ನಮ್ಮ ಕನ್ನಡನಾಡು ವಿವಿಧ ಧರ್ಮ, ಸಂಸ್ಕೃತಿಗಳ ಸಮಾಗಮವಾಗಿದೆ: ತಹಶೀಲ್ದಾರ್ ವಿ.ಎಸ್. ರಾಜೀವ್

0
548

ಹೊಸನಗರ: ಪರಭಾಷಿಕರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಆರ್ಥಿಕ ಜಗತ್ತು ಆಂಗ್ಲ ಭಾಷೆಯ ವ್ಯಾವಹಾರಕ್ಕೆ ಆಧ್ಯತೆ ನೀಡುತ್ತಿರುವುದರಿಂದ ಇಂಥಹ ಅತಂಕ ಸೃಷ್ಠಿಯಾಗಿದೆ ಆದರೆ ಕನ್ನಡಕ್ಕೆ ಒಂದು ಶಕ್ತಿ ಇದೆ ಅದು ಎಲ್ಲ ಮಗ್ಗಲುಗಳಲ್ಲಿ ಬೆಳೆಯುತ್ತಲೇ ಇದೆ ಕೆಲ ದಶಕಗಳ ಹಿಂದಿದ್ದ ಪರಿಸ್ಥಿತಿಗೆ ಹೋಲಿಸಿದರೆ ನಿಶ್ಚಿತವಾಗಿ ಇದು ಹೆಚ್ಚು ಇದೇ ರೀತಿ ಜಗತೀಕರಣದ ಬಿಸಿ ಕೊರೊನ್ನೋತ್ತರ ಕಾಲಘಟಕದಲ್ಲಿ ಮೈಕೋಡವಿಕೊಂಡು ಏಳುತ್ತಲೆ ಇದೆ ಇದು ನಮ್ಮ ಹೆಮ್ಮೆಯ ಕನ್ನಡ ಭಾಷೆ ನಮ್ಮ ಕನ್ನಡ ನಾಡು ವಿವಿಧ ಧರ್ಮ ಸಂಸ್ಕೃತಿಗಳ ಸಮಗಮವಾಗಿದೆ ಎಂದು ಹೊಸನಗರದ ತಹಶೀಲ್ದಾರ್ ವಿ.ಎಸ್. ರಾಜೀವ್ ವಿ.ಎಸ್‌ರವರು ಹೇಳಿದರು.

ಹೊಸನಗರದ ತಾಲ್ಲೂಕು ಕಛೇರಿಯಲ್ಲಿ ಹಾಗೂ ಹಾಗೂ ನೆಹರು ಮೈದಾನದ ಆವರಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಪಟ್ಟಣ ಪಂಚಾಯಿತಿ, ಕನ್ನಡ ಸಾಹಿತ್ಯ ಪರಿಷತ್ ಮತ್ತು ವಿವಿಧ ಇಲಾಖೆಗಳು ಸಂಘ-ಸಂಸ್ಥೆಗಳ ಆಶ್ರಯದಲ್ಲಿ 66ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗಿದ್ದು ಈ ಸಂದರ್ಭದಲ್ಲಿ ಹೊಸನಗರದ ತಹಶೀಲ್ದಾರ್ ರಾಜೀವ್‌ರವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

‘ಕಲಕನ್ನಡ ಎನೆ ಕುಣಿದೆನ್ನದೇ ಕನ್ನಡ ಎನೆ ನಿಮಿರುವುದು’ ಕವಿವಾಣಿಯಂತೆ ನವೆಂಬರ್ ತಿಂಗಳು ಬಂದೆಂದರೆ ಕನ್ನಡ ನಾಡಿನಾದ್ಯಂತ ಎಲ್ಲರ ಮನೆ ಮನಗಳಲ್ಲಿ ಸಂಭ್ರಮ ಪುಟಿದೇಳುತ್ತದೆ ವಿಶ್ವದೆಲ್ಲಡೇ ಪಸರಿಸಿರುವ ಕನ್ನಡಿಗರು ಇಂದು ಸಂಭ್ರಮದಿಂದ ಕನ್ನಡದ ಹಬ್ಬವನ್ನು ಆಚರಿಸುತ್ತಾರೆ.

