Shivamogga | ಕಾಂಗ್ರೆಸ್ ಸರ್ಕಾರದಿಂದ ಮತ ಬ್ಯಾಂಕ್‌ಗಾಗಿ ಮತಾಂದ ಶಕ್ತಿಗಳಿಗೆ ಕುಮ್ಮಕ್ಕು ; ಅರುಣ್ ಕುಮಾರ್ ಪುತ್ತಿಲ

0 92

ಶಿವಮೊಗ್ಗ : ಕಾಂಗ್ರೆಸ್ ಸರ್ಕಾರದಿಂದ ಮುಸ್ಲಿಂ ತುಷ್ಠೀಕರಣ ನಡೆಯುತ್ತಿದ್ದು, ಮತ ಬ್ಯಾಂಕ್‌ಗಾಗಿ ಮತಾಂದ ಶಕ್ತಿಗಳಿಗೆ ಕುಮ್ಮಕ್ಕು ಮತ್ತು ಸಹಕಾರ ನೀಡುವ ಕಾರ್ಯವನ್ನು ವ್ಯವಸ್ತಿತವಾಗಿ ಮಾಡಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.


ಅವರು ಇಂದು ಇತ್ತೀಚೆಗೆ ರಾಗಿಗುಡ್ಡದಲ್ಲಿ ನಡೆದ ಗಲಭೆಯಲ್ಲಿ ಹಾನಿಗೊಳಗಾದ ಸಂತ್ರಸ್ಥರ ಮನೆಗಳಿಗೆ ಭೇಟಿ ನೀಡಿ ಬಳಿಕ‌ ಸುದ್ದಿಗಾರರೊಂದಿಗೆ ಮಾತನಾಡಿ, ಘಟನೆಯಲ್ಲಿ ನೊಂದ ಮತ್ತು ಆಸ್ತಿಪಾಸ್ತಿ ನಷ್ಟ ಮಾಡಿಕೊಂಡ ಹಿಂದೂ ಬಾಂಧವರಿಗೆ ಸಾಂತ್ವನ
ಹೇಳಲು ಈ ಭಾಗಕ್ಕೆ ಭೇಟಿ ನೀಡಿದ್ದೇನೆ. ಸ್ಪಷ್ಟವಾಗಿ ಇದು ಪೂರ್ವನಿಯೋಜಿತ ಕೃತ್ಯ ಎಂದು ಕಣ್ಣಿಗೆ ಗೋಚರವಾಗುತ್ತದೆ. ಹಿಂದೂ ಮಹಾಸಭಾ ಗಣೇಶೋತ್ಸವ ಅದ್ಧೂರಿಯಾಗಿ ಯಶಸ್ವಿಯಾಗಿ ಜರುಗಿದ ಹಿನ್ನಲೆಯಲ್ಲಿ ಹಿಂದೂಗಳ ಐಕ್ಯತೆ ಆಗಬಾರದು ಎನ್ನುವ ದುರುದ್ದೇಶದಿಂದ ಪೂರ್ವ ಯೋಜಿತವಾಗಿ ಈ ಕೃತ್ಯಗಳನ್ನು‌ ಮಾಡಲಾಗಿದೆ.

ಶಾಂತಿ ಸೌಹಾರ್ದತೆಯನ್ನು ಹಿಂದೂ ಸಮಾಜ ಯಾವಾಗಲೂ ಬಯಸುತ್ತದೆ. ಆದರೆ ಹಿಂದೂ ಸಮಾಜ ದುರ್ಬಲವಾಗಿಲ್ಲ ನಮ್ಮನ್ನು ನವರಾತ್ರಿಗೆ ಆಯುಧ ಪೂಜೆಯನ್ನು ಮಾಡುತ್ತೇವೆ. ಅದೇ ಆಯುಧಗಳನ್ನು ಅನಿವಾರ್ಯವಾದರೆ ಬಳಸುವುದು ನಮಗೂ ಗೊತ್ತು. ಸಮಾಜಕ್ಕೆ ಶಕ್ತಿಕೊಡುವ ಯೋಚನೆಯಿಂದಲೇ ಈ ಆಯುಧ ಪೂಜೆಯನ್ನು ಪ್ರತಿ ಮನೆಯಲ್ಲೂ ಮಾಡಬೇಕೆಂಬ ಯೋಚನೆ ಇದೆ.


