ರಿಪ್ಪನ್‌ಪೇಟೆ ಶಾಲೆಗೆ ದಿಢೀರ್ ಭೇಟಿ ನೀಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ !

0
3024

ರಿಪ್ಪನ್‌ಪೇಟೆ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಇಂದು ರಿಪ್ಪನ್‌ಪೇಟೆಯ ಶ್ರೀವರಸಿದ್ದಿವಿನಾಯಕ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪಕ್ಕದಲ್ಲಿಯೆ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ದಿಢೀರ್ ಭೇಟಿ ನೀಡಿ ಮುಖ್ಯೋಪಾಧ್ಯಾಯರಿಂದ ಮಾಹಿತಿ ಪಡೆಯುವುದರೊಂದಿಗೆ ಎಸ್.ಡಿ.ಎಂ.ಸಿ.ಯವರ ಮನವಿಯನ್ನು ಸ್ವೀಕರಿಸಿದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸರ್ಕಾರಿ ಶಾಲೆಗಳ ಕುರಿತು ಸರ್ಕಾರ ಸಾಕಷ್ಟು ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದ್ದು ಕಳೆದ 18 ತಿಂಗಳಿಂದ ಮಹಾಮಾರಿ ಕೊರೊನಾ ಹಿನ್ನಲೆಯಲ್ಲಿ ಶಾಲೆಗಳನ್ನು ಮುಚ್ಚಲಾಗಿದ್ದು ಇಂದಿನಿಂದಲೇ 1 ರಿಂದ 5 ತರಗತಿಯನ್ನು ಪ್ರಾರಂಭಿಸಲಾಗಿದೆ. ಪೋಷಕರು ಮಕ್ಕಳನ್ನು ಶಾಲೆಗೆ ಕರೆ ತಂದು ಬಿಡುತ್ತಿದ್ದಾರೆ ಇನ್ನೂ ಮುಂದೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಯಲ್ಲಿ ಹಾಜರಿರುವುದು ಮತ್ತು ಮಕ್ಕಳ ಪಾಠ-ಪ್ರವಚನದ ಕಡೆ ಹೆಚ್ಚು ಒತ್ತು ನೀಡಿ ಮಕ್ಕಳ ಬುದ್ದಿವಂತರನ್ನಾಗಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಅಲ್ಲದೆ ಹಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ ಕಾರಣ ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ನ್ಯಾಯಾಲಯದ ತಡೆ ಆದೇಶವಿದ್ದು ಈಗಾಗಲೇ ತಡೆ ಆದೇಶ ತೆರವಾಗಿದ್ದು ಸದ್ಯದಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಸಲಾಗುವುದೆಂದು ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ಎಸ್.ಡಿ.ಎಂ.ಸಿ ಸಮಿತಿಯವರು ಮತ್ತು ಶಿಕ್ಷಕ ಸಮೂಹ ಹೊಂದಣಿಕೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿನ ಹಲವು ಶಾಲೆಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿ, ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಭೂವಿದ್ಯಾದಾನದ ಜಮೀನು ಇದ್ದು ಅದನ್ನು ಹಾಗೆ ಬಿಡದೆ ಸುಸಜ್ಜಿತವಾದ ಕಟ್ಟಡ ನಿರ್ಮಿಸಿ ಮಕ್ಕಳ ಕ್ರೀಡಾಂಗಣ ಮತ್ತು ಆಟೋಟಗಳಿಗೆ ಉತ್ತಮ ಪರಿಸರ ರಕ್ಷಣೆಯೊಂದಿಗೆ ಮಕ್ಕಳ ವ್ಯಾಸಂಗಕ್ಕೆ ಪೂರಕವಾಗುವಂತಹ ಕಾರ್ಯದ ಕುರಿತು ಸಮಿತಿಯವರೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ ಅವರು ರಾಜ್ಯ ಹೆದ್ದಾರಿಯಲ್ಲಿರುವ ಕಾರಣ ಮಕ್ಕಳ ಅವಘಡಗಳು ಸಂಭವಿಸುವುದೂ ಎಂಬ ಭಯವಿದೆ. ಆದ್ದರಿಂದ ಈ ಶಾಲೆಯನ್ನು ಉಳಿಸಿಕೊಂಡು ಖಾಲಿ ಜಾಗದಲ್ಲಿ ಹೊಸಕಟ್ಟಡ ನಿರ್ಮಿಸುವ ಚಿಂತನೆ ಸಮರ್ಪಕವಾಗಿದೆ ಎಂದರು.

