ಎನ್.ಆರ್.ಪುರ ; ತೋಟದಲ್ಲಿ ಅಲ್ಯೂಮಿನಿಯಂ ಏಣಿ ತರುತ್ತಿದ್ದ ವೇಳೆ ವಿದ್ಯುತ್ ತಂತಿಗೆ ತಗುಲಿ ಯುವಕ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ತೊಪ್ಪುರು ಗ್ರಾಮದಲ್ಲಿ ನಡೆದಿದೆ.
ತೊಪ್ಪುರು ಗ್ರಾಮದ ಸಂಪತ್ (28) ಎಂಬಾತ ಮೃತ ದುರ್ದೈವಿ. ಮೂರು ವರ್ಷಗಳ ಹಿಂದಷ್ಟೆ ಮದುವೆಯಾಗಿದ್ದ ಸಂಪತ್ ಅವರಿಗೆ ಚಿಕ್ಕ ಮಗು ಕೂಡ ಇದೆ.
ಹೇಗಾಯ್ತು ಘಟನೆ ?
ತೋಟದ ಕೆಲಸದ ವೇಳೆ ಅಲ್ಯೂಮಿನಿಯಂ ಏಣಿಯನ್ನು ತೆಗೆದು ತರುತ್ತಿದ್ದ ಸಂಪತ್, ಆ ಏಣಿ ಅಚಾನಕ್ ವಿದ್ಯುತ್ ತಂತಿಗೆ ತಗುಲಿ ಶಾಕ್ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

