ಒನಕೆ ಓಬವ್ವ ಸ್ತ್ರೀ ಪರವಾದ ಶಕ್ತಿ ಅಷ್ಟೇ ಅಲ್ಲ ಇಡೀ ಶೋಷಿತ ಸಮುದಾಯದ ಧೀಮಂತ ಮಹಿಳೆ

0 518

ಹೊಸನಗರ: ಶೂರತ್ವ ಹೊಂದಿದ ಒನಕೆ ಓಬವ್ವ ಕೇವಲ ಸ್ತ್ರೀ ಪರವಾದ ಶಕ್ತಿ ಅಷ್ಟೇ ಅಲ್ಲ ಇಡೀ ಶೋಷಿತ ಸಮುದಾಯದ ಧೀಮಂತ ಮಹಿಳೆ ಎಂದು ಹೊಸನಗರ ಗ್ರೇಡ್2ತಹಶೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋರವರು ಹೇಳಿದರು.

ತಾಲ್ಲೂಕು ಕಛೇರಿಯ ಆವರಣದಲ್ಲಿ ರಾಜ್ಯದ ಧೀಮಂತ ಮಹಿಳೆಯರಲ್ಲಿ ಒಂದಾಗಿರುವ ಒನಕೆ ಓಬವ್ವರವರ ಜಯಂತಿ ಆಚರಿಸಿ ಮಾತನಾಡಿದರು.
ತಳ ಸಮುದಾಯದ ಹೆಣ್ಣು ಮಗಳೊಬ್ಬರು ಚರಿತ್ರೆಯಲ್ಲಿ ತನ್ನಲ್ಲಿನ ಶೂರತ್ವದಿಂದ ವಿಶಿಷ್ಟ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ ಇಂತಹ ವ್ಯಕ್ತಿತ್ವ ಹೊಂದಿದ ಮಹಿಳೆ ಛಲವಾದಿ ಜನಾಂಗಕ್ಕೆ ಸೇರಿದವರು ಎನ್ನುವ ಸಿನಿಮಾ ನೋಡಿದ ನಂತರ ಗೊತ್ತಾಗಿದೆ. ಸಮಾಜದಲ್ಲಿ ಇಂತಹ ಸಾಧಕರನ್ನು ಜಾತಿಗೆ ಸೀಮಿತಗೊಳಿಸಬಾರದು ರಾಣಿ ಅಬ್ಬಕ್ಕ, ಕೆಳದಿ ಚನ್ನಮಾಜೀ, ಒನಕೆ ಓಬವ್ವ ಅವರು ವೈಯಕ್ತಿಕ ಬದುಕಿನ ಜೊತೆಗೆ ಶತ್ರುಗಳ ಜೊತೆಗೆ ಸೆಣಸಾಡಿ ತಮ್ಮ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಆದರ್ಶಪ್ರಾಯರಾಗಿದ್ದಾರೆ ಎಂದರು.

ಈ ಜಯಂತಿ ಸಂದರ್ಭದಲ್ಲಿ ತಾಲ್ಲೂಕು ಕಛೇರಿಯ ಪ್ರಥಮ ದರ್ಜೆ ಗುಮಾಸ್ಥರಾದ ಚಿರಾಗ್, ರೆವಿನ್ಯೊ ಇನ್ಸ್‌ಪೆಕ್ಟರ್ ರೇಣುಕಯ್ಯ, ಕಛೇರಿ ಸಿಬ್ಬಂದಿ ಸತೀಶ್ ಚುನಾವಣೆ ಶಿರಾಸ್ಥೆದಾರ್ ಸತೀಶ್, ಗ್ರಾಮ ಆಡಳಿತಾಧಿಕಾರಿ ಬಸವರಾಜ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!