ಚಂದ್ರಗುತ್ತಿ ದೇವಾಲಯ ಸಮೀಪ ಅವಿವಾಹಿತ ಯುವತಿ ಹೆರಿಗೆ – ಸ್ಥಳದಲ್ಲೇ ಗಂಡು ಮಗು ಜನನ

Written by Koushik G K

Published on:

ಶಿವಮೊಗ್ಗ– ಸೊರಬ ತಾಲೂಕಿನ ಪ್ರಸಿದ್ಧ ಚಂದ್ರಗುತ್ತಿ ದೇವಾಲಯದ ಬಳಿ, ರೇಣುಕಾಂಬೆ ದೇವರ ದರ್ಶನಕ್ಕೆ ಬಂದಿದ್ದ ಅವಿವಾಹಿತ ಯುವತಿಯೋರ್ವಳು ಸ್ಥಳದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಶನಿವಾರ ಬೆಳಕಿಗೆ ಬಂದಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಹಾವೇರಿ ಜಿಲ್ಲೆಯ ನಿವಾಸಿಯಾದ ಈ ಯುವತಿ, ನೂಲು ಹುಣ್ಣಿಮೆ ನಿಮಿತ್ತ ತನ್ನ ಕುಟುಂಬದ ಇಬ್ಬರು ಸದಸ್ಯರೊಂದಿಗೆ ದೇವಾಲಯಕ್ಕೆ ಆಗಮಿಸಿದ್ದರು.ಮೆಟ್ಟಿಲು ಹತ್ತಲು ಸಾಧ್ಯವಾಗದ ಕಾರಣದಿಂದ, ಯುವತಿಯನ್ನು ದೇವಾಲಯ ಸಮೀಪದ ಸಂಬಂಧಿಕರು ಯುವತಿಯನ್ನು ದೇವಾಲಯ ಸಮೀಪದ ತೇರು ಮನೆಯಲ್ಲಿ ಬಿಟ್ಟು ದರ್ಶನಕ್ಕೆ ತೆರಳಿದ್ದರು.

ಆ ಸಂದರ್ಭದಲ್ಲಿ ಯುವತಿಗೆ ಏಕಾಏಕಿ ಹೆರಿಗೆ ನೋವು ಪ್ರಾರಂಭವಾಗಿದ್ದು, ಕೆಲವೇ ನಿಮಿಷಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣ ಆಂಬುಲೆನ್ಸ್‌ಗೆ ಕರೆ ಮಾಡಿ, ತಾಯಿ ಮತ್ತು ಮಗುವನ್ನು ಸೊರಬ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಯುವತಿ ವಿವಾಹವಾಗಿಲ್ಲವೆಂಬ ಮಾಹಿತಿ ತಿಳಿದ ನಂತರ, ವೈದ್ಯರು ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಖಿ ಕೇಂದ್ರದ ಸಿಬ್ಬಂದಿ, ತಾಯಿ ಮತ್ತು ಮಗುವನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಜೆಸಿಐ ಕೋಣಂದೂರು ಸೃಷ್ಟಿ ವತಿಯಿಂದ ಮುನಿಯೂರು ಶಾಲೆ ಮತ್ತು ಅಂಗನವಾಡಿ ಮಕ್ಕಳಿಗೆ ಉಚಿತ ನೋಟ್‌ಬುಕ್ ವಿತರಣೆ

Leave a Comment