ಕವಲೇದುರ್ಗ ಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿಸುವ ಸಂಕಲ್ಪ | ಸನಾತನ ಧರ್ಮಕ್ಕೆ ಶಕ್ತಿ ತುಂಬುವ ಕೆಲಸ ಮಠಗಳದಾಗಲಿ ; ಬಿವೈಆರ್

0 241

ರಿಪ್ಪನ್‌ಪೇಟೆ: ಧರ್ಮದ ಉಳುವಿಕೆಗೆ ಮಠಗಳು ಪ್ರಮುಖವಾಗಬೇಕು. ಕವಲೇರ್ದು ಕೋಟೆ ಮತ್ತು ಭುವನಗಿರಿ ಮಠ ಪೀಠವು ರಾಜ್ಯದಲ್ಲಿ ಉತ್ತಮ ಪ್ರೇಕ್ಷಣೀಯ ಯಾತ್ರಾ ಕ್ಷೇತ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಪುರಾತತ್ವ ಇಲಾಖೆಯಿಂದ ಹೆಚ್ಚಿನ ಅನುಧಾನವನ್ನು ತರುವ ಸಂಕಲ್ಪ ನನ್ನದಾಗಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು.

ತೀರ್ಥಹಳ್ಳಿ ತಾಲ್ಲೂಕಿನ ಕವಲೇದುರ್ಗ ಕೆಳದಿ ರಾಜಗುರು ಮಹಾಮಹತ್ತಿನ ಭುವನಗಿರಿ ಸಂಸ್ಥಾನ ಕವಲೇದುರ್ಗ ಮಠದ 2 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ಶ್ರೀ ಮರುಳಸಿದ್ದೇಶ್ವರ ಶಿವಯೋಗ ಮಂದಿರ ಮತ್ತು ಶ್ರೀವೀರಭದ್ರಸ್ವಾಮಿ ಹಾಗೂ ದುರ್ಗಾಂಬಿಕಾ ಅಷ್ಠಬಂಧ ಪ್ರಾಣ ಪ್ರತಿಷ್ಠೆ ಬ್ರಹ್ಮಕಲಶಾರೋಹಣ ಧರ್ಮ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಈಗಾಗಲೇ ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ಕೊಡಚಾದ್ರಿಯ ಅಭಿವೃದ್ದಿಗಾಗಿ ಅನುದಾನವನ್ನು ತರಲಾಗಿದ್ದು ರೋಪ್‌ವೇ ಕಾಮಗಾರಿಗೆ ಸಿದ್ದತೆ ನಡೆಯುತ್ತಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಬೈಂದೂರು ಬಳಿ ನೌಕಾಯಾನ ನಿರ್ಮಿಸುವ ಬಗ್ಗೆ ಚಿಂತನೆ ನಡೆಸಲಾಗಿದ್ದು ಇದರಿಂದಾಗಿ ಸಾಕಷ್ಟು ಪ್ರವಾಸಿಗರು ಬಂದು ಹೋಗಲು ಹೆಚ್ಚು ಅನುಕೂಲವಾಗುವುದರೊಂದಿಗೆ ಸಂಪರ್ಕ ವ್ಯವಸ್ಥೆ ಸುಧಾರಣೆಯಾಗುವುದೆಂದು ಹೇಳಿದರು.

ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಸಿದ್ದಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ವಹಿಸಿ ಆಶೀರ್ವಚನ ನೀಡಿ ಜಾತಿ ಧರ್ಮ ದೇಶದ ಸತ್ಪ್ರಜೆಗಳಲ್ಲಿ ಭಾರತೀಯ ಸಮಾನತೆ ಬರುವಂತಾಗಲಿ. ಮಠ ಪೀಠಗಳ ಪರಂಪರೆ ಇಂದಿನಿಂದಲ್ಲ ಪುರಾತನ ಕಾಲದಿಂದಲೂ ಇದೆ. ಮಠಗಳು ಆಧ್ಯಾತ್ಮಿಕ ಕೇಂದ್ರವಾಗಬೇಕು.
ರಾಜಾಶ್ರಯದ ಪರಂಪರೆಗೆ ಶಕ್ತಿ ಇದ್ದರೆ ಪ್ರಗತಿ ಹೊಂದಲು ಸಾಧ್ಯ. ಈ ಹಿಂದೆ ಕೆಳದಿ ಚೆನ್ನಮ್ಮ ಸಾಕಷ್ಟು ಕಷ್ಟ ಅನುಭವಿಸಿದರೂ ಕೂಡಾ ಧೃತಿಗೆಡದೆ 26 ವರ್ಷ ಕಾಲ ರಾಜಾಡಳಿತ ನಡೆಸಿದ ಕೀರ್ತಿ ಕೆಳದಿ ರಾಜರಿಗೆ ಸಲ್ಲುತ್ತದೆ. ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಧಾರ್ಮಿಕವಾಗಿ ಕೀರ್ತಿ ಕೆಳದಿ ಮನೆತನಕ್ಕೆ ಸಲ್ಲುತ್ತದೆಂದು ಹೇಳಿ ಈ ಹಿಂದಿನ ಲಿಂಗೈಕ್ಯ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯರ ಪುಣ್ಯ ಸ್ಮರಣೆ ಮತ್ತು ನೂತನ ಶ್ರೀಗಳ ಪಟ್ಟಾಧಿಕಾರ ಸಂದರ್ಭದಲ್ಲಿ ಶಾಸಕ ಆರಗ ಜ್ಞಾನೇಂದ್ರರವರು ಮಂತ್ರಿಯಾಗಲಿ ಎಂದು ಆಶೀರ್ವದಿಸಿದ ಫಲದಿಂದಾಗಿ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದರು. ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಂಸದ ಬಿ.ವೈ.ರಾಘವೇಂದ್ರರವರು ಗೆದ್ದು ಕೇಂದ್ರದಲ್ಲಿ ಸಚಿವರಾಗುತ್ತಾರೆಂದು ಆಶೀರ್ವದಿಸಿದರು.