ಮೌರ್ಯರು ಕದಂಬರು ಗಂಗರು ವಿಜಯನಗರದ ಅರಸರು, ಹೊಯ್ಸಳರು ಚಾಲುಕ್ಯರು, ರಾಷ್ಟ್ರಕೂಟರು, ಮೈಸೂರಿನ ಒಡೆಯರು, ಕೊಡವರು ಮುಂತಾದ ಅನೇಕ ರಾಜ ಮನೆತನಗಳು ಈ ನಾಡಿಗೆ ನೀಡಿದ ಕೊಡುಗೆ ಅಪಾರವಾದುದು. ದಾಸ ಶ್ರೇಷ್ಠ ಕನಕದಾಸರು ಪುರಂದರದಾಸರು ಸರ್ವಜ್ಞ ಶಿಶುನಾಳ ಶರೀಫ್, ಅವರಂಥಹ ಸಂತಕವಿಗಳು ಸಾಮಾಜಿಕ ಕ್ರಾಂತಿಯ ಹರಿಕಾರರಾದ ಜಗಜ್ಯೋತಿ ಬಸವಣ್ಣನವರಂತಹ ವಚನಕಾರರು ಮತ್ತು ಹಲವಾರು ದಾರ್ಶನಿಕರು ಬಾಳಿ ಬದುಕಿದ ನೆಲೆಯೇ ಹಮ್ಮೆಯ ಕನ್ನಡ ನಾಡುವಾಗಿದೆ ಈ ರಾಜ್ಯದಲ್ಲಿ ಹುಟ್ಟಿದ ಪ್ರತಿಯೊಬ್ಬರು ಕನ್ನಡ ನಾಡಿನ ಹೆಮ್ಮೆಯ ಪುತ್ರರಾಗಿದ್ದು ಈ ನಾಡಿನಲ್ಲಿ ಹುಟ್ಟಿದ ನಾಮ್ಮೆಲ್ಲರ ಜನ್ಮ ಸಾರ್ಥಕವಾಗಿದೆ ಎಂದರು.

ಈ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪನವರು ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಕೃಷ್ಣವೇಣಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ, ಸರ್ಕಲ್ ಇನ್ಸ್‌ಪೆಕ್ಟರ್ ಮಧುಸೂಧನ್, ಸಬ್ ಇನ್ಸ್‌ಪೆಕ್ಟರ್ ರಾಜೇಂದ್ರನಾಯ್ಕ್, ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಸಿ.ಆರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಾಲಚಂದ್ರಪ್ಪ ಟಿ, ನಾಡಹಬ್ಬಗಳ ಸಮಿತಿಯ ಸದಸ್ಯರಾದ ಶ್ರೀಧರ ಉಡುಪ, ಶ್ರೀನಿವಾಸ್ ಕಾಮತ್, ರಾಜಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ ಇಲಿಯಾಸ್, ಕಾರ್ಯದರ್ಶಿ ಗಂಗಾಧರಯ್ಯ, ವರ್ತಕರ ಸಂಘದ ಅಧ್ಯಕ್ಷರಾದ ವಿಜೆಂದ್ರಶೇಟ್, ಗಾಯಿತ್ರಿ ನಾಗರಾಜ್, ಹಾಲಗದ್ದೆ ಉಮೇಶ್, ಗುರುರಾಜ್ ಆರ್, ವಿನಯ್ ಎಂ ಆರಾಧ್ಯ, ವೆಂಕಟೇಶ್ ಮೂರ್ತಿ, ನವೀನ್ ರೇಣುಕಯ್ಯ, ಕೌಶಿಕ್, ಚಿರಾಗ್, ರಾಕೆಶ್, ಸುಧೀಂದ್ರಕುಮಾರ್, ಶ್ರೀಕಾಂತ್ ಹೆಗಡೆ, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ಹೊಸನಗರದ ಮುಖ್ಯ ರಸ್ತೆಗಳಲ್ಲಿ ಕನ್ನಡದ ಧ್ವಜ ಹಿಡಿದು ಮೆರವಣಿಕೆ ನಡೆಸಲಾಯಿತ್ತು ಈ ಮೆರವಣಿಗೆ ಕಾರ್ಯಕ್ರಮಕ್ಕೆ ಹೊಸನಗರದ ನ್ಯಾಯಾದೇಶರಾದ ರವಿಕುಮಾರ್ ಕೆರವರು ಬಾಗವಹಿಸಿ ಕಾನೂನಿನ ಆರಿವಿನ ಬಗ್ಗೆ ಮಾಹಿತಿ ನೀಡಿದರು.

ಜಾಹಿರಾತು

LEAVE A REPLY

Please enter your comment!
Please enter your name here