ಹಿರಿಯ ಪ್ರಾಥಮಿಕ ಪಾಠಶಾಲೆಗಳಲ್ಲಿ 8ನೇ ತರಗತಿ ಪ್ರಾರಮಭಿಸಿದ್ದು ಇದರಿಂದ ವಿದ್ಯಾಥಿಗಳಿಗೆ ತೊಂದರೆಯಾಗುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ನಾನು ಅಧಿಕಾರ ಸ್ವೀಕಾರ ಮಾಡಿದ ನಂತರದಲ್ಲಿ ಶಿಕ್ಷಕರಿಗೆ ಪರೀಕ್ಷೆ ತಗೆದುಕೊಳ್ಳುವಂತೆ ಆದೇಶಿಸಲಾಗಿದ್ದರೂ ಕೂಡಾ ವಿಳಂಬವಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಅಮೂಲಾಗ್ರ ಬದಲಾವಣೆ ತರುವ ಕುರಿತು ಶಿಕ್ಷಣ ತಜ್ಞರೊಂದಿಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ಹೇಳಿದರು.

ಇಲ್ಲಿನ ಇತಿಹಾಸ ಪ್ರಸಿದ್ದ ಶ್ರೀವರಸಿದ್ದಿವಿನಾಯಕ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನಂತರ ಸಮಿತಿಯವರೊಂದಿಗೆ ಚರ್ಚಿಸಿ ಶಕ್ತಿ ದೇವಸ್ಥಾನಕ್ಕೆ ಹಲವು ಇತಿಹಾಸವಿದ್ದಂತೆ ಕಾಣುತ್ತಿದ್ದು ಊರಿನ ರಾಜ್ಯ ಹೆದ್ದಾರಿಯಲ್ಲಿ ಇಂತಹ ಪುರಾಣ ಪ್ರಸಿದ್ದ ದೇವಸ್ಥಾನವಿರುವುದು ವಿರಳ ಇಲ್ಲಿನ ಭಕ್ತ ಸಮೂಹದವರ ಆಸಕ್ತಿಯನ್ನು ನೋಡಿ ಅಭಿನಂದಿಸಿದ ಸಚಿವರು, ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಮಾಡಲು ಇನ್ನೂ ಹೆಚ್ಚಿನ ಶಕ್ತಿ ಕರುಣಿಸಲೆಂದು ಪ್ರಾರ್ಥಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮಾಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್ ಶಿಕ್ಷಕರುಗಳು ಸಮವಸ್ತ್ರದ ಕುರಿತು ಸಚಿವರಲ್ಲಿ ಪ್ರಾಸ್ತಾಪಿಸಿ ಕಡ್ಡಾಯವಾಗಿ ಸೀರೆ ಬಳಸುವಂತೆ ಮನವಿ ಮಾಡಿದರು.

ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಗಣೇಶ್‌ಕಾಮತ್, ಗ್ರಾಮಾಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಎಂ.ಡಿ.ಇಂದ್ರಮ್ಮ, ಬಿಜೆಪಿ ಮುಖಂಡರಾದ ಎಂ.ಸುರೇಶ್‌ಸಿಂಗ್, ನಾಗರತ್ನ ದೇವರಾಜ್, ಸುಂದರೇಶ್, ಅಶ್ವಿನಿ ರವಿಶಂಕರ್, ಈಶ್ವರಪ್ಪ, ರಾಘು, ಡಿಡಿಪಿಐ ರಮೇಶ್, ಕಮದೂರು ರಾಜಶೇಖರ್, ಮುಖ್ಯೋಪಾದ್ಯಾಯಿನಿ ಎನ್.ಕೆ.ಲೋಲಾಕ್ಷಿ, ಜಂಬಳ್ಳಿ ಗಿರೀಶ್, ಎಸ್.ಡಿ.ಎಂ.ಸಿ.ನಿರ್ದೇಶಕ ಮಂಜುನಾಥ ಇನ್ನಿತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here