Shivamogga | ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಲಾಡ್ಜ್ ಮೇಲೆ ಪೊಲೀಸರ ದಾಳಿ ; ಇಬ್ಬರು ಕಾಲೇಜ್ ವಿದ್ಯಾರ್ಥಿಗಳು ಪತ್ತೆ !

0 1,252

ಶಿವಮೊಗ್ಗ : ಅನೈತಿಕ ಚಟುವಟಿಕೆ ನಡೆಯುತ್ತಿದ್ದ ಲಾಡ್ಜ್ (Lodge) ಮೇಲೆ ಪೊಲೀಸರು (Police) ದಾಳಿ (Raid) ನಡೆಸಿದ್ದಾರೆ. ಲಾಡ್ಜ್ ಕೊಠಡಿಯಲ್ಲಿ ಕಾಲೇಜು ವಿದ್ಯಾರ್ಥಿಗಳೂ (College Students) ಪತ್ತೆಯಾಗಿದ್ದಾರೆ.

ಶಿವಮೊಗ್ಗ (Shivamogga)ದ ಕೆ‌.ಆರ್.ಪುರಂ ರಸ್ತೆಯಲ್ಲಿರುವ ಬ್ಲೂ ಕ್ರಿಸ್ಟಲ್ ಲಾಡ್ಜ್​ ಮೇಲೆ ಪೊಲೀಸರು ದಾಳಿ ಮಾಡಿದ್ದು ಈ ವೇಳೆ ಇಬ್ಬರೂ ವಿದ್ಯಾರ್ಥಿಗಳೂ ಇದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಅನೇಕ ಯುವಕ, ಯುವತಿಯರು ಲಾಡ್ಜ್​ಗೆ ಬಂದು ಹೋಗುವುದನ್ನು ಸ್ಥಳೀಯರು ಮೊಬೈಲ್​ನಲ್ಲಿ ಸೆರೆ ಹಿಡಿದು ಮಾಹಿತಿ ನೀಡಿದ್ದರು.

ಇನ್ನು ವಿದ್ಯಾರ್ಥಿಗಳು ಪರಸ್ಪರ ಒಪ್ಪಿಗೆ ಮೇರೆಗೆ ಲಾಡ್ಜ್​ಗೆ ಬಂದಿದ್ದರಂತೆ. ಹೀಗಾಗಿ ಲಾಡ್ಜ್​ ಪರವಾನಗಿ ರದ್ದುಪಡಿಸುವಂತೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದರು.

Leave A Reply

Your email address will not be published.

error: Content is protected !!