ಕೆಹೆಚ್‌ಬಿ ಮನೆಗಳ ಅಕ್ರಮ ಮಾರಾಟ ಪ್ರಕರಣ | ಹೋರಾಟಕ್ಕೆ ಜಯ ದೊರೆತಿರುವುದು ಹರ್ಷ ತಂದಿದೆ: ಬಿ.ಎಸ್ ಸುರೇಶ್

0
1367

ಹೊಸನಗರ: ಕರ್ನಾಟಕ ಗೃಹ ಮಂಡಳಿಯಿಂದ ಹೊಸನಗರದಲ್ಲಿ ನಿರ್ಮಾಣವಾಗಿದ್ದ ಮನೆಗಳನ್ನು ಕೆಹೆಚ್‌ಬಿ ಮಾರಾಟ ಮಾಡಿರುವ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್ ಆದೇಶವನ್ನು ಸಾಮಾಜಿಕ ಕಾರ್ಯಕರ್ತ ಬಿ.ಎಸ್.ಸುರೇಶ್ ಸ್ವಾಗತಿಸಿದ್ದಾರೆ.

ಅವರು ಶೀತಲ್ ಹೋಟೆಲ್ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕೆಹೆಚ್‌ಬಿ ಮನೆಗಳಲ್ಲಿ ವಾಸವಾಗಿದ್ದ ಕೆಲ ಸರಕಾರಿ ನೌಕರರು ಕೆಹೆಚ್‌ಬಿಯಿಂದ ಮನೆಗಳನ್ನು ಅಕ್ರಮವಾಗಿ ಖರೀದಿಸಿದ್ದರು. ಹರಾಜು ಪ್ರಕ್ರಿಯೆ ನಡೆಸದೇ ಏಕಾಏಕಿ ವಾಸವಿರುವವರಿಗೇ ಮಾರಾಟ ಮಾಡಿರುವ ಕೆಹೆಚ್‌ಬಿ ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ಸ್ಥಳೀಯರಾದ ಕೆ.ಎಸ್.ಚಂದ್ರಶೇಖರ್ ನೇತೃತ್ವದಲ್ಲಿ 2018ರಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ವಿಭಾಗೀಯ ಪೀಠವು ಶುಕ್ರವಾರ ಆದೇಶ ಹೊರಡಿಸಿದ್ದು, 60 ದಿನಗಳ ಕಾಲಾವಕಾಶದೊಳಗೆ ಮನೆ ಕಾಲಿ ಮಾಡಬೇಕು ಹಾಗೂ ಮನೆ ಕೊಳ್ಳಲು ಹಣ ನೀಡಿರುವವರಿಗೆ ಶೇ.12.5 ಬಡ್ಡಿಯೊಂದಿಗೆ ಹಣವನ್ನು ಹಿಂದಿರುಗಿಸಬೇಕು ಎಂದು ಆದೇಶ ನೀಡಿದೆ. ಅಲ್ಲದೇ ಅಕ್ರಮಕ್ಕೆ ಹೊಣೆಗಾರರಾಗಿರುವ ಕೆಹೆಚ್‌ಬಿ ಇಲಾಖೆಗೆ ರೂ.1 ಲಕ್ಷ ದಂಡ ಕಟ್ಟಬೇಕೆಂದು ಆದೇಶ ಹೊರಡಿಸಿ ನ್ಯಾಯಾಲಯ ಆದೇಶ ನೀಡಿದೆ ಎಂದು ಮಾಹಿತಿ ನೀಡಿದರು.

ಕೆಹೆಚ್‌ಬಿ ವಿರುದ್ಧವಾಗಿ ಹೈಕೋರ್ಟ್ ನ್ಯಾಯವಾದಿ ಬಿ.ಎಸ್ ಪ್ರಸಾದ್‌ರವರು ವಾದಿಸಿದ್ದರು.

ರಾಜ್ಯದ ಇನ್ನೂ ಹಲವು ಕಡೆಗಳಲ್ಲಿ ಇಂತಹ ಸಮಸ್ಯೆ ಕೇಳಿಬಂದಿದ್ದು, ಈ ಆದೇಶ ಮಹತ್ವ ಪಡೆದಿದೆ. ಸಾರ್ವಜನಿಕವಾಗಿ ಹೋರಾಟ ನಡೆಸಿದ ನಮಗೆ ಜಯ ದೊರೆತಿರುವುದು ಹರ್ಷ ತಂದಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ದೂರುದಾರರರಾದ ಕೆ.ಎಸ್.ಚಂದ್ರಶೇಖರ್, ನವಶಕ್ತಿ ರಮೇಶ್, ಶ್ರೀಕಾಂತ್ ಭಟ್, ರಾಜೇಂದ್ರ ಮತ್ತಿತರರು ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here