Hosanagara | ರಸ್ತೆ ಅಭಿವೃದ್ಧಿ ಹೆಸರಲ್ಲಿ ಗಿಡ, ಮರಗಳ ಮಾರಣಹೋಮ

0 1,965

ಹೊಸನಗರ: ಸುಮಾರು 150 ವರ್ಷಗಳ ಹಳೆಯ ನಾಗದೇವರಿಗೆ ನೆರಳಾಗಿ ನಿಂತ ಅರಳಿ ಮರವನ್ನೇ ರಸ್ತೆ ಅಭಿವೃದ್ಧಿ ಹೆಸರಲ್ಲಿ ನೆಲ ಸಮ ಮಾಡಿದ ನ್ಯಾಶನಲ್ ಕಂಪನಿಯವರು ಸಣ್ಣ-ಪುಟ್ಟ ಗಿಡ, ಮರಗಳನ್ನು ಬೀಡುವವರೇ?

ಪ್ರತಿ ವರ್ಷ ಹಸರೀಕರಣದ ಹೆಸರಿನಲ್ಲಿ ಜುಲೈ ತಿಂಗಳ ಪೂರ್ತಿ ಕೆಲವು ಸಂಘ ಸಂಸ್ಥೆಯವರು ಹಾಗೂ ಅರಣ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಪರಿಸರ ಪ್ರೇಮಿಗಳು ಗಿಡ ನೆಡುವಾಗ ಎಚ್ಚರ ವಹಿಸುವುದು ಸೂಕ್ತ.


ಹೌದು, ಹೊಸನಗರದ ಚೌಡಮ್ಮ ರಸ್ತೆಯಲ್ಲಿ ಜನರಿಗೆ ತಣ್ಣನೆ ಗಾಳಿ ಬೀಸಲಿ ಹಾಗೂ ಸಾರ್ವಜನಿಕರಿಗೆ ನೆರಳು ನೀಡಲಿ ಎಂಬ ಉದ್ದೇಶದಿಂದ ರಸ್ತೆಯ ಒಂದು ಭಾಗ ಗಿಡಗಳನ್ನು ನೆಟ್ಟ ಪರಿಸರ ಪ್ರೇಮಿ ರಾಧಾಕೃಷ್ಣ ಪೂಜಾರಿಯವರು ಬೆಳಗ್ಗೆ, ಸಂಜೆ ಗಿಡ-ಮರಗಳಿಗೆ ನೀರು ಹಾಕುತ್ತಿದ್ದರು. ಆದರೆ ರಸ್ತೆಗೆ ಅಡ್ಡಲಾಗಿ ಗಿಡ-ಮರಗಳು ಬೆಳೆದಿದೆ ಎಂದು ಪಟ್ಟಣ ಪಂಚಾಯತಿಯವರು ಮರದ ತಲೆ ಭಾಗಗಳನ್ನು ತೆಗೆದು ಪ್ರತಿ ದಿನ ನೀರುಣಿಸುತ್ತಿದ್ದ ರಾಧಾಕೃಷ್ಣ ಪೂಜಾರಿಯವರ ಹೊಟ್ಟೆ ಉರಿಯುವಂತೆ ಮಾಡಿದರು.

ಕುಂದಾಪುರ ರಸ್ತೆಯಲ್ಲಿ ಮರಗಳ ನೆಲಸಮ: ಹೊಸನಗರದಿಂದ ಜಯನಗರ – ಕುಂದಾಪುರಕ್ಕೆ ಹೋಗುವ ರಸ್ತೆಯಲ್ಲಿ ಸುಮಾರು ನೂರಾರು ವರ್ಷಗಳ ಇತಿಹಾಸವಿರುವ ಅರಳಿ ಸೇರಿದಂತೆ ಇತ್ಯಾದಿ ಮರಗಳಿದ್ದು ಅವುಗಳ ಸಾರ್ವಜನಿಕರಿಗೆ ನೆರಳು ನೀಡುತ್ತಾ ಬರುತ್ತಿದ್ದು ಸುಮಾರು 15ರಿಂದ 20 ಮರಗಳು ನ್ಯಾಶನಲ್ ಕಂಪನಿಯವರು ಈ ಮರಗಳನ್ನು ನೆಲಸಮ ಮಾಡಿ ಆ ರಸ್ತೆಯಲ್ಲಿ ಸಾರ್ವಜನಿಕರಿಗೆ ದನ-ಕರುಗಳಿಗೆ ನೆರಳಿಲ್ಲದಂತೆ ಮಾಡಿದ್ದಾರೆ.

ಹೊಸನಗರ ಪಟ್ಟಣದ ಸುತ್ತ-ಮುತ್ತ ಎಲ್ಲಿಯೂ ನೆರಳಿಲ್ಲದಂತೆ ಗಿಡಮರಗಳು ನೆಲಸಮವಾಗುತ್ತಿದ್ದು ಮುಂದೊಂದು ದಿನ ಮಲೆನಾಡು ಪ್ರದೇಶ ಬಯಲುಸೀಮೆಯಾಗುವುದರಲ್ಲಿ ಅನುಮಾನವಿಲ್ಲ. ಹೊಸನಗರ ಪಟ್ಟಣ ಅಭಿವೃದ್ಧಿ ಮಾಡುವ ಉದ್ದೇಶದಿಂದ ಹೊಸನಗರ ಪಟ್ಟಣದ ಮೂಲೆ-ಮೂಲೆ ಮರಗಳು ಒಂದು ಕಡೆಯಾದರೂ ಕೆಲವು ಹಿತಾಸಕ್ತಿಗಳು ಕಾಡುಗಳನ್ನು ಕಡಿದು ಜಾಗ ಒತ್ತುವರಿ ಮಾಡಲು ಹೊರಟಿದ್ದಾರೆ. ಇನ್ನೂ ಐದಾರು ವರ್ಷಗಳಲ್ಲಿ ಮಲೆನಾಡು ಎಂಬ ಹೆಸರು ಮಾಯವಾಗಿ ಬಯಲುಸೀಮೆಯಾಗುವುದರಲ್ಲಿ ಯಾವುದೇ ಸಂಶಯ ಬೇಡ.

ವರದಿ : ಹೆಚ್.ಎಸ್. ನಾಗರಾಜ್

Leave A Reply

Your email address will not be published.

error: Content is protected !!