ವಿವಿಧ ಗ್ರಾ.ಪಂ. ಗಳಿಗೆ 2ನೇ ಅವಧಿಗೆ ಅಧ್ಯಕ್ಷ – ಉಪಾಧ್ಯಕ್ಷರಾಗಿ ಆಯ್ಕೆ

0 52

ಚಿಕ್ಕಮಗಳೂರು : ವಿವಿಧ ಗ್ರಾ.ಪಂ. ಗಳಿಗೆ 2ನೇ ಅವಧಿಗೆ ಅಧ್ಯಕ್ಷ – ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಬಿಳೇಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಬಿಜೆಪಿ ತೆಕ್ಕೆಗೆ
ಚಿಕ್ಕಮಗಳೂರು ತಾಲ್ಲೂಕಿನ ಬಿಳೇಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಗೋಪಿಕೃಷ್ಣ ಹಾಗೂ ಉಪಾಧ್ಯಕ್ಷರಾಗಿ ಹೆಚ್.ಜಯಲಕ್ಷ್ಮಿ ಅವರು ಗುರುವಾರ ಆಯ್ಕೆಯಾಗಿದ್ದಾರೆ.


ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಜಗದೀಶ್ ಸ್ಪರ್ಧಿಸಿದ್ದು ಅಂತಿಮ ಹಂತದಲ್ಲಿ 9 ಮತಗಳನ್ನು ಬಿಜೆಪಿ ಬೆಂಬಲಿತ ಸದಸ್ಯ ಗೋಪಿಕೃಷ್ಣ ಪಡೆದುಕೊಂಡರು.


ಗ್ರಾ.ಪಂ.ನಲ್ಲಿ ಒಟ್ಟು 12 ಸದಸ್ಯರ ಪೈಕಿ ಬಿಜೆಪಿ ಬೆಂಬಲಿತ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದವರಿಗೆ 9 ಮತಗಳು, ಕಾಂಗ್ರೆಸ್ ಬೆಂಬಲಿತದಿಂದ ಸ್ಪರ್ಧಿಸಿದವರು 3 ಮತಗಳು ಪಡೆದುಕೊಂಡ ಹಿನ್ನೆಲೆಯಲ್ಲಿ ಚುನಾವಣಾ ಮೂಲಕ ಅಧ್ಯಕ್ಷರಾಗಿ ಗೋಪಿಕೃಷ್ಣ ಹಾಗೂ ಉಪಾಧ್ಯಕ್ಷರಾಗಿ ಹೆಚ್.ಜಯಲಕ್ಷ್ಮಿ ಅವರನ್ನು ಅವಿರೋಧವಾಗಿ ಚುನಾವಣಾಧಿಕಾರಿ ಚಂದ್ರಶೇಖರ್ ಆಯ್ಕೆಗೊಳಿಸುವ ಮೂಲಕ ಘೋಷಿಸಿದರು.


ಅಭಿನಂದನೆ ಸಲ್ಲಿಸಿ ಮಾತನಾಡಿದ ನಗರಸಭಾ ಮಾಜಿ ಸದಸ್ಯ ಪುಷ್ಪರಾಜ್, ಗ್ರಾಮದಲ್ಲಿ ಜಾತಿ, ತಾರತಮ್ಯ ವೆಸಗದೇ ಎಲ್ಲಾ ಸದಸ್ಯರ ಸಹಭಾಗತ್ವದಲ್ಲಿ ಕಾರ್ಯನಿರ್ವಹಿಸಬೇಕು. ಅಂಬೇಡ್ಕರ್ ಆಶಯದಂತೆ ಸರ್ವಧರ್ಮವರಿಗೆ ಸಮಾನಾಗಿ ಸರ್ಕಾರದ ಸೌಲಭ್ಯವನ್ನು ಹಂಚಿಕೆ ಮಾಡುವ ಮೂಲಕ ಮಾದರಿ ಗ್ರಾಮವನ್ನಾಗಿ ರೂಪಿಸಬೇಕು ಎಂದು ಸಲಹೆ ಮಾಡಿದರು.


ಅಧ್ಯಕ್ಷ ಗೋಪಿಕೃಷ್ಣ ಮಾತನಾಡಿ, ಪಂಚಾಯಿತಿ ವ್ಯಾಪ್ತಿಗೊಳಪಡುವ ಪ್ರತಿಯೊಂದು ಗ್ರಾಮಗಳಿಗೆ ಕುಡಿಯುವ ನೀರು, ಸುಗಮ ರಸ್ತೆ ಹಾಗೂ ಸರ್ಕಾರದ ಬಹುತೇಕ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸುವ ಮೂಲಕ ಜನಪರವಾಗಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.


ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ರವೀಂದ್ರ ಬೆಳವಾಡಿ, ಬಿಜೆಪಿ ಮಂಡಲ ಅಧ್ಯಕ್ಷ ಈಶ್ವರಳ್ಳಿ ಮಹೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜ್, ಓಬಿಸಿ ಮಂಡಲ ಅಧ್ಯಕ್ಷ ಚಂದ್ರಶೇಖರ್, ಅಕ್ರಮ-ಸಕ್ರಮ ಸಮಿತಿ ಮಾಜಿ ಅಧ್ಯಕ್ಷ ಬಿಳೇಕಲ್ಲಹಳ್ಳಿ ಪ್ರಕಾಶ್, ಗ್ರಾ.ಪಂ. ಸದಸ್ಯರಾದ ಬಿ.ಡಿ.ಜಗದೀಶ್, ಮಮತ, ಯು.ಸಿ. ಜಗದೀಶ್, ಹೆಚ್.ಕೆ.ನಾಗರತ್ನ, ಭಾನುಪ್ರಕಾಶ್, ಲೋಲಾಕ್ಷಿ, ಮಂಜುಳಾ, ಸಿ.ಸುಷ್ಮಾ, ಮಾದಯ್ಯ, ತಿಮ್ಮೇಗೌಡ, ಪಿಡಿಓ ಪಿ.ಲೀಲಾ ಹಾಗೂ ಗ್ರಾಮಸ್ಥರು ಹಾಜರಿದ್ದರು.

ಆವತಿ ಗ್ರಾ.ಪಂ. ನೂತನ‌ ಅಧ್ಯಕ್ಷ, ಉಪಾಧ್ಯಕ್ಷರು‌.


ಆವತಿ ಗ್ರಾಮ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ
ಚಿಕ್ಕಮಗಳೂರು‌ ತಾಲ್ಲೂಕಿನ ಆವತಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿ.ಎಂ.ಪವಿತ್ರ ಹಾಗೂ ಉಪಾಧ್ಯಕ್ಷರಾಗಿ ಸಿ.ಆಶಾ ಅವರು ಗುರುವಾರ ಆಯ್ಕೆಯಾಗಿದ್ದಾರೆ.


ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪವಿತ್ರ ಹೊರತುಪಡಿಸಿ ಬೇರ‍್ಯಾವ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲೇ ಇಬ್ಬರು ಸದಸ್ಯರು ಪೈಪೋಟಿ ನೀಡಿದ ಹಿನ್ನೆಲೆಯಲ್ಲಿ ಆಶಾ ಮತ್ತು ಜಯಾನಂದ ನಾಮಪತ್ರ ಸಲ್ಲಿಕೆಯಾಗಿತ್ತು.


ಗ್ರಾ.ಪಂ.ನಲ್ಲಿ ಒಟ್ಟು 7 ಸದಸ್ಯರ ಪೈಕಿ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯರಾದ ಆಶಾ ಅವರು 5 ಮತಗಳು ಹಾಗೂ ಜಯಾನಂದ 3 ಮತಗಳನ್ನು ಪಡೆದುಕೊಂಡ ಹಿನ್ನೆಲೆಯಲ್ಲಿ ಆವತಿ ಗ್ರಾ.ಪಂ. ಅಧ್ಯಕ್ಷರಾಗಿ ಬಿ.ಎಂ.ಪವಿತ್ರ ಹಾಗೂ ಉಪಾಧ್ಯಕ್ಷರಾಗಿ ಸಿ.ಆಶಾ ಅವರನ್ನು ಚುನಾವಣಾಧಿಕಾರಿ ಇ.ಇ.ಅಶೋಕ್ ಘೋಷಿಸಿದರು.


ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರುಗಳಾದ ಎಂ.ಎಲ್.ಬಸವರಾಜ್, ಜಯಾನಂದ್, ಹೆಚ್.ಆರ್. ಈರೇ ಶ್, ಶ್ರೀಮತಿ ಜಯಮ್ಮ, ಕು. ಎಸ್.ಲಕ್ಷ್ಮಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶೇಖರೇಶ್ ಹಾಜರಿದ್ದರು.


ಆಲ್ದೂರು ಗ್ರಾ.ಪಂ. ಅಧ್ಯಕ್ಷೆ ಜಯಶೀಲಾ, ಉಪಾಧ್ಯಕ್ಷರಾಗಿ ಅಶೋಕ್ ಆಯ್ಕೆ
ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜಯಶೀಲಾ ಚಿದಂಬರಂ ಹಾಗೂ ಉಪಾಧ್ಯಕ್ಷರಾಗಿ ಎರಡನೇ ಬಾರಿಗೆ ಡಿ.ಬಿ.ಅಶೋಕ್ ಅವರು ಇತ್ತೀಚೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಜಯಶೀಲಾ ಮತ್ತು ಅಶೋಕ್ ಹೊರತುಪಡಿಸಿ ಬೇರ‍್ಯಾವ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಮಧುಕುಮಾರ್ ಅವರು ಅವಿರೋಧ ಆಯ್ಕೆಯನ್ನು ಘೋಷಿಸಿದರು.


ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಪ್ರದೀಪ್, ಕೌಶಿಕ್, ಲಕ್ಷ್ಮಣ ಗೌಡ, ನವರಾಜ್, ಪಿಡಿಓ ಹಾಗೂ ಗ್ರಾಮಸ್ಥರು ಹಾಜರಿದ್ದರು.

Leave A Reply

Your email address will not be published.

error: Content is protected !!