ರೋಲ್ಸ್ ರಾಯ್ಸ್‌ ಕಾರು ಕಂಪನಿಯಲ್ಲಿ ಕೆಲಸ ಗಿಟ್ಟಿಸಿದ ತೀರ್ಥಹಳ್ಳಿ ಮೂಲದ ರಿತುಪರ್ಣ!

Written by Koushik G K

Published on:

Thrithahali student gets job in rolls royce ವಿಶ್ವದ ಪ್ರತಿಷ್ಠಿತ ಕಾರು ಸಂಸ್ಥೆ ರೋಲ್ಸ್ ರಾಯ್ಸ್ ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡು, ಕನ್ನಡತಿಯೋರ್ವಳು ಇದೀಗ ಪ್ರೇರಣೆಯಗಿದ್ದಾಳೆ. ಈ ಮೂಲಕ ಕರ್ನಾಟಕದ ಕಿರಿಯ ವಯಸ್ಸಿನ ಮೊದಲ ಯುವತಿ ಎಂಬ ಹೆಗ್ಗಳಿಕೆಗೆ ರಿತುಪರ್ಣ ಪಾತ್ರರಾಗಿದ್ದಾರೆ.

WhatsApp Group Join Now
Telegram Group Join Now
Instagram Group Join Now

ತೀರ್ಥಹಳ್ಳಿ ಮೂಲದ ಮಂಗಳೂರಿನ ನಿವಾಸಿಯಾಗಿರುವ ರಿತುಪರ್ಣ, ಬಾಲ್ಯದಲ್ಲಿ ವೈದ್ಯೆ ಆಗುವ ಕನಸು ಕಂಡಿದ್ದರು. ಆದರೆ ಶಿಕ್ಷಣದ ದಾರಿಯಲ್ಲಿ ಬದಲಾವಣೆ ತಂದುಕೊಂಡು, ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ರೊಬೋಟಿಕ್ಸ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದರು.

ಇನ್ನೋವೇಶನ್ ಸಮ್ಮೇಳನದಲ್ಲಿ ಚಿನ್ನದ ಪದಕ ಗೆದ್ದ ರಿತುಪರ್ಣ, ಈ ಸಾಧನೆಯ ಮೂಲಕ ರೋಲ್ಸ್ ರಾಯ್ಸ್ ಸಂಸ್ಥೆಯಲ್ಲಿ ಇಂಟರ್ನ್‌ಷಿಪ್ ಪಡೆಯುವ ಅವಕಾಶವನ್ನು ಪಡೆದರು. 8 ತಿಂಗಳ ಟಾಸ್ಕ್ ಟೆಸ್ಟ್‌ನಲ್ಲಿ ಅವರ ಪ್ರತಿಭೆ ಮತ್ತು ಕಾರ್ಯಪಟುತನ ಗಮನ ಸೆಳೆದಿದ್ದು, ಕಂಪನಿಯು ನೇರವಾಗಿ ನೇಮಕಾತಿ ಪತ್ರ ನೀಡಿದೆ.

ಪೋಷಕರು ಹಾಗೂ ಕಾಲೇಜಿನ ಪ್ರಾಧ್ಯಾಪಕರು ಅವರ ಈ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದು, ಈಕೆ ಇದೀಗ ಅಮೆರಿಕದ ಶಾಖೆಗೆ ಹೋಗಲು ಸಿದ್ಧರಾಗಿದ್ದಾರೆ. ಮಗಳ ಸಾಧನೆಗೆ ಹೆತ್ತವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ರೋಲ್ಸ್ ರಾಯ್ಸ್‌ ಕಾರು ಕಂಪನಿಯಲ್ಲಿ ಕೆಲಸ ಗಿಟ್ಟಿಸಿದ ತೀರ್ಥಹಳ್ಳಿ ಮೂಲದ ರಿತುಪರ್ಣ!

Leave a Comment