ಕವಲೇದುರ್ಗ ಮಠದ ಮರುಳಸಿದ್ದಶಿವಾಚಾರ್ಯ ಸ್ವಾಮಿಗಳು ಮತ್ತು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಜಿ ಸಮ್ಮುಖ ವಹಿಸಿ ನುಡಿಸೇವೆ ನೀಡಿದರು.

ಶಾಸಕ ಆರಗ ಜ್ಞಾನೇಂದ್ರ ಸಮಾರಂಭದ ಆಧ್ಯಕ್ಷತೆ ವಹಿಸಿ ಮಾತನಾಡಿ, ಮಠದ ಸರ್ವಾಂಗೀಣ ಆಭಿವೃದ್ದಿಗೆ ಶ್ರಮಿಸುವುದಾಗಿ ಹೇಳಿ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಮೂರು ಲಿಂಗಾಯಿತ ಮಠಗಳು ಇದ್ದರೂ ಕೂಡಾ ಎಂದು ಜಾತಿ ಬೇದಭಾವನೆ ಮಾಡದೇ ಎಲ್ಲ ಸಮುದಾಯದವರನ್ನು ಸಾಮರಸ್ಯದಿಂದ ನೋಡಿ ಅವರ ಕಷ್ಟ ಕಾರ್ಪಣ್ಯಗಳಿಗೆ ಸದಾ ಸ್ಪಂದಿಸುವುದರೊಂದಿಗೆ ಆಶೀರ್ವದಿಸುವ ಮಠಗಳಾಗಿವೆ ಎಂದರು.

ಕವಲೇದುರ್ಗ ಮಠದ ಆಸ್ತಿ ವಿಚಾರದಲ್ಲಿ ಕಾನೂನಾತ್ಮಕ ಸಮಸ್ಯೆಗಳಿದ್ದರೂ ಕೂಡಾ ಅದನ್ನು ಬಗೆ ಹರಿಸುವ ನಿಟ್ಟಿನಲ್ಲಿ ಸ್ಪಂದಿಸಿ ಮುಕ್ತಗೊಳಿಸಿರುವುದಾಗಿ ವಿವರಿಸಿದರು.

ಕವಲೇದುರ್ಗ ಬಹು ಉದ್ದೇಶಿ ಸೌಹಾರ್ದ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ಕಟ್ಟೆಗದ್ದೆ ಹಾಲಪ್ಪಗೌಡರು, ಉದ್ಯಮಿ ಕೆ.ಆರ್.ಪ್ರಕಾಶ್, ಲತಾ ಕೆ.ಆರ್.ಪ್ರಕಾಶ್, ಗಿರೀಶ್ ಉಪ್ಪಾರ್, ಕುಕ್ಕೆ ಪ್ರಶಾಂತ, ಸಾಲೂರು ಗ್ರಾಮ ಪಂಚಾಯ್ತಿ ಅಧ್ಯಕ್ಷಯೆ ಎಂ.ಸಿ.ಮಂಜುಳಾ, ಉಪಾಧ್ಯಕ್ಷ ಕೆ.ಹೆಚ್. ಜಾತಪ್ಪ ಮತ್ತು ಸಾಲೂರು ಗ್ರಾಮ ಪಂಚಾಯ್ತಿಯ ಸದಸ್ಯರುಗಳು ಮತ್ತು ಗ್ರಾಮಸ್ಥರು, ರೆವಿನ್ಯೂ ಇನ್ಸ್‌ಪೆಕ್ಟರ್ ಸುಧೀರ್ ಇನ್ನಿತರರು ಪಾಲ್ಗೊಂಡಿದ್ದರು.

ತ್ಯಾರಂದೂರು ಮುರುಗೇಂದ್ರ ಸ್ವಾಗತಿಸಿದರು. ಪತ್ರಕರ್ತ ಆರ್.ಎಸ್.ಪ್ರಶಾಂತ ರಿಪ್ಪನ್‌ಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು.

Leave A Reply

Your email address will not be published.

error: Content is protected !!