ಗಾಂಜಾ ನಶೆಯಲ್ಲಿ ಯುವಕನೋರ್ವನನ್ನು ಚಾಕುವಿನಿಂದ ಇರಿದು ಕೊಲೆ !

0
12227

ಶಿವಮೊಗ್ಗ: ನಗರದಲ್ಲಿ ಕೆಲ ಯುವಕರು ಸದ್ದಿಲ್ಲದೇ ನಶೆಯಲ್ಲಿ ತೇಲುತ್ತಾ ಅಕ್ರಮ ಚಟುವಟಿಕೆಗಳಲ್ಲಿ ಸಕ್ರಿಯವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ನಿನ್ನೆ ರಾತ್ರಿ ಗಾಂಜಾ ಘಾಟು ಗಾಂಜಾ ಯುವಕನೋರ್ವನನ್ನ ಬಲಿ ಪಡೆದಿದೆ.

ಗಾಂಜಾ ನಶೆಯಲ್ಲಿ ಯುವಕನೋರ್ವನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಈ ಕೊಲೆಗೆ ಗಾಂಜಾ ಗಲಾಟೆಯೇ ಕಾರಣವೆಂದು ಹೇಳಲಾಗುತ್ತಿದೆ.

ಟಿಪ್ಪುನಗರದ 7ನೇ ತಿರುವು ಮತ್ತು 4ನೇ ತಿರುವು ಸೇರುವ ಕೆಕೆ ಶೆಡ್ ನಲ್ಲಿ ಇರ್ಫಾನ್ ಯಾನೆ ಟ್ವಿಸ್ಟ್ ನನ್ನ ಲತೀಫ್ ಗ್ಯಾಂಗ್ ಚಾಕುವಿನಿಂದ ತಿವಿದು ಕೊಲೆ ಮಾಡಿ ಪರಾರಿಯಾಗಿರುವುದು ವರದಿಯಾಗಿದೆ.

ಗಾಂಜಾ ಅಮಲು ನಿಧಾನವಾಗಿ ಶಿವಮೊಗ್ಗದಲ್ಲಿ ವ್ಯಾಪಿಸಿಕೊಂಡಿದೆ. ಈ ಗಾಂಜಾವನ್ನ ಕೆಳಮಟ್ಟದಲ್ಲಿ ಮಾರುವ ವ್ಯಕ್ತಿಯನ್ನ ಕೊಲೆ ಮಾಡಲಾಗಿದೆ. ಇರ್ಫಾನ್ ಗಾಂಜಾ ಪೆಡ್ಲರ್ ಎಂದು ಹೇಳಲಾಗುತ್ತಿದೆ.

ಇರ್ಫನ್ ಮತ್ತು ಲತೀಫ್ ಗ್ಯಾಂಗ್ ಹುಡುಗರ ನಡುವೆ ಗಲಾಟೆ ಆಗಿದೆ ಎಂದು ಹೇಳಲಾದರೂ ಹುಡುಗರನ್ನ ಮಾತಾಡಿಸಿಕೊಂಡು ಬರಲು ಕೆಕೆ ಶೆಡ್ ಗೆ ಬಂದ ವೇಳೆ ಲತೀಫ್ ಗ್ಯಾಂಗ್ ಅಲ್ಲೇ ಇತ್ತು ಎನ್ನಾಗಿದೆ.

ನಾನು ಸುಲ್ತಾನ್ ನೀನು ಸುಲ್ತಾನ್ ಎಂಬ ವಿಷಯದಲ್ಲಿ ಗಲಾಟೆಯಾಗಿದೆ ಎನ್ನಲಾಗಿದೆ. ಈ ಕಿರಿಕ್ ನ ಹಿನ್ನಲೆಯಲ್ಲಿ ಕೊಲೆಯಾಗಿದೆ ಎಂದು ಶಂಕಿಸಲಾಗಿದೆ. ಆದರೂ ಹೆಚ್ಚಿನ ಮಾಹಿತಿ ಇನ್ನೂ ಕಲೆಹಾಕಬೇಕಿದೆ.

ಇರ್ಫಾನ್ ಯಾನೆ ಟ್ವಿಸ್ಟ್ ಈತ ದೊಡ್ಡಪೇಟೆ ಪೊಲೀಸ್ ಠಾಣೆಯ ಮಿಳಘಟ್ಟದ 2 ನೇ ತಿರುವಿನ ನಿವಾಸಿಯಾಗಿದ್ದಾನೆ. ತುಂಗನಗರ ಪೊಲೀಸ್ ಠಾಣೆಯ ಪಿಐ ದೀಪಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕೇಸ್ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here