ಬಿ.ಎಸ್. ಯಡಿಯೂರಪ್ಪನವರ ಬದ್ಧತೆ,ಸಂಕಲ್ಪದ ಮೂಲ ಕಾರಣದಿಂದ ಸಿಗಂದೂರು ಸೇತುವೆ ಲೋಕಾರ್ಪಣೆ: ಆರಗ ಜ್ಞಾನೇಂದ್ರ

Written by Koushik G K

Published on:

ತೀರ್ಥಹಳ್ಳಿ: ಶರಾವತಿ ಸಂತ್ರಸ್ತರ 60ವರ್ಷದ ಶಾಪ ವಿಮೋಚನೆಯ ಮಂಗಳಮಯ ಕಾರ್ಯಕ್ರಮವಾದ ರೂ.423ಕೋಟಿ ವೆಚ್ಚದ ಬೃಹತ್ ಸಿಗಂದೂರು ಸೇತುವೆಯು ಜುಲೈ 14ರ ಸೋಮವಾರದಂದು ಮಧ್ಯಾನ್ಹ 12ಕ್ಕೆ ಲೋಕಾರ್ಪಣೆಗೊಳ್ಳಲಿದೆ,ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಬದ್ಧತೆ ಮತ್ತು ಸಂಕಲ್ವ,ಸಂಸದ ಬಿ.ವೈ.ರಾಘವೇಂದ್ರರವರ ವಿಶೇಷ ಆಸಕ್ತಿಯೆ ಈ ಸೇತುವೆ ನಿರ್ಮಾಣಗೊಳ್ಳಲು ಮೂಲ ಕಾರಣ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಪಟ್ಟಣದ ಶಾಸಕರ ಕಛೇರಿಯಲ್ಲಿ ನೆಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ವಿಶೇಷ ತಂತ್ರಜ್ಞಾನದೊಂದಿಗೆ ಈ ಸೇತುವೆ ನಿರ್ಮಾಣಗೊಂಡಿದ್ದು,ಮುಂದಿನ ದಿನಗಳಲ್ಲಿ ಇದೊಂದು ಆಕರ್ಷಕ ಪ್ರವಾಸಿ ಕೇಂದ್ರವಾಗಲಿದೆ ಎಂದರು.

ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ,ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ,ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ,ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮುಂತಾದವರ ಉಪಸ್ಥಿಯಲ್ಲಿ ಈ ಸೇತುವೆ ಲೋಕಾರ್ಪಣೆಗೊಳ್ಳಲಿದೆ,ನಂತರ ಸಾಗರದ ನೆಹರು ಮೈದಾನದಲ್ಲಿ ಸಾರ್ವಜನಿಕ ಸಭೆ ಏರ್ಪಡಿದಲಾಗಿದೆ ಎಂದರು.

ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಿಲ್ಲೆಯಲ್ಲಿ ಅಭಿವೃದ್ಧಿ ಯೆನ್ನುವುದು ಪವಾಡದಂತಾಗಿದೆ,ಜಿಲ್ಲೆಯಲ್ಲಿ ಅಭಿವೃದ್ಧಿ ಶರವೇಗದಲ್ಲಿ ಸಾಗುತ್ತಿದೆ,ಶಿವಮೊಗ್ಗ ಲೋಕ ಸಭಾ ಕ್ಷೇತ್ರದಲ್ಲಿ ರೂ.2056.26 ಕೋಟಿ ವೆಚ್ಚದ ಕಾಮಗಾರಿಗಳು ಮಂಜೂರಾಗಿ ಪ್ರಗತಿಯಲ್ಲಿರುವುದು ಹೆಮ್ಮೆಯ ವಿಚಾರ ಎಂದರು.

ಪಶ್ಚಿಮ ಘಟ್ಟದ ರೈತರಿಗೆ ಹಿಂದಿನಿಂದಲೂ ಅನ್ಯಾಯವಾಗುತ್ತಲೇ ಬಂದಿದೆ,ಎಲ್ಲಾ ಸರಕಾರಗಳು ಈ ವಿಚಾರದಲ್ಲಿ ವಿಫಲವಾಗಿದೆ,ಶರಾವತಿ ಸಂತ್ರಸ್ತರ ಬದುಕಿಗೆ ಈ ಸೇತುವೆ ನಿರ್ಮಾಣದಿಂದ ಹೊಸ ಕನಸು ಮೂಡಿದೆ ಎಂದರು.

ಈ ಸೇತುವೆಗೆ ಬಿ.ಎಸ್.ಯಡಿಯೂರಪ್ಪನವರ ಹೆಸರು ಇಡಬೇಕೆಂದು ಮಾತು ಕೇಳಿಬರುತ್ತಿದ್ದು,ಆದರೆ ಸಿಗಂದೂರು ಸೇತುವೆ ಹೆಸರು ಸೂಕ್ತ ಎಂದು ಪ್ರೆಶ್ನೆಯೊಂದಕ್ಕೆ ಉತ್ತರಿಸಿದರು.

ಈ ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸಂದೇಶ್ ಜವಳಿ,ಪ್ರಶಾಂತ್ ಕುಕ್ಕೆ,ಸೊಪ್ಪುಗುಡ್ಡೆ ರಾಘವೇಂದ್ರ, ಸಂತೋಷ್ ದೇವಾಡಿಗ,ಪ್ರಮೋದ್ ಪೂಜಾರಿ,ಅತಿತ್.ಸಿ.,ಸಾತ್ವಿಕ್ ಉಪಸ್ಥಿತರಿದ್ದರು.

Leave a Comment