, ಬೆಳಗಾವಿ, ದಾವಣಗೆರೆ ಇನ್ನಿತರ ಜಿಲ್ಲೆಗಳಿಂದ ಜೆ.ಸಿ.ಬಿ ಮತ್ತು ಹಿಟಾಚಿ ಯಂತ್ರಗಳು ಹೊಸನಗರ ತಾಲ್ಲೂಕಿಗೆ ಬಂದು ರೈತರ ಹಾಗೂ ಇತರೆ ಕೆಲಸಗಳನ್ನು ಮಾಡುತ್ತಿದ್ದಾರೆ ಆದರೆ ಹೊಸನಗರ ತಾಲ್ಲೂಕಿನಲ್ಲಿ ಜೆ.ಸಿ.ಬಿ ಮತ್ತು ಹಿಟಾಚಿ ಯಂತ್ರಗಳು 90ಕ್ಕಿಂತ ಹೆಚ್ಚು ಮಾಲೀಕರು ಹೊಂದಿರುತ್ತಾರೆ ಆದರೆ ಹೊರ ಯಂತ್ರಗಳಿಂದ ಇಲ್ಲಿನ ಯಂತ್ರಗಳಿಗೆ ಕೆಲಸ ಇಲ್ಲದಂತಾಗಿದೆ ನಾವು ಹೊರ ಜಿಲ್ಲೆಯಿಂದ ತಾಲ್ಲೂಕಿಗೆ ಬರುವ ಜೆ.ಸಿ.ಬಿ. ಮತ್ತು ಹಿಟಾಚಿ ಯಂತ್ರ ತಡೆಯಬೇಕಾಗಿದ್ದು ನಮಗೆ ನಿಮ್ಮ ಬೆಂಬಲಬೇಕಾಗಿದ್ದು ಮುಂದಿನ ದಿನದಲ್ಲಿ ನಮ್ಮ ಸಂಘದ ಹೊರ ಜಿಲ್ಲೆಯಿಂದ ಬರುವ ಜೆಸಿಬಿ ಮತ್ತು ಹಿಟಾಚಿ ಯಂತ್ರಗಳನ್ನು ತಡೆ ನಡೆಸುವುದರ ಜೊತೆಗೆ ಉಗ್ರ ಹೋರಾಟ ನಡೆಸುತ್ತೇವೆಂದು ಹೇಳಿದರು.


ಮನವಿ ಪತ್ರ ನೀಡುವ ಸಂದರ್ಭದಲ್ಲಿ ಉಪಾಧ್ಯಕ್ಷ ಶ್ರೀಧರ ಹಿಟಾಚಿ, ಕಾರ್ಯದರ್ಶಿ ಸಂತೋಷ್, ಖಜಾಂಚಿ ಮಹೇಶ್ ಬಾಣಿಗ, ಸದಸ್ಯರಾದ ಮಾಧವಶೆಟ್ಟಿ, ರಘು ಪಿ, ಧರ್ಮಪ್ಪ, ಪ್ರಶಾಂತ್, ಮಂಜುನಾಥ್, ಗಣಪತಿ, ಬಸವರಾಜ್, ತ್ರಿಬುವನ್, ಜಯನಗರ ಗೋಪಿ ಇನ್ನೂ ಮುಂತಾದ ಸದಸ್ಯರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!