ತಲ್ವಾರ್‌ಗಳಿಗೆ ಪೂಜೆ ಮಾಡಿ ಅನಿವಾರ್ಯ ಸಂದರ್ಭದಲ್ಲಿ ಆತ್ಮ ರಕ್ಷಣೆಗಾಗಿ ಬಳಸಿಕೊಳ್ಳುವುದು ಕೂಡ ಹಿಂದೂ ಸಮಾಜಕ್ಕೆ ಗೊತ್ತಿದೆ. ಸಮಾಜವನ್ನು ಮಾನಸಿಕವಾಗಿ ಕುಗ್ಗಿಸುವ ಸರ್ಕಾರದ ಪ್ರಾಯೋಜಿತ ವ್ಯಕ್ತಿಗಳಿಗೆ ತಕ್ಕಪಾಠ ಕಲಿಸುತ್ತೇವೆ. ಹಾನಿಗೊಳಗಾದ ಎಲ್ಲಾ ಸಂತ್ರಸ್ಥರಿಗೆ ಮತ್ತು ಗಾಯಗೊಂಡವರಿಗೆ‌ ಸರ್ಕಾರ ಪರಿಹಾರ ನೀಡಬೇಕು. ಬಹುಸಂಖ್ಯಾತ ಬದುಕಲು ಕಷ್ಟದ ವಾತಾವರಣ ನಿರ್ಮಿಸುತ್ತೇವೆ ಎಂಬ ಭಾವನೆಯನ್ನು ಹೊಂದಿದ್ದರೆ ಅವರ ಯೋಜನೆಗೆ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ. ಸಮಾಜದಲ್ಲಿ ಶಾಂತಿ ನಡೆಸಲು ತಮ್ಮ ಸ್ವಂತ ಕುಟುಂಬದ ಕಷ್ಟಗಳನ್ನು ಯೋಚಿಸದೆ ಕೆಲಸ ಮಾಡುವ ಪೋಲಿಸ ಬಾಂಧವರ ಮೇಲೂ ಕೂಡ ಹಲ್ಲೆಯಾಗಿದೆ. ಅವರ ಮೇಲೆ ಒತ್ತಡ ಹೇರಿ, ಅವರ ಕೆಲಸ ಕಾರ್ಯದಲ್ಲೂ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ. ಕರ್ನಾಟಕ ಪೊಲೀಸರೊಂದಿಗೆ ಹಿಂದೂ ಸಮಾಜವಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಈ ಘಟನೆಗಳಿಗೆ ತಕ್ಕ ಬೆಲೆ ತೆರಬೇಕಾಗುತ್ತದೆ.

ಘಟನೆಯಲ್ಲಿ ರೋಹನ್ ಎಂಬ ಹಿಂದೂ ಕಾರ್ಯಕರ್ತನ ಮನೆಯ ಮೇಲೆ ಹಾಗೂ ಅವರ ವಾಹನಗಳ ಮೇಲೆ ಹಲ್ಲೆ ನಡೆದಿದೆ. ಹಿಂದೂ ಸಮಾಜವನ್ನೇ ಗುರಿಯಾಗಿಸಿ ವ್ಯಾಪಾಕವಾಗಿ ದಾಳಿ ನಡೆಸಲಾಗಿದೆ. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹಿಂದೂ ಸಮಾಜ ಒಗ್ಗಟ್ಟಾಗಿ ಪ್ರಕ್ರಿಯೆ ನೀಡುತ್ತದೆ ಎಂದರು.

ಈ ಸಂದರ್ಭದಲ್ಲಿ ರಾಗಿಗುಡ್ಡದ ಪ್ರಮುಖರು ಹಾಗೂ ಹಿಂದೂ ಸಂಘಟನೆಯ ಮುಖಂಡರಾದ ದೀನ್‌ದಯಾಳ್ ಮೊದಲಾದವರು ಇದ್ದರು.

Leave A Reply

Your email address will not be published.

error: Content is protected !!